ಶುಂಠಿ, ಪುದೀನ, ತುಳಸಿ ಬಳಸಿ ಮೈಗ್ರೇನ್‌ ತಲೆನೋವಿಗೆ ಹೇಗೆ ಪರಿಹಾರ ಕಾಣಬಹುದು? ಇಲ್ಲಿದೆ ಮಾಹಿತಿ

December 21, 2020
Monday, December 21, 2020

 


ತುಳಸಿ, ಶುಂಠಿ ಮತ್ತು ಪುದೀನ ಈ ಮೂರು ಆಹಾರ ಪದಾರ್ಥಗಳು, ಅತ್ಯಂತ ಪರಿಣಾಮಕಾರಿ ಔಷಧಿಗಳೆಂದು ಆಯುರ್ವೇದಲ್ಲೇ ತಿಳಿಸಿದೆ. ಏಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಮೃದ್ಧವಾಗಿದೆ. ಇದರಿಂದ ಸೋಂಕಗಳನ್ನು ತಡೆಗಟ್ಟಬಹುದು. ತುಳಸಿ, ಶುಂಠಿ ಮತ್ತು ಪುದೀನನ್ನು ಅನೇಕ ದೈಹಿಕ ಸಮಸ್ಯೆಗಳನ್ನು ಗುಣಪಡಿಸಲು ಬಳಸಬಹುದು. ಹಾಗಿದ್ರೆ ಇದರ ಪ್ರಯೋಜನಗಳು ಮತ್ತು ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ.

ಶೀತ ಜ್ವರ: ಹವಾಮಾನದಲ್ಲಿನ ಬದಲಾವಣೆಯಿಂದಾಗಿ, ಶೀತ ಉಂಟಾಗುವುದು ಸಾಮಾನ್ಯ. ಇದನ್ನು ತೊಡೆದುಹಾಕಲು ಶುಂಠಿ, ತುಳಸಿ ಮತ್ತು ಪುದೀನ ಕಷಾಯ ಪ್ರಯೋಜನಕಾರಿಯಾಗಿದೆ. ತುಳಸಿ ಎಲೆಗಳಿಂದ ಮಾಡಿದ ಕಷಾಯದಲ್ಲಿ ಒಂದು ಚಿಟಿಕೆ ಕಲ್ಲು ಉಪ್ಪನ್ನು ಬೆರೆಸಿ, ಕುಡಿಯುವುದರಿಂದ ಬೇಗನೆ ಶೀತ ಗುಣವಾಗುತ್ತದೆ.

ಮೈಗ್ರೇನ್ ತಲೆನೋವು: ಮೈಗ್ರೇನ್ ಸಮಸ್ಯೆ ಕಾಣಿಸಿಕೊಂಡರೆ ಹೇಳತೀರದ ಸಂಕಟ ಎದುರಾಗುತ್ತದೆ.

ಇಂತಹ ಸಮಯದಲ್ಲಿ ನಿಯಮಿತವಾಗಿ ಶುಂಠಿ, ತುಳಸಿ ಮತ್ತು ಪುದೀನ ಕಷಾಯ ಕುಡಿಯುವುದು ಉತ್ತಮ. ಇದಲ್ಲದೆ, ತುಳಸಿಯ 6-7 ಎಲೆಗಳನ್ನು ದಿನಕ್ಕೆ 4 ರಿಂದ 5 ಬಾರಿ ಅಗಿಯುವುದರಿಂದ ಮೈಗ್ರೇನ್ ಸಮಸ್ಯೆಯಲ್ಲಿ ಪರಿಹಾರ ಸಿಗುತ್ತದೆ. ದೇಹದ ಸ್ನಾಯುಗಳನ್ನು ಸಡಿಲಗೊಳಿಸಲು ಶುಂಠಿ, ತುಳಸಿ ಮತ್ತು ಪುದೀನ ಸಹ ಪರಿಣಾಮಕಾರಿ.

ಕಾಂತಿಯುತ ತ್ವಚೆ: ತುಳಸಿಯನ್ನು ಸೌಂದರ್ಯವರ್ಧಕವಾಗಿಯೂ ಸಹ ಬಳಸಬಹುದು. ಇದಕ್ಕಾಗಿ ನೀವು ತುಳಸಿ ಎಲೆಗಳ ರಸವನ್ನು ತೆಗೆದು, ನಂತರ ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ. ಈ ಮಿಶ್ರಣವನ್ನು ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ. ತುಳಸಿಯಲ್ಲಿ ಆಂಟಿ-ಆಕ್ಸಿಡೆಂಟ್ ಸಮೃದ್ಧವಾಗಿದೆ, ಇದು ಚರ್ಮದ ಆರೋಗ್ಯವನ್ನು ಸುಧಾರಿಸಿ ಕಾಂತಿಯುತವನ್ನಾಗಿಸುತ್ತದೆ.

ಜೀರ್ಣಕ್ರಿಯೆ ಸಮಸ್ಯೆ: ಮಹಿಳೆಯರ ಋತುಚಕ್ರದ ವೇಳೆ ಜೀರ್ಣಕ್ರಿಯೆಯ ಸಮಸ್ಯೆ ಕಂಡು ಬರುತ್ತದೆ. ಈ ಸಂದರ್ಭದಲ್ಲಿ, ಪುದೀನಾವು ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಇದು ಆಯಾಸವನ್ನು ತೆಗೆದುಹಾಕುತ್ತದೆ.


ಹೃದ್ರೋಗ: ಕೊಲೆಸ್ಟ್ರಾಲ್ ಹೆಚ್ಚಾದವರು ಪ್ರತಿದಿನ ತುಳಸಿ ರಸವನ್ನು ಸೇವಿಸಬೇಕು. ತುಳಸಿ ಮತ್ತು ಅರಿಶಿನ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಕೂಡಿದ್ದು ರಕ್ತವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯದ ಆರೋಗ್ಯ ಸುಧಾರಿಸುತ್ತದೆ.

ಖಿನ್ನತೆ ನಿವಾರಣೆ: ತುಳಸಿಯನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ. ಏಕೆಂದರೆ ಇದರಲ್ಲಿರುವ ಆಂಟಿ-ಬಯೋಟಿಕ್ ಗುಣಲಕ್ಷಣಗಳು ಹಲವು ರೀತಿಯಲ್ಲಿ ಪ್ರಯೋಜನಕಾರಿ. ಮುಖ್ಯವಾಗಿ ಖಿನ್ನತೆ ದೂರ ಮಾಡಲು. ಹೌದು, ತುಳಸಿ ಚಹಾ ತಯಾರಿಸಲು, ತುಳಸಿ ಎಲೆಗಳು, ಶುಂಠಿ ಮತ್ತು ಕರಿಮೆಣಸು ಬಳಸಿ. ಬಿಸಿ ತುಳಸಿ ಚಹಾ ಕುಡಿಯುವುದರಿಂದ ನರಮಂಡಲಕ್ಕೆ ಪರಿಹಾರ ಸಿಗುತ್ತದೆ. ಹಾಗೆಯೇ ಇದು ಖಿನ್ನತೆಯನ್ನು ನಿವಾರಿಸುತ್ತದೆ.

Thanks for reading ಶುಂಠಿ, ಪುದೀನ, ತುಳಸಿ ಬಳಸಿ ಮೈಗ್ರೇನ್‌ ತಲೆನೋವಿಗೆ ಹೇಗೆ ಪರಿಹಾರ ಕಾಣಬಹುದು? ಇಲ್ಲಿದೆ ಮಾಹಿತಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಶುಂಠಿ, ಪುದೀನ, ತುಳಸಿ ಬಳಸಿ ಮೈಗ್ರೇನ್‌ ತಲೆನೋವಿಗೆ ಹೇಗೆ ಪರಿಹಾರ ಕಾಣಬಹುದು? ಇಲ್ಲಿದೆ ಮಾಹಿತಿ

Post a Comment