ಬ್ರಿಟನ್ ವೈರಸ್‌ ಮಧ್ಯೆ ರಾಜ್ಯದಲ್ಲಿ ಕೊರೋನಾ ಸೊಂಕಿತರ ಅಂಕಿ-ಸಂಖ್ಯೆ ಇಲ್ಲಿದೆ

December 26, 2020
Saturday, December 26, 2020

 


ಬೆಂಗಳೂರು, (ಡಿ.25): ರಾಜ್ಯದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದು, ಶುಕ್ರವಾರ 1005 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 9,14,488ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಐವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,044ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್‌ನಲ್ಲಿ ಮೆಡಿಕಲ್ ಸ್ಟೋರ್‌ನಲ್ಲೂ ಕೊರೋನಾ ಲಸಿಕೆ ಲಭ್ಯ..?

ಇನ್ನು ಬೆಂಗಳೂರಿನಲ್ಲಿ 578 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ನಗರದಲ್ಲಿ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ

ರಾಜ್ಯದಲ್ಲಿ ಶುಕ್ರವಾರ 1102 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 8,88,917ಕ್ಕೆ ಏರಿಕೆಯಾಗಿದೆ. ಇನ್ನು 13,508 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 208 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Thanks for reading ಬ್ರಿಟನ್ ವೈರಸ್‌ ಮಧ್ಯೆ ರಾಜ್ಯದಲ್ಲಿ ಕೊರೋನಾ ಸೊಂಕಿತರ ಅಂಕಿ-ಸಂಖ್ಯೆ ಇಲ್ಲಿದೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಬ್ರಿಟನ್ ವೈರಸ್‌ ಮಧ್ಯೆ ರಾಜ್ಯದಲ್ಲಿ ಕೊರೋನಾ ಸೊಂಕಿತರ ಅಂಕಿ-ಸಂಖ್ಯೆ ಇಲ್ಲಿದೆ

Post a Comment