ಬೆಂಗಳೂರು : ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಸಾರಿಗೆ ನೌಕರರು ಮೃತಪಟ್ಟರೆ ಅಂತಹ ಪ್ರಕರಣವನ್ನು ಅಪಘಾತವೆಂದು ಪರಿಗಣಿಸಬೇಕೆಂದು ಹೈಕೋರ್ಟ್ ಕಲಬುರಗಿ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.
ಎನ್ಇಕೆಆರ್ಟಿಸಿ ಚಾಲಕ ವಿಜಯಕುಮಾರ್ ಸತತ 11 ಗಂಟೆ ಕರ್ತವ್ಯ ನಿರ್ವಹಣೆ ಮಾಡಿದ್ದರು. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಹೃದಯಾಘಾತ ಕೂಡ ಅಪಘಾತವೆಂದು ಪರಿಗಣಿಸಿ 21,98,090 ರೂಪಾಯಿ ಪರಿಹಾರಕ್ಕೆ ಕಾರ್ಮಿಕ ಆಯುಕ್ತರು ಆದೇಶಿಸಿದ್ದರು. ಈ ಬಗ್ಗೆ ಎನ್ಇಕೆಆರ್ಟಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ಸುನಿಲ್ ದತ್ ಯಾದವ್, ಪಿ.ಎನ್. ದೇಸಾಯಿರವರಿದ್ದ ಪೀಠ ವಜಾಗೊಳಿಸಿತು.
ಸಾರಿಗೆ ನೌಕರರು ಕರ್ತವ್ಯದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದರೆ ಅದನ್ನು ಅಪಘಾತವೆಂದು ಪರಿಗಣಿಸಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
EmoticonEmoticon