ಕರ್ನಾಟದಲ್ಲಿ ಜೆಡಿಎಸ್‌-ಬಿಜೆಪಿ ನಡುವೆ ಮತ್ತೊಂದು ಮೈತ್ರಿ

December 16, 2020

 


ಬೆಂಗಳೂರು, (ಡಿ.15): ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವೂ ಅಲ್ಲ, ಮಿತ್ರರೂ ಅಲ್ಲಎನ್ನುವುದಕ್ಕೆ ಇದೀಗ ಬಿಜೆಪಿ ಹಾಗೂ ಜೆಡಿಎಸ್‌ ನಡುವಿನ ಅಘೋಷಿತ ಮೈತ್ರಿ ತಾಜಾ ಉದಾಹರಣೆಯಾಗಿದೆ.

ಹೌದು...ಮೈಸೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆಯಲಲ್‌ಇ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಒಬ್ಬರೂ ನಿರ್ದೇಶಕರಿಲ್ಲದ ಬಿಜೆಪಿಗೆ ಜೆಡಿಎಸ್ ಅಧಿಕಾರ ಭಾಗ್ಯ ಕಲ್ಪಿಸಿಒಟ್ಟಿತ್ತು. ಇದೀಗ ಪರಿಷತ್ ಸಭಾಪತಿಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್‌ನ್ನು ಸಭಾಧ್ಯಕ್ಷರನ್ನ ಕೆಳಗಿಳಿಸಲು ಪ್ಲಾನ್ ಮಾಡಿದೆ.

BJP ಜೊತೆ JDS ವಿಲೀನ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಕುಮಾರಸ್ವಾಮಿ

ವಿಧಾನ ಪರಿಷತ್ ಸಭಾಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಬಿಜೆಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಪತ್ರಕ್ಕೆ ಜೆಡಿಎಸ್​​ ಪಕ್ಷದ ಎಲ್ಲಾ 14 ಎಂಎಲ್​ಸಿಗಳು ಸಹಿ ಹಾಕಿ ರಾಜ್ಯಪಾಲರಿಗೆ ಕಳುಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು, ಸದನದಲ್ಲಿ ನಡೆದ ಗಲಾಟೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆದರೆ ಅವಿಶ್ವಾಸ ನಿರ್ಣಯದ ಪತ್ರಕ್ಕೆ ಜೆಡಿಎಸ್​ ಸೇರಿದಂತೆ ಬಿಜೆಪಿಯ 45 ಸದಸ್ಯರು ಅವಿಶ್ವಾಸ ಪತ್ರಕ್ಕೆ ಸಹಿ ಹಾಕಿ ಸಲ್ಲಿಸಿದ್ದರು. ಆದ್ದರಿಂದ ಅವರು ರಾಜೀನಾಮೆ ನೀಡಬೇಕಾಗಿತ್ತು. ಆದರೆ ಅವರು ತಮ್ಮ ಸ್ಥಾನ ತ್ಯಜಿಸಲಿಲ್ಲ ಎಂದರು.Related Articles

Advertisement
Previous
Next Post »