ಕೈಲಾಸಕ್ಕೆ ಕಾಸಿಲ್ಲದೆ ವೀಸಾ ತೆಗೆದುಕೊಂಡು ಬನ್ನಿ! ಭಕ್ತರಿಗೆ ಚಳಿಗಾಲದ ಆಫರ್​ ನೀಡಿದ ನಿತ್ಯಾನಂದ ಸ್ವಾಮಿ!

December 17, 2020
Thursday, December 17, 2020

 


ಬೆಂಗಳೂರು: ವಿವಾದಿತ ಸ್ವಾಮಿ ನಿತ್ಯಾನಂದ ಕೈಲಾಸ ದೇಶವನ್ನು ನಿರ್ಮಿಸಿಕೊಂಡಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ತನ್ನದೇ ಆದ ಹೊಸ ಪ್ರಪಂಚವನ್ನೇ ಸೃಷ್ಟಿಸಿಕೊಂಡಿರುವ ನಿತ್ಯಾನಂದ ಇದೀಗ ತನ್ನ ಪ್ರಪಂಚಕ್ಕೆ ಬರುವಂತೆ ಭಕ್ತಾದಿಗಳಿಗೆ ಕರೆ ನೀಡಿದ್ದಾನೆ.

ಫೇಸ್​ಬುಕ್​ನಲ್ಲಿ ಉಪನ್ಯಾಸ, ಸತ್ಸಂಗದ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುವ ನಿತ್ಯಾನಂದ ಇದೀಗ ಅದೇ ವಿಡಿಯೋ ಮೂಲಕ ಭಕ್ತರಿಗೆ ತನ್ನ ದೇಶಕ್ಕೆ ಬರಲು ಕರೆ ನೀಡಿದ್ದಾನೆ. ಆಸ್ಪ್ರೇಲಿಯಾಕ್ಕೆ ವೀಸಾ ತೆಗೆದುಕೊಂಡು ಬನ್ನಿ. ಅಲ್ಲಿಂದ ನಮ್ಮ ಪ್ರೈವೇಟ್​ ಚಾರ್ಟೆಟ್​ ಪ್ಲೇನ್​ನಲ್ಲಿ ನಿಮ್ಮನ್ನು ಕೈಲಾಸಕ್ಕೆ ಕರೆದುಕೊಂಡು ಬರಲಾಗುವುದು ಎಂದು ಆತ ಹೇಳಿದ್ದಾನೆ. ಇದರ ಜತೆ ನಮ್ಮ ಕೈಲಾಸಕ್ಕೆ ಬರಲು ವೀಸಾಕ್ಕೆ ಯಾವುದೇ ಶುಲ್ಕವಿಲ್ಲ ಎಂದೂ ಆತ ಹೇಳಿದ್ದಾನೆ.


ಭಾರತದಿಂದ ಪರಾರಿಯಾಗಿ ಕೈಲಾಸ ನಿರ್ಮಿಸಿಕೊಂಡಿರುವ ನಿತ್ಯಾನಂತ ಹಲವಾರು ವಿಚಾರಗಳ ವಿವಾದದಲ್ಲಿ ಸಿಲುಕಿಕೊಂಡಿದ್ದಾನೆ.

ಕಳೆದ ಆಗಸ್ಟ್​ನಲ್ಲಿ ತನ್ನದೇ ಆದ ರಿಸರ್ವ್​ ಬ್ಯಾಂಕ್​ನ್ನು ತೆರೆದಿರುವುದಾಗಿಯೂ ಆತ ಹೇಳಿಕೊಂಡಿದ್ದ. (ಏಜೆನ್ಸೀಸ್​)

Thanks for reading ಕೈಲಾಸಕ್ಕೆ ಕಾಸಿಲ್ಲದೆ ವೀಸಾ ತೆಗೆದುಕೊಂಡು ಬನ್ನಿ! ಭಕ್ತರಿಗೆ ಚಳಿಗಾಲದ ಆಫರ್​ ನೀಡಿದ ನಿತ್ಯಾನಂದ ಸ್ವಾಮಿ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಕೈಲಾಸಕ್ಕೆ ಕಾಸಿಲ್ಲದೆ ವೀಸಾ ತೆಗೆದುಕೊಂಡು ಬನ್ನಿ! ಭಕ್ತರಿಗೆ ಚಳಿಗಾಲದ ಆಫರ್​ ನೀಡಿದ ನಿತ್ಯಾನಂದ ಸ್ವಾಮಿ!

Post a Comment