ಒಂದು ದೇಶ, ಒಂದು ಚುನಾವಣೆಗಾಗಿ ಬಿಜೆಪಿ ಶೀಘ್ರದಲ್ಲೇ ವೆಬಿನಾರ್‌

December 26, 2020
Saturday, December 26, 2020

 


ನವದೆಹಲಿ(ಡಿ.27): ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿರುವ 'ಒಂದು ದೇಶ, ಒಂದು ಚುನಾವಣೆ' ಪರಿಕಲ್ಪನೆಗೆ ಜನಬೆಂಬಲವನ್ನು ಸಂಗ್ರಹಿಸುವ ನಿಟ್ಟಿನಿಂದ ಮುಂದಿನ ಕೆಲವು ದಿನಗಳಲ್ಲಿ ಬಿಜೆಪಿ ದೇಶದೆಲ್ಲೆಡೆ 25 ವರ್ಚುವಲ್‌ ಕಾರ್ಯಕ್ರಮ (ವೆಬಿನಾರ್‌)ಗಳನ್ನು ಆಯೋಜಿಸಲು ಉದ್ದೇಶಿಸಿದೆ.

ಈ ವೆಬಿನಾರ್‌ಗಳಲ್ಲಿ ಪಕ್ಷದ ಹಿರಿಯ ಮುಖಂಡರು ಹಾಗೂ ತಜ್ಞರು ಭಾಗಿ ಆಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಮೋದಿ ಅವರು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಕುರಿತು ಪ್ರತಿಪಾದಿಸಿಕೊಂಡು ಬಂದಿದ್ದಾರೆ.

ರೂಪಾಂತರಗೊಂಡ ವೈರಸ್‌ ಭಾರತದಲ್ಲಿ ಮಾರ್ಚ್‌ನಲ್ಲೇ ಇತ್ತು: ಜೀನೋಮಿಕ್ಸ್

ಇತ್ತೀಚೆಗೆ ನಡೆದ ಚುನಾವಣಾ ಆಧಿಕಾರಿಗಳ ಸಮಾವೇಶದ ವೇಳೆಯೂ ಮೋದಿ ಅವರು ಒಂದು ದೇಶ, ಒಂದು ಚುನಾವಣೆಯ ಕುರಿತು ಪ್ರಸ್ತಾಪಿಸಿದ್ದರು.

ಏಕಕಾಲದಲ್ಲಿ ಚುನಾವಣೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ವೆಬಿನಾರ್‌ನಲ್ಲಿ ಪಕ್ಷದ ಹಿರಿಯ ಮುಖಂಡರು ಮಾತನಾಡಲಿದ್ದಾರೆ. ಶಿಕ್ಷಣ ತಜ್ಞರು ಮತ್ತು ಕಾನೂನು ತಜ್ಞರು ಭಾಗವಹಿಸಲಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

Thanks for reading ಒಂದು ದೇಶ, ಒಂದು ಚುನಾವಣೆಗಾಗಿ ಬಿಜೆಪಿ ಶೀಘ್ರದಲ್ಲೇ ವೆಬಿನಾರ್‌ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಒಂದು ದೇಶ, ಒಂದು ಚುನಾವಣೆಗಾಗಿ ಬಿಜೆಪಿ ಶೀಘ್ರದಲ್ಲೇ ವೆಬಿನಾರ್‌

Post a Comment