ಉಚಿತವಾಗಿ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

December 21, 2020

 


ನವದೆಹಲಿ: ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಪ್ರತಿಯೊಬ್ಬ ವ್ಯಕ್ತಿಯ ಪಾಲಿಗೆ ಕಡ್ಡಾಯ. ಈ ಎರಡು ಕಾರ್ಡ್ ಗಳಿಲ್ಲದೆ, ಯಾವುದೇ ಹಣಕಾಸಿನ ವ್ಯವಹಾರಗಳನ್ನ ಪೂರ್ಣಗೊಳಿಸಲು ಸಾಧ್ಯವಿಲ್ಲ. ಆಧಾರ್ ಕಾರ್ಡ್ ಸಹಾಯದಿಂದ ಇ-ಪ್ಯಾನ್ ಅನ್ನ ಕೆಲವೇ ನಿಮಿಷಗಳಲ್ಲಿ ಪಡೆಯಬೋದು. ಅದ್ಹೇಗೆ ಅನ್ನೋ ವಿವರ ಈ ಕೆಳಗಿನಂತಿದೆ.

ತತ್ ಕ್ಷಣದ ಇ-ಪಾನ್ ಕಾರ್ಡ್ ಸ್ವೀಕರಿಸಬಹುದು..!
ಇನ್ ಸ್ಟಂಟ್ ಪ್ಯಾನ್ ಸೌಲಭ್ಯದಡಿ ಆಧಾರ್ ಕಾರ್ಡ್ ಮೂಲಕ ಇ-ಪ್ಯಾನ್ ಕಾರ್ಡ್ ನೀಡಲು ಕೇವಲ 10 ನಿಮಿಷಗಳು ಸಾಕು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಈ ಸೌಲಭ್ಯದಡಿ ಇದುವರೆಗೆ ಸುಮಾರು 7 ಲಕ್ಷ ಪಾನ್ ಕಾರ್ಡ್ʼಗಳನ್ನ ವಿತರಿಸಲಾಗಿದೆ.

ಉಚಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದು..!

ಎನ್ ಎಸ್ ಡಿಎಲ್ ಮತ್ತು ಯುಟಿಟಿಎಸ್ ಎಲ್ ಮೂಲಕ ಪ್ಯಾನ್ ಕಾರ್ಡ್ ಸಹ ನೀಡಲಾಗುತ್ತದೆ. ಆದ್ರೆ, ಈ ಎರಡು ಸಂಸ್ಥೆಗಳು ಈ ಸೌಲಭ್ಯಕ್ಕಾಗಿ ಕೆಲವು ಶುಲ್ಕಗಳನ್ನ ವಿಧಿಸುತ್ತದೆ. ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ಮೂಲಕ ಪಾನ್ ಕಾರ್ಡ್ʼಗೆ ಅರ್ಜಿ ಹಾಕಿದರೆ ನೀವು ಯಾವುದೇ ಶುಲ್ಕ ಪಾವತಿಸಬೇಕಿಲ್ಲ.

PDF ಸ್ವರೂಪದಲ್ಲಿ ಪ್ಯಾನ್ ಕಾರ್ಡ್ ಪಡೆಯಿರಿ..!
ಪಾನ್ ಕಾರ್ಡ್ʼಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಪಿಡಿಎಫ್ ಮಾದರಿಯಲ್ಲಿ ಪಾನ್ ಕಾರ್ಡ್ ಪಡೆಯುತ್ತಾನೆ. ಇದರಲ್ಲಿ ಕ್ಯೂಆರ್ ಕೋಡ್ ಇರುತ್ತದೆ. ಅದರಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ, ಫೋಟೋ ಇತ್ಯಾದಿ ಅಗತ್ಯ ಮಾಹಿತಿ ಇರುತ್ತೆ. ನೀವು ನಿಮ್ಮ ಇ-ಪ್ಯಾನ್ ಅನ್ನ ಡೌನ್ ಲೋಡ್ ಮಾಡಿಕೊಳ್ಳಬೇಕು. ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮಗೆ 15 ಅಂಕಿಗಳ ಮಾನ್ಯತೆ ಸಂಖ್ಯೆ ದೊರೆಯುತ್ತೆ. ನಿಮ್ಮ ಪ್ಯಾನ್ ಕಾರ್ಡ್ʼನ ಸಾಫ್ಟ್ ಕಾಪಿಯನ್ನ ನಿಮ್ಮ ಮೇಲ್ ಐಡಿಗೂ ಕಳುಹಿಸಲಾಗುತ್ತೆ.

ಉಚಿತವಾಗಿ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?1) ಮೊದಲು https://www.incometaxindiaefiling.gov.in/home ಹೋಗಿ.

2) ಇಲ್ಲಿ ನೀವು ನಿಮ್ಮ ಎಡಭಾಗದಲ್ಲಿ ಆಧಾರ್ ಮೂಲಕ ಇನ್ ಸ್ಟಂಟ್ ಪ್ಯಾನ್ ಆಯ್ಕೆಯನ್ನ .

3) ನಂತರ ಹೊಸ ಪೇಜ್ ತೆರೆದುಕೊಳ್ಳುತ್ತೆ. ಅಲ್ಲಿ ನೀವು ಗೆಟ್ ನ್ಯೂ ಪ್ಯಾನ್ ಆಯ್ಕೆಯನ್ನ ನೋಡುತ್ತೀರಿ. ಇದನ್ನೂ

4) ಈಗ ಹೊಸ ಪುಟದಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನ ನಮೂದಿಸಲು ನಿಮಗೆ ಕೇಳಲಾಗುತ್ತೆ. ಇಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ 'ಐ ಕನ್ಫರ್ಮ್' ಎಂದು ಟಿಕ್ ಮಾಡಿ.

5) ನಿಮ್ಮ ನೋಂದಾಯಿತ ಮೊಬೈಲ್ ಫೋನ್ʼನಲ್ಲಿ OTP ಕಾಣಿಸಿಕೊಳ್ಳುತ್ತದೆ. ಸೈಟ್ʼನಲ್ಲಿ ಹಾಕುವ ಮೂಲಕ ಪರಿಶೀಲಿಸಿ.

Related Articles

Advertisement
Previous
Next Post »