ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಪೊಲೀಸಪ್ಪನ ಲಗ್ನಪತ್ರಿಕೆ! ಅದೆರಲ್ಲೇನಿದೆ ಗೊತ್ತಾ?

December 17, 2020
Thursday, December 17, 2020

 


ಬೆಂಗಳೂರು:
 ಮದುವೆ ಅಂದ್ರೆ ಅದೊಂದು ಹಬ್ಬದ ವಾತಾವರಣ. ಶ್ರೀಮಂತರಷ್ಟೇ ಅಲ್ಲ ಸಾಮಾನ್ಯ ಜನರಿಗೂ ತಕ್ಕ ಮಟ್ಟಿಗೆ ಆಡಂಬರ ಇರಬೇಕು ಎನ್ನುತ್ತಾರೆ. ಇನ್ನು ಮದುವೆಯ ಆಡಂಬರ ಹೇಗಿರುತ್ತೆ ಎಂದು ವಿವಾಹ ಆಮಂತ್ರಣ ಪತ್ರಿಕೆ ನೋಡಿಯೇ ಕೆಲವರು ಅಂದಾಜಿಸಿಬಿಡುತ್ತಾರೆ. ಅಷ್ಟರಮಟ್ಟಿಗೆ ಇದೆ ಲಗ್ನಪತ್ರಿಕೆ ಟ್ರೆಂಡ್​.

ಇಂತಹ ಜಮಾನದಲ್ಲೂ ಪೊಲೀಸ್ ಪೇದೆಯೊಬ್ಬರ ವಿವಾಹ ಆಮಂತ್ರಣ ಪತ್ರಿಕೆ ಜಾಲತಾಣದಲ್ಲೂ ವೈರಲ್​ ಆಗುತ್ತಿದ್ದು, ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ಪಡೆಯುತ್ತಿದೆ. ಅಂದದಹಾಗೆ ಅದರಲ್ಲಿನ ವಿಶೇಷತೆ ಏನು ಗೊತ್ತಾ?

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್ಸ್‌ಟೇಬಲ್ ಮಂಜುನಾಥ್ ತನ್ನ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ಹಾಗೂ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಉಪಯೋಗ ಆಗುವಂತಹ ಮಾಹಿಯನ್ನು ಮುದ್ರಿಸಿ ಮದುವೆಗೆ ಆಹ್ವಾನಿಸಿದ್ದಾರೆ.

ಡಿಸೆಂಬರ್ 16 ಹಾಗೂ 17ರಂದು ದಾವಣಗೆರೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸವ ನಡೆದಿದೆ.


ಜುನಾಥ್‌ರ ಸಮಾಜಮುಖಿ ಕಾರ್ಯ ಹಾಗೂ ಸಂಚಾರಿ ಜಾಗೃತಿ ಮೂಡಿಸುವ ನೂತನ ಪ್ರಯೋಗವನ್ನು ಕಂಡು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆ ಸುರಕ್ಷತಾ ಕ್ರಮಗಳ ಅರಿವಿಗಾಗಿ ಸೆಲೆಬ್ರೆಟಿಗಳನ್ನ ಕರೆಸೋದು, ಭಿತ್ತಿ ಪತ್ರಗಳನ್ನ ಅಂಟಿಸೋದು, ಆಟೋ‌ಗಳಲ್ಲಿ ಸಾರ್ವಜನಿಕ‌ ಪ್ರಕಟಣೆ ಮಾಡೋದು, ಸಾರ್ವಜನಿಕ‌ ಸ್ಥಳಗಳಲ್ಲಿ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲು ಹಣ ವ್ಯಯಿಸುತ್ತಿದೆ.

ಆದ್ರೆ ಪೇದೆ ಮಂಜುನಾಥ್ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಂಚಾರ ದೀಪಗಳು, ರಸ್ತೆಯಲ್ಲಿನ ಸೂಚನ ಫಲಕಗಳ ಅರ್ಥ, ತುರ್ತು ಸೇವೆಗೆ ಕರೆ ಮಾಡಲು 112 ಬಳಸಬೇಕು ಹಾಗೂ ಸಂಚಾರಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎನ್ನುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದ ಕಾರ್ಯ ಶ್ಲಾಘನೀಯ.Thanks for reading ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಪೊಲೀಸಪ್ಪನ ಲಗ್ನಪತ್ರಿಕೆ! ಅದೆರಲ್ಲೇನಿದೆ ಗೊತ್ತಾ? | Tags:

Next Article
« Prev Post
Previous Article
Next Post »

Related Posts

Show comments
Hide comments

1 komentar on ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಪೊಲೀಸಪ್ಪನ ಲಗ್ನಪತ್ರಿಕೆ! ಅದೆರಲ್ಲೇನಿದೆ ಗೊತ್ತಾ?