ನಿತ್ಯಭವಿಷ್ಯ| ಈ ರಾಶಿಯವರಿಗೆ ತೀರಾ ಹತ್ತಿರದವರೇ ಇಂದು ನಿಮ್ಮೊಂದಿಗೆ ಜಗಳವಾಡುತ್ತಾರೆ.. ಎಚ್ಚರ!

 


ಮೇಷ: ಸುಲಭವಾಗಿ ಬಗೆಹರಿಯುವ ವಿಷಯಕ್ಕೆ ಸುಮ್ಮನೆ ಕಾದಾಡಬೇಡಿ. ರಾಜಿ ಮಾತುಕತೆ ನಡೆಸಿದರೆ ಒಳಿತಾಗಲಿದೆ. ಶುಭಸಂಖ್ಯೆ: 3

ವೃಷಭ: ಕಿರಿಕಿರಿ ಮಾಡುವವರು ಇರುತ್ತಾರೆ. ಅವರನ್ನು ನಿಯಂತ್ರಿಸಿ. ಹಿಂದಿನ ಅನುಭವಗಳ ಕಾರಣ ಎಚ್ಚರದ ಹೆಜ್ಜೆಗಳನ್ನು ಇಡಿ. ಶುಭಸಂಖ್ಯೆ: 9

ಮಿಥುನ: ಎಷ್ಟೇ ಕೂಗಾಡಿದರೂ ಕೋಪದಿಂದ ಏನೇನೂ ಲಾಭವಿಲ್ಲ. ಮನೆಯ ಸದಸ್ಯರನ್ನು ನಿಭಾಯಿಸಿದರೆ ಸಂತಸವಿದೆ. ಶುಭಸಂಖ್ಯೆ: 4

ಕಟಕ: ಭಕ್ತಿಯಿಂದ ಕುಲದೇವರನ್ನು ಸ್ತುತಿಸಿ. ಅಂದುಕೊಂಡ ಕಾರ್ಯದಲ್ಲಿ ಸುಲಭದ ಯಶಸ್ಸು ಸಾಕಾರಗೊಳ್ಳಲಿದೆ. ಶುಭಸಂಖ್ಯೆ: 6

ಸಿಂಹ: ಕೆಲವು ಸಮಸ್ಯೆಗಳು ಎದುರಾಗಲಿವೆ.

ಆದರೂ ಎದುರಿಸುವ ಧೈರ್ಯವನ್ನು ತೋರಿಸುತ್ತೀರಿ. ಹೆಚ್ಚಿನದಾದ ತಾಳ್ಮೆ ಇರಲಿ. ಶುಭಸಂಖ್ಯೆ: 8

ಕನ್ಯಾ: ದೂರದ ಊರಿನ ನೆಂಟರು ಅಥವಾ ತೀರ ಹತ್ತಿರದ ಕುಟುಂಬ ವರ್ಗದವರೇ ಗಲಾಟೆ ಮಾಡಬಹುದು. ಜಾಗ್ರತೆ ಇರಲಿ. ಶುಭಸಂಖ್ಯೆ: 1



ತುಲಾ: ಆತ್ಮೀಯ ಹಿತೈಷಿಗಳ ಆಗಮನದಿಂದ ನಿಮ್ಮ ವಿವಾದವೊಂದು ಅನಿರೀಕ್ಷಿತವಾಗಿ ಕೊನೆಗೊಳ್ಳುವ ಸಾಧ್ಯತೆಯಿದೆ. ಶುಭಸಂಖ್ಯೆ: 5

ವೃಶ್ಚಿಕ: ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬುದು ನಿಮಗೂ ಗೊತ್ತು. ಆದರೂ ಭ್ರಮೆಯಲ್ಲಿ ಚಡಪಡಿಸುವ ಅಜ್ಞಾನ ಪ್ರದರ್ಶನ ಬೇಡ. ಶುಭಸಂಖ್ಯೆ: 2

ಧನುಸ್ಸು: ಜನರಿಗೆ ಅಪಾರ್ಥವಾಗುವ ರೀತಿಯಲ್ಲಿ ವರ್ತಿಸಬೇಡಿ. ಇದರಿಂದ ನಿಮಗಿರುವ ವರ್ಚಸ್ಸಿಗೆ ಬಾಧಕವಾದೀತು. ಶುಭಸಂಖ್ಯೆ: 7

ಮಕರ: ಬಹು ಮುಖ್ಯವಾದ ಕಡತವೊಂದು ಕಣ್ತಪ್ಪಿ ಕಾಣೆಯಾಗಬಹುದು. ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸುವುದು ಅಗತ್ಯ. ಶುಭಸಂಖ್ಯೆ: 3

ಕುಂಭ: ತಾಳ್ಮೆಯಿಂದ ಹಿರಿಯರ ಮಾತುಗಳನ್ನು ಕೇಳಿಸಿಕೊಳ್ಳಿ. ಇಂಥ ವ್ಯವಧಾನದಿಂದ ಮುಂದೆ ಗೆಲುವು ಸಾಧಿಸುವಿರಿ. ಶುಭಸಂಖ್ಯೆ: 9

ಮೀನ: ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಜಾಣ್ಮೆಯ ಗಾದೆಮಾತನ್ನು ಅರಿತು ಮುನ್ನಡೆಯಿರಿ. ಇದರಿಂದ ನಿಮಗೆ ಕ್ಷೇಮವಿದೆ. ಶುಭಸಂಖ್ಯೆ: 4

Comments