ಟೈಟಾನಿಕ್ ಎಂಬ ದೈತ್ಯ ಹಡಗಿನ ಭಯಾನಕವಾದ ಅಸಲಿ ಕಥೆ..!

December 29, 2020
Tuesday, December 29, 2020

 


ಹಾಯ್ ಫ್ರೆಂಡ್ಸ್, ಟೈಟಾನಿಕ್.. ಇಡೀ ವಿಶ್ವವೇ ಬಲ್ಲ ಒಂದು ಅದ್ಭುತ ಹಡಗು.. ಇದರ ಮೇಲೆ ಸಿನಿಮಾ ಕೂಡ ಬಂದಿದೆ. ಅದನ್ನು ಇಂಗ್ಲಿಷ್ ಬಾರದೇ ಇರೋರು ಕೂಡ ನೋಡಿದ್ದಾರೆ.. ಅಷ್ಟು ಫೇಮಸ್ ಆಗಿತ್ತು ಟೈಟಾನಿಕ್ ಫಿಲಂ.. ಅದು ಹಿಟ್ ಆಗೋಕೆ ಕಾರಣ ಅದರ ಹಿಂದಿನ ಈ ಹಡಗು.. 3 ಫುಟ್‍ಬಾಲ್ ಮೈದಾನದಷ್ಟು ಅಗಲ, 17 ಅಂತಸ್ತಿನ ಕಟ್ಟಡದಷ್ಟು ಎತ್ತರ ಮತ್ತು 3,500 ಮಂದಿ ಪ್ರಯಾಣಿಕರನ್ನು ಒಮ್ಮೆಗೇ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದ ಹಡಗು.. ಟೈಟಾನಿಕ್ ಸ್ಟೋರಿ ಶುರುವಾಗೋದು 1909ರ ಮಾರ್ಚ್ 31ರಿಂದ.. ಉತ್ತರ ಐರ್ಲೆಂಡ್‍ನ ಬೆಲ್‍ಫಾಸ್ಟ್​​​​​​ ವೈಟ್ ಸ್ಟಾರ್‍ಲೈನ್ ಎಂಬ ಕಂಪನಿ ಜಗತ್ತಿನ ದೊಡ್ಡ ಹಡಗನ್ನು ನಿರ್ಮಿಸಲು ಶುರು ಮಾಡಿತು. ಅದರಂತೆ 3 ಸಾವಿರ ಜನ ಹಗಲು ರಾತ್ರಿ ಶ್ರಮವಹಿಸಿ, 2 ವರ್ಷಗಳಲ್ಲಿ ನಿರ್ಮಿಸಿದ್ರು.

ಟೈಟಾನಿಕ್ ನಿರ್ಮಾಣವಾದಾಗ ಇದನ್ನು ನೋಡ್ಕೊಂಡು ಹೋಗೋಕೆ ಅಂತಾನೇ 1 ಲಕ್ಷ ಜನ ಆಗಮಿಸಿದ್ರು. ಯಾಕಂದ್ರೆ ಇದನ್ನು ಕಂಡ ಜನ ತುಂಬಾ ಆಶ್ಚರ್ಯಗೊಂಡಿದ್ರು. ಇಷ್ಟು ದೊಡ್ಡ ಹಡಗು ನಿರ್ಮಿಸಲು ಸಾಧ್ಯವಿದೆ ಅನ್ನೋದನ್ನ ಯಾರೂ ಕಲ್ಪನೆ ಕೂಡ ಮಾಡಿರಲಿಲ್ಲ. ಈ ಹಡಗು 882 ಅಡಿ 9 ಇಂಚು ಉದ್ದ ಮತ್ತು 175 ಅಡಿ ಅಗಲವಿತ್ತು. ಈ ಹಡಗು ನಿರ್ಮಾಣಕ್ಕೆ 7.5 ಮಿಲಿಯನ್ ಡಾಲರ್ ಅಂದ್ರೆ 52.5 ಕೋಟಿ ರೂಪಾಯಿ ಖರ್ಚಾಗಿತ್ತು.

1912ರ ಏಪ್ರಿಲ್ 2ರಂದು ಟೈಟಾನಿಕ್ ಸಂಪೂರ್ಣವಾಗಿ ಸಿದ್ಧವಾಯ್ತು. ಮೊದಲಿಗೆ ಯಶಸ್ವಿಯಾಗಿ ಟ್ರಯಲ್ ಮುಗಿಸಿದ ಬಳಿಕ 1,912ರ ಏಪ್ರಿಲ್ 10ರಲ್ಲಿ ಇಂಗ್ಲೆಂಡ್‍ನ ಸೌತಾಂಪ್ಟನ್‍ನಿಂದ ನ್ಯೂಯಾರ್ಕ್ ಸಿಟಿಗೆ ಹೊರಟಿತು. ಈ ದೂರ ಸುಮಾರು 5,800 ಕಿಲೋಮೀಟರ್ ಆಗಿತ್ತು. ಟೈಟಾನಿಕ್ ತನ್ನ ಮೊದಲ ಯಾತ್ರೆಯಲ್ಲಿದ್ದಾಗ ಇದ್ರಲ್ಲಿ ಸುಮಾರು 2,224 ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಯಾಣಿಸುತ್ತಿದ್ರು. ಇವರೆಲ್ಲರೂ ಈ ಹಡಗಿನಲ್ಲೇ ಪ್ರಯಾಣಿಸಲು ಬಂದವರಾಗಿರಲಿಲ್ಲ. ಬದಲಾಗಿ ಇವರಲ್ಲಿ ಅದೆಷ್ಟೋ ಜನ ಬೇರೆ ಹಡಗುಗಳಲ್ಲಿ ಪ್ರಯಾಣಿಸಲು ಬಂದಿದ್ರು. ವೈಟ್ ಸ್ಟಾರ್ ಲೈನ್‍ನ ಉಳಿದೆರಡು ಹಡಗುಗಳಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಮತ್ತು ಟೈಟಾನಿಕ್ ಹಡಗಿನಲ್ಲಿ ಜಾಗ ಇದ್ದಿದ್ದರಿಂದ ಟೈಟಾನಿಕ್‍ನಲ್ಲಿ ಕೂರಿಸಿ ಕಳುಹಿಸಲಾಯ್ತು. ಟೈಟಾನಿಕ್ ಪ್ರಯಾಣ ಮೊದಲ 4 ದಿನ ಎಲ್ಲವೂ ಸರಿಯಾಗೇ ಇತ್ತು. ಆದ್ರೆ ಏಪ್ರಿಲ್ 14ರಂದು ರಾತ್ರಿ 11.40ರ ವೇಳೆಗೆ ಎಲ್ಲವೂ ಬದಲಾಗಿ ಹೋಯ್ತು. ನಾರ್ಥ್ ಅಟ್ಲಾಂಟಿಕ್ ಸಾಗರದಲ್ಲಿ ಹಿಮಗಡ್ಡೆ ತಾಗಿದ್ದರಿಂದ ಹಡಗಿನ ತಳಭಾಗದಲ್ಲಿ ಸಣ್ಣ ರಂಧ್ರವಾಯ್ತು. ಮತ್ತು ಹಡಗು ನಿಧಾನವಾಗಿ ಮುಳುಗೋಕೆ ಶುರುವಾಯ್ತು. ಇದ್ರ ಬೆನ್ನಲ್ಲೇ ಹಡಗಿನಲ್ಲಿ ಕೋಲಾಹಲ ಉಂಟಾಯ್ತು.

ಜನರನ್ನು ಉಳಿಸೋಕೆ ಲೈವ್ ಬೋಟ್‍ಗಳನ್ನು ಬಳಸೋಕೆ ಶುರು ಮಾಡಲಾಯ್ತು. ಟೈಟಾನಿಕ್‍ನಲ್ಲಿ ಕೇವಲ 20 ಬೋಟ್‍ಗಳು ಮಾತ್ರ ಇದ್ದಿದ್ದರಿಂದ ಕೇವಲ 700 ಜನರನ್ನು ಮಾತ್ರವೇ ಉಳಿಸೋಕೆ ಸಾಧ್ಯವಾಯ್ತು. ಉಳಿದ 1500ಕ್ಕೂ ಹೆಚ್ಚು ಜನ ಸಮುದ್ರದಾಳದಲ್ಲಿ ಮುಳುಗಿ ಸಮಾಧಿಯಾದ್ರು. ಇನ್ನು ಕೆಲವರು ಈಜುವ ಮೂಲಕ ಜೀವ ಉಳಿಸಿಕೊಳ್ಳಲು ಯತ್ನಿಸಿದರಾದ್ರೂ, ನೀರಿನ ತಾಪಮಾನ ಮೈನಸ್ 2 ಡಿಗ್ರಿ ಸೆಲ್ಶಿಯಸ್ ಇದ್ದಿದ್ದರಿಂದ ಅವರೂ ಕೂಡ ಉಳಿಯಲಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕೂಡ ಟೈಟಾನಿಕ್ ಸಿಬ್ಬಂದಿ ತಮ್ಮ ಸಾಹಸ ಪ್ರವೃತ್ತಿ ಬಿಡಲಿಲ್ಲ. ಹಡಗಿನಲ್ಲಿದ್ದ ಜನರನ್ನು ಅಂತಿಮವಾಗಿ ಸಂತೋಷಪಡಿಸೋಣ ಅಂತ ಹಾಡೋಕೆ ಶುರು ಮಾಡಿದ್ರು. ಹಿಮಗಡ್ಡೆಗೆ ತಾಗಿದ 2 ಗಂಟೆ 40 ನಿಮಿಷಗಳ ಬಳಿಕ ಟೈಟಾನಿಕ್ ಸಂಪೂರ್ಣವಾಗಿ ಮುಳುಗಿತು. ನಂತರ ಸಮುದ್ರದಾಳಕ್ಕೆ ಸೇರಲು ಇದು ತೆಗೆದುಕೊಂಡಿದ್ದು ಕೇವಲ 15 ನಿಮಿಷ ಮಾತ್ರ.. ಈ ರೀತಿ ಮನುಷ್ಯ ನಿರ್ಮಿತ ಅತಿದೊಡ್ಡ ಹಡಗು ಪ್ರಕೃತಿಯ ಆಟದ ಮುಂದೆ ಸೋತು ಇಬ್ಭಾಗವಾಗಿತ್ತು. ಇದ್ರೊಂದಿಗೆ ನ್ಯೂಯಾರ್ಕ್ ತೀರದಲ್ಲಿ ನಿಂತು ಹಡಗಿನಲ್ಲಿದ್ದವರಿಗೆ ಕಾಯುತ್ತಿದ್ದವ ಕಾಯುವಿಕೆ ಕೂಡ ನಿರಂತರವಾಗಿ ಹೋಯ್ತು.

1912ರಲ್ಲಿ ಮುಳುಗಿದ್ರೂ ಕೂಡ ಇದರ ಅವಶೇಷಗಳನ್ನು ಪತ್ತೆಹಚ್ಚಲು 73 ವರ್ಷಗಳೇ ಬೇಕಾಯ್ತು. 1985ರಲ್ಲಿ ಟೈಟಾನಿಕ್ ಅವಶೇಷಗಳನ್ನು ಪತ್ತೆಹಚ್ಚಲಾಯ್ತು. ಇದು ಎರಡು ಭಾಗವಾಗಿತ್ತಲ್ವಾ.. ಈ ಎರಡು ಭಾಗಗಳ ನಡುವಿನ ಅಂತರ 600 ಮೀಟರ್​​​ನಷ್ಟಿತ್ತು. ಟೈಟಾನಿಕ್ ಹಡಗಿನ ಬಗ್ಗೆ ಹಲವು ಡಾಕ್ಯುಮೆಂಟರಿ, ಸಿನಿಮಾಗಳು ಬಂದಿವೆ. ಅವುಗಳ ಪೈಕಿ 1997ರ ನವೆಂಬರ್ 18ರಂದು ರಿಲೀಸ್ ಮಾಡಲಾದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಟೈಟಾನಿಕ್ ಹಡಗು ನಿರ್ಮಾಣಕ್ಕೆ ಖರ್ಚಾದ ಹಣಕ್ಕಿಂತಲೂ ಶೇ.40ರಷ್ಟು ಹೆಚ್ಚು ಹಣ ಖರ್ಚು ಮಾಡಿ ಈ ಸಿನಿಮಾ ಮಾಡಲಾಗಿತ್ತು. ಹಡಗು ಮುಳುಗುವಾಗ 2 ವರ್ಷದ ಒಂದು ಮಗುವನ್ನು ಉಳಿಸಲಾಗಿತ್ತು. ಆಕೆಯ ಹೆಸರೇ ಮಿಲ್ವಿನಾ ಡೀನ್.. ಇವರು 2009ರಂದು ಸಾವನ್ನಪ್ಪಿದ್ರು. ಟೈಟಾನಿಕ್ ದುರಂತದಲ್ಲಿ ಬದುಕುಳಿದವರಲ್ಲಿ ಮಿಲ್ವಿನಾ ಡೀನ್ ಅವರೇ ಕೊನೆಯವರಾಗಿದ್ದರು.

Thanks for reading ಟೈಟಾನಿಕ್ ಎಂಬ ದೈತ್ಯ ಹಡಗಿನ ಭಯಾನಕವಾದ ಅಸಲಿ ಕಥೆ..! | Tags:

Next Article
« Prev Post
Previous Article
Next Post »

Related Posts

Show comments
Hide comments

1 komentar on ಟೈಟಾನಿಕ್ ಎಂಬ ದೈತ್ಯ ಹಡಗಿನ ಭಯಾನಕವಾದ ಅಸಲಿ ಕಥೆ..!