ಬೆಂಗಳೂರು : ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಘೋಷಿಸಿದ್ದ 57 ಸಾವಿರ ರೈತರ ಸಾಲಮನ್ನಾ ಭಾಗ್ಯ ದೊರೆತಿದೆ.
ಸಾಲಮನ್ನಾಕ್ಕೆ 2 ವರ್ಷಗಳಲ್ಲಿ 3 ಬಾರಿ ದಾಖಲಾತಿ ಪರಿಶೀಲನೆಯ ಅನಂತರ ಅವರು ಸಾಲ ಮನ್ನಾಕ್ಕೆ ಅರ್ಹರಾಗಿದ್ದು, ಸಹಕಾರ ಸಂಘಗಳಿಂದ ಪಡೆದಿದ್ದ ರೈತರ ಸಾಲ ಮನ್ನಾ ಆಗಲಿದೆ. ಇನ್ನೂ 60 ಸಾವಿರ ರೈತರು ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದು, ದಾಖಲೆ ಪರಿಶೀಲನೆ ನಡೆಯುತ್ತಿದೆ. ಜನವರಿಗೆ ವೇಳೆಗೆ ಅಂತಿಮ ಪಟ್ಟಿ ಸಿದ್ಧಪಡಿಸಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಹಕಾರ ಇಲಾಖೆ ಸಿದ್ಧತೆ ನಡೆಸಿದೆ.
ಇದುವರೆಗೆ 16.49 ಲಕ್ಷ ರೈತರಿಗೆ ಸಾಲಮನ್ನಾ ನೆರವು ದೊರೆತಿದ್ದು, 57 ಸಾವಿರ ರೈತರಿಗೆ ಸಾಲ ಮನ್ನಾ ಯೋಜನೆಯ ಲಾಭ ಸಿಕ್ಕಿರಲಿಲ್ಲ. ಮೂರು ಹಂತಗಳಲ್ಲಿ ದಾಖಲಾತಿ ಪರಿಶೀಲನೆ ನಡೆಸಿದ ನಂತರ ಅವರೆಲ್ಲರೂ ಸಾಲ ಮನ್ನಾಕ್ಕೆ ಅರ್ಹತೆ ಪಡೆದಿದ್ದಾರೆ.
295.15 ಕೋಟಿ ರೂ. ಬಿಡುಗಡೆಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆಯಲಾಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
EmoticonEmoticon