ಒಂದೇ ಮಂಟಪದಲ್ಲಿ, ಏಕಕಾಲಕ್ಕೆ ತಾಯಿ-ಮಗಳ ಮದುವೆ

December 11, 2020

 


ಲಖನೌ: ಉತ್ತರಪ್ರದೇಶದ ಗೋರಖ್ಪುರದಲ್ಲಿ ಅಪರೂಪದ, ಯಾರೂ ಊಹೆಯನ್ನೂ ಮಾಡದ ಘಟನೆಯೊಂದು ನಡೆದಿದೆ. ಒಂದೇ ಮಂಟಪದಲ್ಲಿ ತಾಯಿ ಮತ್ತು ಮಗಳು ಮದುವೆ ಮಾಡಿಕೊಂಡಿದ್ದಾರೆ.

ಗೋರಖ್ಪುರದ ಪಿಪ್ರೌಲಿ ಬ್ಲಾಕ್​​ನಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಅಡಿಯಲ್ಲಿ 63 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭ ನಡೆದಿದೆ. ಈ ವೇಳೆ 53 ವರ್ಷದ ಮಹಿಳೆ ಹಾಗೂ ಆಕೆಯ 27 ವರ್ಷದ ಪುತ್ರಿ ಒಂದೇ ಸಮಯಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಧವೆ ಮಹಿಳೆ ತನ್ನ ಗಂಡನ ಕಿರಿಯ ಸಹೋದರನನ್ನು ಮದುವೆಯಾಗಿದ್ದಾರೆ. ಇದೇ ಸಮಾರಂಭದಲ್ಲಿ ಅವರ ಪುತ್ರಿಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಅಂತ ವರದಿಯಾಗಿದೆ.


Related Articles

Advertisement
Previous
Next Post »