ರಾಜ್ಯದ ಗ್ರಾಮೀಣಾ ಜನತೆಗೆ ಬಿಗ್ ಶಾಕ್ : ಗ್ರಾ.ಪಂ ಚುನಾವಣೆ ಬಳಿಕ ತೆರಿಗೆ ಹೆಚ್ಚಳ!

December 13, 2020

 


ಬೆಂಗಳೂರು : ರಾಜ್ಯದ ಗ್ರಾಮಪಂಚಾಯಿತಿ ಚುನಾವಣೆ ಬಳಿಕ ಗ್ರಾಮೀಣಾ ಜನತೆಗೆ ಬಿಗ್ ಶಾಕ್ ಎದುರಾಗಿದ್ದು, ಗ್ರಾಮಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದವರು ತಮ್ಮ ಗ್ರಾಮ ಉದ್ಧಾರಕ್ಕಾಗಿ ತೆರಿಗೆ ಹೆಚ್ಚಳ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಕೃಷಿ ತೆರಿಗೆ, ನಿರ್ಧರಣೆಗೆ ಒಳಪಟ್ಟಿರುವ ಭೂಮಿ ಮತ್ತು ಕಟ್ಟಡಗಳ ಮೇಲಿನ ತೆರಿಗೆ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಮಾರ್ಗಸೂಚಿ ಪ್ರಕಟಗೊಂಡಿದೆ.

ಗ್ರಾಮ ಪಂಚಾಯಿತಿಗಳು ಸಾರ್ವಜನಿಕ ಸಹಭಾಗಿತ್ವದಲ್ಲಿ ಆಸ್ತಿಗಳ ಮೌಲ್ಯಮಾಪನ, ಹೊಸ ತೆರಿಗೆ ನೀತಿಯ ಅನುಷ್ಠಾನ, ಸ್ಥಳಳೀಯ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಆದಾಯದ ಉತ್ಪಾದಕತೆ ಮತ್ತು ಸಂಗ್ರಹಣೆ ಹೊಂದುವಂತಾಗಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ.Related Articles

Advertisement
Previous
Next Post »