ನಿತ್ಯಭವಿಷ್ಯ| ಇಂದು ಈ ರಾಶಿಯವರಿಗೆ ಧನಾಗಮನದ ಸಾಧ್ಯತೆಯಿದೆ..

December 12, 2020
Saturday, December 12, 2020

 


ಮೇಷ: ಉಷ್ಣಪ್ರಕೃತಿಯ ದೇಹದವರಿಗೆ ಸ್ವಲ್ಪಮಟ್ಟಿಗೆ ತೊಂದರೆ ಆದೀತು. ಚಂದ್ರಪೀಡಾ ನಿವಾರಣಾ ಸ್ತೋತ್ರ ಪಠಿಸಿ. ಶ್ಶಾಂತಿ ಲಭ್ಯ. ಶುಭಸಂಖ್ಯೆ: 2

ವೃಷಭ: ಬಹಳ ದಿನಗಳಿಂದಲೂ ನಿಂತುಹೋಗಿದ್ದ ಕಾರ್ಯಗಳಿಗೆ ಮರುಚಾಲನೆ ಸಿಗಲಿದೆ. ಮಕ್ಕಳಿಂದ ಕಿರಿಕಿರಿಯಾದೀತು. ಶುಭಸಂಖ್ಯೆ: 4

ಮಿಥುನ : ಸರ್ಕಾರಿ ಅಧಿಕಾರಿಗಳ ಸಹಾಯ ಸಿಗಲಿದೆ. ಅಲರ್ಜಿಯಿಂದ ಸ್ವಲ್ಪ ತೊಂದರೆಯಾದೀತು. ವಿರುದ್ಧಾಹಾರ ಸೇವಿಸದಿರಿ. ಶುಭಸಂಖ್ಯೆ: 9

ಕಟಕ: ಕುಟುಂಬದಲ್ಲಿ ಶುಭವಾರ್ತೆ ಕೇಳಿಬರಲಿದೆ. ಮಕ್ಕಳ ವಿಚಾರದಲ್ಲಿ ಬಹಳ ಹರ್ಷಪಡುವಿರಿ. ವ್ಯಾವಹಾರಿಕ ಜಾಣ್ಮೆ ಇರಲಿ. ಶುಭಸಂಖ್ಯೆ: 6

ಸಿಂಹ: ಆಪ್ತ ಮಿತ್ರರು ಶತ್ರುಗಳಾಗಿ ಬದಲಾದರೂ ಹೊಸ ಮೈತ್ರಿಯಿಂದ ನಿಮಗೆ ಲಾಭವಿದೆ.

ಬಟ್ಟೆ ಖರೀದಿಸುವಾಗ ಜಾಗ್ರತೆ ಬೇಕು. ಶುಭಸಂಖ್ಯೆ: 3

ಕನ್ಯಾ: ವಾಯುಬಾಧೆ ಅನುಭವಕ್ಕೆ ಬರಬಹುದು. ನೆರೆಯವರು ನೆರವು ನೀಡುವರು. ಚಿನ್ನದ ಖರೀದಿಗೆ ಸುಸಂದರ್ಭವಿದು. ಶುಭಸಂಖ್ಯೆ: 8

ತುಲಾ: ಸಂಜೆಯ ವೇಳೆಗೆ ಸಂತಸದ ಸಮಾಚಾರ ಕೇಳಿಬರಬಹುದು. ಹೊಟ್ಟೆನೋವಿನ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಶುಭಸಂಖ್ಯೆ: 1

ವೃಶ್ಚಿಕ: ಖಾಸಗಿ ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿಯ ದಿನವಾಗಿದೆ. ಯಾವುದೇ ಕಾರಣಕ್ಕೂ ಆತುರ ಪಡದಿರಿ. ಶಿವನನ್ನು ಸ್ತುತಿಸಿ. ಶುಭಸಂಖ್ಯೆ: 7

ಧನುಸ್ಸು : ಧನಾಗಮನದ ಸಾಧ್ಯತೆಯಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರಬಹುದು. ಸುಮ್ಮನೆ ಅನವಶ್ಯಕ ಚರ್ಚೆ ಮಾಡದಿರಿ. ಶುಭಸಂಖ್ಯೆ: 5

ಮಕರ: ಬಾಳಸಂಗಾತಿಗೆ ಅಸೌಖ್ಯ ಸಂಭವಿಸಬಹುದು. ಕಾಗದಪತ್ರಗಳ ವಿಚಾರದಲ್ಲಿ ವಿಶೇಷವಾದ ಎಚ್ಚರ ವಹಿಸಲೇಬೇಕಾಗುತ್ತದೆ. ಶುಭಸಂಖ್ಯೆ: 2

ಕುಂಭ: ಸಮಾಜದಲ್ಲಿ ಮನ್ನಣೆಯನ್ನು ಗಳಿಸಬಹುದು. ಬಂಧುಮಿತ್ರರಿಂದ ಸಹಾಯ ಸಹಕಾರ ಲಭ್ಯ. ಆರೋಗ್ಯದೆಡೆಗೆ ಕಾಳಜಿ ಅಗತ್ಯ. ಶುಭಸಂಖ್ಯೆ: 4

ಮೀನ: ದ್ರವ್ಯಲಾಭ ಉಂಟಾಗಲಿದೆ. ವಾಹನ ಖರೀದಿ ಮಾಡುವ ಬಗ್ಗೆ ಯೋಚಿಸಬಹುದು. ಭಕ್ತಿಯಿಂದ ಶಿವನಾಮದ ಸ್ಮರಣೆ ಮಾಡಿ. ಶುಭಸಂಖ್ಯೆ: 9



Thanks for reading ನಿತ್ಯಭವಿಷ್ಯ| ಇಂದು ಈ ರಾಶಿಯವರಿಗೆ ಧನಾಗಮನದ ಸಾಧ್ಯತೆಯಿದೆ.. | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ನಿತ್ಯಭವಿಷ್ಯ| ಇಂದು ಈ ರಾಶಿಯವರಿಗೆ ಧನಾಗಮನದ ಸಾಧ್ಯತೆಯಿದೆ..

Post a Comment