ನಿಮ್ಮ ʼಆಧಾರ್‌ ಕಾರ್ಡ್‌ʼನಲ್ಲಿ ನಿವೇನಾದ್ರು ತಿದ್ದುಪಡಿ ಮಾಡೋದಿದ್ಯಾ? ಹಾಗಾದ್ರೆ, ಚಿಂತೆ ಬಿಡಿ ಜಸ್ಟ್‌ ಹೀಗೆ ಮಾಡಿ..!

December 23, 2020
Wednesday, December 23, 2020

 


ನವದೆಹಲಿ: ಆಧಾರ್ ಕಾರ್ಡ್‌ನಲ್ಲಿ ಯಾವುದೇ ಮಾಹಿತಿ ಅಪ್ ಡೇಟ್ ಮಾಡ್ಬೇಕು ಅನ್ನೋರಿಗೆ ಯುಐಡಿಎಐ, ದೊಡ್ಡ ರಿಲೀಫ್ ನೀಡಿದ್ದು, ಈಗ ಮತ್ತೊಮ್ಮೆ ಮನೆಯಲ್ಲಿ ಕುಳಿತು ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಲಿಂಗವನ್ನ ಅಪ್ ಡೇಟ್ ಮಾಡಬಹುದು. ಈ ಮಧ್ಯೆ ವಿಳಾಸ ಹೊರತುಪಡಿಸಿ ಎಲ್ಲ ಜನಸಂಖ್ಯಾ ವಿವರಗಳನ್ನ ನವೀಕರಿಸುವ ಸೌಲಭ್ಯವನ್ನ UIDAI ನಿಲ್ಲಿಸಿತ್ತು. ಆದ್ರೆ, ಸಧ್ಯ ಈ ವೈಶಿಷ್ಟ್ಯವನ್ನ ಮತ್ತೊಮ್ಮೆ ಆರಂಭಿಸಲಾಗಿದೆ.

ಟ್ವೀಟ್ ಮೂಲಕ ವಿಷ್ಯ ತಿಳಿಸಿದ ಯುಐಡಿಎಐ..!
ಈ ಬಗ್ಗೆ ಯುಐಡಿಎಐ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದು, ಮನೆಯಲ್ಲಿ ಕುಳಿತುಕೊಂಡು ಯುಐಡಿಎಐ ವೆಬ್ ಸೈಟ್ʼನಲ್ಲಿ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಲಿಂಗವನ್ನ ಅಪ್ ಡೇಟ್ ಮಾಡಿ ಎಂದಿದೆ.

ಅದ್ರಂತೆ, ಈ ಲಿಂಕ್ ಮೇಲೆ https://ssup.uidai.gov.in/ssup/ ಮತ್ತು ಮನೆಯಿಂದ ಆಧಾರ್ ಅಪ್ ಡೇಟ್ ಮಾಡಿ.

ಮಧ್ಯದಲ್ಲಿ ಈ ಸೇವೆ ಬಂದ್ ಆಗಿತ್ತು..!ಈ ಮಧ್ಯದಲ್ಲಿ ನೀವು ಕೇವಲ ವಿಳಾಸವನ್ನ ಮಾತ್ರ ನವೀಕರಿಸಬಹುದಾಗಿತ್ತು. ಇದಲ್ಲದೆ, ನೀವು ಯಾವುದೇ ವಿವರಗಳನ್ನ ಅಪ್ ಡೇಟ್ ಮಾಡಲು ಕೇಂದ್ರಕ್ಕೆ ಹೋಗಬೇಕಾಗಿತ್ತು. ಸಧ್ಯ ಈಗ ಮತ್ತೆ ಮನೆಯಲ್ಲಿಯೇ ಕುಳಿತು ಅಪ್ಡೇಟ್‌ ಮಾಡಿಕೊಳ್ಳಬಹುದು.

ಹಾಗಾದ್ರೆ, ಮನೆಯಲ್ಲಿಯೇ ಕುಳಿತು ನಿಮ್ಮ ಆಧಾರ್‌ ಕಾರ್ಡ್ ಅಪ್ ಡೇಟ್ ಮಾಡುವುದು ಹೇಗೆ..?

ಈ ಕೆಳಗಿನ ಹಂತಗಳನ್ನ ಅನುಸರಿಸಿ..!

>> ಇದಕ್ಕಾಗಿ ನೀವು ಮೊದಲು ಅಧಿಕೃತ ವೆಬ್ ಸೈಟ್ʼಗೆ ಹೋಗಿ.

>> ಇಲ್ಲಿ ನೀವು 'ನನ್ನ ಆಧಾರ್' ವಿಭಾಗಕ್ಕೆ ಹೋಗಿ 'ನಿಮ್ಮ ಆಧಾರವನ್ನ ಅಪ್ ಡೇಟ್ ಮಾಡಿ' ಕ್ಲಿಕ್‌ ಮಾಡಿ.

>> ನಂತರ, ನೀವು 'ಜನಸಂಖ್ಯಾ ಶಾಸ್ತ್ರವನ್ನ ಆನ್ ಲೈನ್ ನಲ್ಲಿ ಅಪ್ ಡೇಟ್ ಮಾಡಿ' ಮೇಲೆ ಕ್ಲಿಕ್ ಮಾಡಬೇಕು.

>> ಇದಾದ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ.

>> ಇದಲ್ಲದೆ, ನೀವು ನೇರ https://ssup.uidai.gov.in/ssup/ ಸಹ ಭೇಟಿ ನೀಡಬಹುದು.

>> ಈಗ ನೀವು 'ಆಧಾರ್ ಅಪ್ ಡೇಟ್ ಮಾಡಲು ಹೋಗಿ' ಮೇಲೆ .

>> ಹೊಸದಾಗಿ ತೆರೆಯಲಾದ ಪುಟದಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನ ನಮೂದಿಸಿ.

>> ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು OTP ಯನ್ನ .

>> ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಸಲ್ಲಿಸಿ ನಿಗದಿತ ಸ್ಥಳದಲ್ಲಿ ಹಾಕಿ.

>> ಈಗ ಹೊಸದಾಗಿ ತೆರೆಯಲಾದ ಪುಟದಲ್ಲಿ ನಿಮಗೆ ಎರಡು ಆಯ್ಕೆಗಳು ದೊರೆಯಲಿವೆ -

1) ಪೂರಕ ದಾಖಲೆ ಪುರಾವೆಯೊಂದಿಗೆ ವಿಳಾಸ ಸೇರಿದಂತೆ ಜನಸಂಖ್ಯಾ ವಿವರಗಳ ಅಪ್ ಡೇಶನ್

2) ವಿಳಾಸ ದೃಢೀಕರಣ ಪತ್ರದ ಮೂಲಕ ವಿಳಾಸ ಪರಿಷ್ಕರಣೆ

>> ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ವನ್ನು ದಾಖಲೆ ಪುರಾವೆಯೊಂದಿಗೆ ಅಪ್ ಡೇಟ್ ಮಾಡಲು 'ಅಪ್ ಡೇಟ್ ಡೆಮೊಗ್ರಾಪ್ಡೇಟಾ' ಕ್ಲಿಕ್ ಮಾಡಬೇಕು.

>> ನಂತರ, ನೀವು ನವೀಕರಿಸಬೇಕೆಂದಿರುವ ವಿವರವನ್ನ ನೀವು ಆಯ್ಕೆ ಮಾಡಬೇಕು. ಇದಾದ ನಂತರ, ಮುಂದಿನ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

ನೋಂದಾಯಿತ ಮೊಬೈಲ್ ಸಂಖ್ಯೆ..!
ಆನ್ ಲೈನ್ ಅಪ್ ಡೇಶನ್ ಸಮಯದಲ್ಲಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನಿಮ್ಮ ಬಳಿ ಇರುವುದು ಅತ್ಯಗತ್ಯ. ಯಾಕಂದ್ರೆ, ನಿಮ್ಮ ಎಲ್ಲಾ OTPಗಳು ಒಂದೇ ಸಂಖ್ಯೆಗೆ ಹೋಗುತ್ತವೆ.

Thanks for reading ನಿಮ್ಮ ʼಆಧಾರ್‌ ಕಾರ್ಡ್‌ʼನಲ್ಲಿ ನಿವೇನಾದ್ರು ತಿದ್ದುಪಡಿ ಮಾಡೋದಿದ್ಯಾ? ಹಾಗಾದ್ರೆ, ಚಿಂತೆ ಬಿಡಿ ಜಸ್ಟ್‌ ಹೀಗೆ ಮಾಡಿ..! | Tags:

Next Article
« Prev Post
Previous Article
Next Post »

Related Posts

Show comments
Hide comments

1 komentar on ನಿಮ್ಮ ʼಆಧಾರ್‌ ಕಾರ್ಡ್‌ʼನಲ್ಲಿ ನಿವೇನಾದ್ರು ತಿದ್ದುಪಡಿ ಮಾಡೋದಿದ್ಯಾ? ಹಾಗಾದ್ರೆ, ಚಿಂತೆ ಬಿಡಿ ಜಸ್ಟ್‌ ಹೀಗೆ ಮಾಡಿ..!