ಕರ್ನಾಟಕದಲ್ಲಿ ಶಾಲೆಗಳ ಆರಂಭದ ದಿನಾಂಕ ಘೋಷಿಸಿದ ಸರ್ಕಾರ

December 19, 2020
Saturday, December 19, 2020

 


ಬೆಂಗಳೂರು, ಡಿಸೆಂಬರ್ 19:ಕರ್ನಾಟಕದಲ್ಲಿ ಶಾಲೆಗಳ ಆರಂಭದ ದಿನಾಂಕವನ್ನು ಸರ್ಕಾರ ಘೋಷಣೆ ಮಾಡಿದೆ.

2021ರ ಜನವರಿ 1 ರಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿ ಹಾಗೂ 6 ರಿಂದ 9ನೇ ತರಗತಿಗೆ ವಿದ್ಯಾಗಮ ಪ್ರಾರಂಭವಾಗಲಿದೆ.

ಹದಿನೈದು ದಿನಗಳ ಕಾಲ ಪರಿಸ್ಥಿತಿ ಅವಲೋಕಿಸಿ ಇತರೆ ತರಗತಿ ಪ್ರಾರಂಭಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಪ್ರಥಮ ಪಿಯುಸಿ ತರಗತಿ ಆರಂಭಿಸುವ ಬಗ್ಗೆ 15 ದಿನಗಳ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಒಂದು ತರಗತಿಯಲ್ಲಿ 15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಬಿಸಿಯೂಟ ಇರುವುದಿಲ್ಲ. ಮನೆಗೇ ಪರಿಕರಗಳನ್ನು ಒದಗಿಸುತ್ತೇವೆ, ಮಧ್ಯಾಹ್ನದ ವೇಳೆಗೆ ತರಗತಿ ಮುಗಿದುಹೋಗುತ್ತದೆ.

ಶಾಲೆಗೆ ದಾಖಲಾತಿ ಕಡ್ಡಾಯವಾಗಿರುತ್ತದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ತರಗತಿ ನಡೆಯಲಿದೆ. ವಿದ್ಯಾಗಮಕ್ಕೆ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿರುತ್ತದೆ.

ಶೀತ, ಜ್ವರ ಇಲ್ಲದರ ದೃಢೀಕರಣ ಪತ್ರ ತರಬೇಕು, ಹಾಸ್ಟೆಲ್ ತೆರೆಯಲು ಅನುಮತಿ ನೀಡಲಾಗಿದೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಬೇಕು, ಹಾಗೆಯೇ ನೆಗೆಟಿವ್ ವರದಿ ಇದ್ದರೆ ಮಾತ್ರ ಹಾಸ್ಟೆಲ್‌ಗೆ ಸೇರಿಸಬೇಕು.


ಶಾಲಾ ಆವರಣಗಳಲ್ಲಿ ಮಾತ್ರ ವಿದ್ಯಾಗಮ ವಾರಕ್ಕೆ ಮೂರು ದಿನ ಮಾತ್ರ ವಿದ್ಯಾಗಮ ತರಗತಿಗಳನ್ನು ನಡೆಸಲಾಗುತ್ತದೆ.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಾಗಿರುವುದರಿಂದ ಇವತ್ತು ನಡೆದ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧಾರ ತೆಗೆದುಕೊಳ್ಳಲಾಯಿತು. ತರಗತಿಗೆ ಬರಲೇಬೇಕು ಎಂಬ ಒತ್ತಡವಿಲ್ಲ, ಆನ್‌ಲೈನ್ ಮೂಲಕವೇ ಕಲಿಯುತ್ತೇವೆ ಎಂದು ಬಯಸುವವರಿಗೆ ಅದಕ್ಕೂ ಅವಕಾಶ ನೀಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಪರೀಕ್ಷೆ ಯಾವಾಗ ನಡೆಸಬೇಕು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಪಠ್ಯವನ್ನು ಕಡಿತ ಮಾಡಲಾಗುವುದು, ಪರಿಸ್ಥಿತಿ ನೋಡಿಕೊಂಡು ಉಳಿದ ತರಗತಿಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Thanks for reading ಕರ್ನಾಟಕದಲ್ಲಿ ಶಾಲೆಗಳ ಆರಂಭದ ದಿನಾಂಕ ಘೋಷಿಸಿದ ಸರ್ಕಾರ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಕರ್ನಾಟಕದಲ್ಲಿ ಶಾಲೆಗಳ ಆರಂಭದ ದಿನಾಂಕ ಘೋಷಿಸಿದ ಸರ್ಕಾರ

Post a Comment