ದೇಗುಲದ ಕೆಳಗೆ ಸಿಕ್ತು ಚಿನ್ನ: ಸಂಭ್ರಮಿಸಿದ ಗ್ರಾಮಸ್ಥರಿಗೆ ಕೆಲವೇ ಕ್ಷಣದಲ್ಲಿ ಶಾಕ್!

December 14, 2020

 


ಚೆನ್ನೈ(ಡಿ.14): ತಮಿಳುನಾಡಿನ ಕಾಂಚೀಪುರಂ ಬಳಿಯ ದೇಗುಲವೊಂದರ ಜೀರ್ಣೋದ್ಧಾರದ ವೇಳೆ ಗ್ರಾಮಸ್ಥರಿಗೆ ಚಿನ್ನ ಸಿಕ್ಕಿದೆ. ಮಾಧ್ಯಮ ವರದಿಯನ್ವಯ ಉಥಿಮಾಪುರದ ಶಿವ ಮಂದಿರದ ನವೀಕರಣದ ವೇಳೆ ಅರ್ಧ ಕೆಜಿಗೂ ಅಧಿಕ ತೂಕವಿರುವ ಚಿನ್ನದ ವಸ್ತುಗಳು ಲಭ್ಯವಾಗಿವೆ. ಉಥಿಮಾಪುರ ಕಾಂಚೀಪುರಂನಿಂದ ಸುಮಾರು 40 ಕಿಲೋ ಮೀಟರ್ ಹಾಗೂ ಚೆನ್ನೈನಿಂದ ಸುಮಾರು 90 ಕಿಲೋ ಮೀಟರ್ ದೂರದಲ್ಲಿದೆ.

ಚಿನ್ನಕ್ಕಾಗಿ ದೊಡ್ಡ ಕೆರೆಯ ನೀರು ಖಾಲಿ ಮಾಡಲು ಮುಂದಾದರು

ಚಿನ್ನ ವಶಕ್ಕೆ

ಈ ಮಾಹಿತಿ ಸಿಕ್ಕ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಈ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲಿ ಈ ಚಿನ್ನದ ವಸ್ತುಗಳು ಸಿಕ್ಕವೋ, ದೇಗುಲ ಜೀರ್ಣೋದ್ಧಾರದ ಬಳಿಕ ಅವುಗಳನ್ನು ಅಲ್ಲೇ ಇಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಬೃಹತ್ ಪೊಲೀದ್ ಪಡೆಅಧಿಕಾರಿಗಳು ಅದೆಷ್ಟು ಅರ್ಥೈಸಿದರೂ ಗ್ರಾಮಸ್ಥರ ಕೇಳದಾಗ ಇಲ್ಲಿಗೆ ಬಹು ಒಡ್ಡ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿದ್ದಾರೆ. ಇದಾದ ಬಳಿಕ ಪೊಲೀಸ್ ಭದ್ರತೆ ಜೊತೆ ಇಲ್ಲಿಂದ ಚಿನ್ನವನ್ನು ಸಾಗಿಸಲಾಗಿದೆ.

ಇನ್ನು ಗ್ರಾಮಸ್ಥರು ನೀಡಿದ ಮಾಹಿಹತಿ ಅನ್ವಯ ಇದು ಪುರಾತನ ದೇಗುಲವಾಗಿದೆ. ಇದು ಚೋಳರ ಕಾಲದಲ್ಲಿ ನಿರ್ಮಿಸಲಾದ ದೇಗುಲವಾಗಿದ್ದು, ಇಲ್ಲಿ ಸಿಕ್ಕ ಲೋಹ ಚಿನ್ನದ್ದೆಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಈ ಚಿನ್ನದ ಮೌಲ್ಯ ಎಷ್ಟು ಎಂದು ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

Advertisement
Previous
Next Post »