'ಈ ಬಲ್ಬ್​ ನಿಮ್ಮ ಬದುಕನ್ನೇ ಬದಲಾಯಿಸುತ್ತೆ' ಬಲ್ಬ್​ ಕೊಳ್ಳುವ ಮುನ್ನ ಎಚ್ಚರ!

December 07, 2020
Monday, December 7, 2020

 


ಬರೇಲಿ: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುತ್ತಾರೆ. ಇಲ್ಲೊಬ್ಬ ವ್ಯಕ್ತಿ ಮೋಸ ಹೋದ ಬಗೆ ಕೇಳಿದರೆ ನಿಮಗೆ ಆಶ್ಚರ್ಯವಾಗದೆ ಇರಲಾರದು. ವ್ಯಾಪಾರಿಯೊಬ್ಬ ಬರೀ ಒಂದು ಬಲ್ಬ್​ಗೆ 9 ಲಕ್ಷ ರೂಪಾಯಿ ಕೊಟ್ಟು ಮೋಸ ಹೋಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಬಲೇರಿಯ ನಿತೇಶ್​ ಮಲ್ಹೋತ್ರಾ ಒಬ್ಬ ವ್ಯಾಪಾರಿ. ಲಾಕ್​ಡೌನ್​ ಸಮಯದಲ್ಲಿ ನಷ್ಟ ಕಂಡ ಆತ ಇತ್ತೀಚೆಗೆ ಬೇಸರದಿಂದಲೇ ಇರುತ್ತಿದ್ದ. ಕಳೆದ ಕೆಲವು ದಿನದಿಂದ ವ್ಯಾಪಾರ ಚೆನ್ನಾಗಾಗುತ್ತಿದೆಯೆಂದು ಸ್ವಲ್ಪ ಸಂತಸದಲ್ಲಿದ್ದ.

ಹಾಗಿದ್ದಾಗ ಆತನಿಗೆ ಒಂದು ಕರೆ ಬಂದಿದೆ. ನಾವು ಒಂದು ಸಂಸ್ಥೆಯವರು, ನೀವು ಕರಾಮತಿ ಬಲ್ಬ್​ ಖರೀದಿಸಿ, ನಿಮ್ಮ ಅದೃಷ್ಟ ಬದಲಾಗುತ್ತದೆ ಎಂದು ಫೋನಿನಲ್ಲಿ ಮಾತನಾಡಿದ ವ್ಯಕ್ತಿ ಹೇಳಿದ್ದಾನೆ.

ಮೊದಲಿಗೆ ನಿತೇಶ್​ ಆತನ ಮಾತನ್ನು ನಂಬಲಿಲ್ಲವಾದರೂ ಕೊನೆ ಕೊನೆಗೆ ನಂಬಿಕೆ ಹುಟ್ಟಿದೆ. ಅದೃಷ್ಟ ಬದಲಾಗಬಹುದಲ್ಲವೇ ಎನ್ನುವ ಆಸೆ ಹುಟ್ಟಿದೆ. ಅದರಂತೆ ಆತ ಕರಾಮತಿ ಬಲ್ಬ್​ನ್ನು 9 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದಾನೆ. ಅಯಸ್ಕಾಂತಗಳನ್ನು ಬಳಸಿ ಮಾಡಲಾಗಿದ್ದ ಆ ಬಲ್ಬ್​ ಕೆಲವು ವಿಶೇಷ ಗುಣಗಳನ್ನು ಹೊಂದಿದ್ದರಿಂದ ಅದನ್ನು ಆತ ನಂಬಿದ್ದಾನೆ ಕೂಡ.

ಆದರೆ ಬರುಬರುತ್ತ ಬಲ್ಬ್​ನ ನಿಜಾಂಶ ನಿತೇಶ್​ಗೆ ಗೊತ್ತಾಗಿದೆ. ಇದು ಒಂದು ಮಾಮೂಲಿ ಬಲ್ಬ್ ಎನ್ನುವುದು ಅರಿವಿಗೆ ಬಂದ ನಂತರ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ. ಈತನಿಗೆ ಬಂದ ಕರೆಯ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ಚುಟ್ಕನ್ ಖಾನ್, ಮಸೂಮ್ ಖಾನ್ ಮತ್ತು ಇರ್ಫಾನ್ ಖಾನ್ ಹೆಸರಿನ ಮೂರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


Thanks for reading 'ಈ ಬಲ್ಬ್​ ನಿಮ್ಮ ಬದುಕನ್ನೇ ಬದಲಾಯಿಸುತ್ತೆ' ಬಲ್ಬ್​ ಕೊಳ್ಳುವ ಮುನ್ನ ಎಚ್ಚರ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on 'ಈ ಬಲ್ಬ್​ ನಿಮ್ಮ ಬದುಕನ್ನೇ ಬದಲಾಯಿಸುತ್ತೆ' ಬಲ್ಬ್​ ಕೊಳ್ಳುವ ಮುನ್ನ ಎಚ್ಚರ!

Post a Comment