ಮಧ್ಯಾಹ್ನದಿಂದ ರಾಜ್ಯಾದ್ಯಂತ ಬಸ್ ಸಂಚಾರ ಆರಂಭ

December 13, 2020

 


ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಕಳೆದ 3 ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾರಿಗೆ ನೌಕರರು ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಪ್ರತಿಭಟನೆ ಹಿಂಪಡೆಯಲು ಮುಂದಾಗಿದ್ದಾರೆ. ಈ ಬಗ್ಗೆ ಅಂತಿಮ ಘೋಷಣೆ ಬಾಕಿ ಇದೆ. ಈ ಹಿನ್ನೆಲೆ ಮಧ್ಯಾಹ್ನದ ವೇಳೆಗೆ ಬಿಎಂಟಿಸಿ, ಕೆಎಸ್‌ಆರ್​​​ಟಿಸಿ, ವಾಯುವ್ಯ, ಈಶಾನ್ಯ ಸಾರಿಗೆ ನಿಗಮಗಳ ಬಸ್ ಸಂಚಾರ ಪೂರ್ಣಪ್ರಮಾಣದಲ್ಲಿ ಆರಂಭವಾಗುವ ನಿರೀಕ್ಷೆ ಇದೆ.

ನಿನ್ನೆ ತಡರಾತ್ರಿ ನೌಕರ ಒಕ್ಕೂಟದ ಮುಖಂಡರೊಂದಿಗೆ ಕೋಡಿಹಳ್ಳಿ ಚಂದ್ರಶೇಖರ್ ಮಹತ್ವದ ಸಭೆ ನಡೆಸಿದ್ದರು. ಈ ವೇಳೆ ಜನರು ಎದುರಿಸುತ್ತಿರೋ ಸಮಸ್ಯೆ ಬಗ್ಗೆ ಗಮನಹರಿಸಿ ಮುಷ್ಕರ ಹಿಂಪಡೆಯಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಸರ್ಕಾರದೊಂದಿಗಿನ ಸಭೆಯ ಸಂದರ್ಭದಲ್ಲಿ ಒಂದು ಬೇಡಿಕೆ ಹೊರತುಪಡಿಸಿ ಉಳಿದ ಎಲ್ಲಾ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಈಗ ಕೊರೊನಾ ಇರುವುದರಿಂದ ಸರ್ಕಾರದ ಮೇಲೆ ಒತ್ತಡ ಹಾಕುವುದು ಬೇಡ.ಸರ್ಕಾರದ ಭರವಸೆ ಸಮಾಧಾನಕರವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತಷ್ಟು ಚಿಂತನೆ ನಡೆಸಿ ಸರ್ಕಾರದ ವಿರುದ್ಧ ಹೋರಾಟ ಮಾಡುವ ಬಗ್ಗೆ ಎಲ್ಲಾ ನಾಯಕರು ತೀರ್ಮಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇತ್ತ ಬೆಂಗಳೂರಿನ ಯಲಹಂಕದಲ್ಲಿ ನೌಕರರ ಮನವೊಲಿಸುವಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಯಶಸ್ವಿಯಾಗಿದ್ದು, ಯಲಹಂಕ ಪುಟ್ಟೇನಹಳ್ಳಿಯ ಎರಡು ಡಿಪೋಗಳಿಂದ ಬಿಎಂಟಿಸಿ ಬಸ್​​​​ಗಳು ಸಂಚಾರ ಆರಂಭಿಸಿದೆ. ಯಶವಂತಪುರ ಮತ್ತು‌ ಮೆಜೆಸ್ಟಿಕ್​​ನತ್ತ 10ಕ್ಕೂ ಹೆಚ್ಚು ಬಸ್​​​​ಗಳು ತೆರಳಿವೆ. ಮೆಜೆಸ್ಟಿಕ್​​ನಲ್ಲೂ 3 ಬಸ್​​ಗಳು ಸಂಚಾರ ಆರಂಭಿಸಿವೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಸ್​ ಸಂಚಾರ ಆರಂಭಿಸಲು ಸಾರಿಗೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಹುಬ್ಬಳ್ಳಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಸ್​​ ಸಂಚಾರ ಆರಂಭವಾಗಿದ್ದು, ಕೆಎಸ್​​ಆರ್​ಟಿಸಿ ಬಸ್​​ಗಳು ರಸ್ತೆಗೆ ಇಳಿದಿವೆ. ಬೆಳಗಾವಿಯಲ್ಲೂ ಸಾರಿಗೆ ನೌಕರರು ಮುಷ್ಕರ ವಾಪಸ್​ ಪಡೆದಿದ್ದಾರೆ.Related Articles

Advertisement
Previous
Next Post »