ಸ್ಪೆಷಲ್ ಡೆಸ್ಕ್ : ಹಲವರಿಗೆ ಬೆಳಗ್ಗೆ ಎದ್ದ ತಕ್ಷಣ ಬಿಸಿನೀರು ಕುಡಿಯುವ ಅಭ್ಯಾಸವಿರುತ್ತದೆ, ನಿಜಕ್ಕೂ ಇದು ಉತ್ತಮ ಅಭ್ಯಾಸ..ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಬಿಸಿನೀರು ಕುಡಿಯುವುದರಿಂದ ದೇಹಕ್ಕೆ ಬಹಳಷ್ಟು ಪ್ರಯೋಜನವಿದೆ. ಬಿಸಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ.
ಬಿಸಿನೀರು ಕುಡಿಯುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳು
1) ಬೆಳಗ್ಗೆ ಎದ್ದು ಬಿಸಿನೀರು ಕುಡಿಯುವುದರಿಂದ ಶೀತದ ಸಮಸ್ಯೆ ದೂರವಾಗುತ್ತದೆ.
2) ಬೆಳಗ್ಗೆ ಬಿಸಿನೀರು ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.
3) ತಣ್ಣೀರಿಗಿಂತ ಬಿಸಿನೀರು ಜಾಸ್ತಿ ಹೊಟ್ಟೆಯಲ್ಲಿರುತ್ತದೆ. ಇದರಿಂದ ಹಸಿವು ಕಡಿಮೆಯಾಗುತ್ತದೆ, ಉತ್ತಮ ಜೀರ್ಣ ಕ್ರಿಯೆಗೆ ಸಹಕಾರಿಯಾಗುತ್ತದೆ.
4) ದೇಹದಲ್ಲಿರುವ ಕೊಬ್ಬಿನ ಕೋಶಗಳನ್ನು ಕರಗಿಸಲು ಸಹಕಾರಿಯಾಗಿದೆ.
5) ಬೆಳಗ್ಗೆ ಬಿಸಿನೀರು ಕುಡಿಯುವುದರಿಂದ ನೋಯುತ್ತಿರುವ ಗಂಟಲು ಸರಿಯಾಗುತ್ತದೆ.
6) ಬೆಳಗ್ಗೆ ಬಿಸಿನೀರು ಕುಡಿಯುವುದರಿಂದ ಅಲರ್ಜಿಯಂತಹ ಸಮಸ್ಯೆ ಕಡಿಮೆಯಾಗುತ್ತದೆ
7) ಬೆಳಗ್ಗೆ ಬಿಸಿನೀರು ಕುಡಿಯುವುದರಿಂದ ನರಮಂಡಲ ಸಕ್ರಿಯಗೊಳಿಸಿ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
EmoticonEmoticon