ಮೊಟ್ಟೆ ಮೊದಲಾ..? ಕೋಳಿ ಮೊದಲಾ..? ಎಂಬ ಉತ್ತರ ಸಿಗದ ಪ್ರಶ್ನೆ ಮನೆಮಾತಾಗಿರೊದಂತು ನಿಜ. ಅದೇ ರೀತಿ ಮೊಟ್ಟೆ ಮಾಂಸಹಾರಿಯೋ ಅಥವಾ ಸಸ್ಯಹಾರಿಯೋ ಎಂಬ ಪ್ರಶ್ನೆಗೆ ಹಲವರು ಸಸ್ಯಹಾರಿ ಎಂದರೇ ಇನ್ನು ಕೆಲವರು ಮೊಟ್ಟೆಯಲ್ಲಿ ಕೋಳಿ ಮರಿ ಬೆಳೆಯುವುದರಿಂದ ಅದು ಮಾಂಸಹಾರಿಯೇ ಸರಿ ಎಂದು ತಮ್ಮ ನಿಲುವನ್ನ ಮಂಡಿಸುತ್ತಾರೆ. ಇದರ ಕುರಿತು ಬಹಳಷ್ಟು ಬಾರಿ ಚರ್ಚೆ ನಡೆಸಿದವರು ಇದ್ದಾರೆ.
ಕೊನೆಗೂ ಉತ್ತರ ಸಿಗದೆ ತಮ್ಮದೆ ವಾದ ಸರಿ ಎಂದು ತೃಪ್ತಿಪಟ್ಟಿಕೊಳ್ಳುತ್ತಾರೆ. ಪ್ರಪಂಚದಲ್ಲಿ ಇಂತ ಪ್ರಶ್ನೆಗಳು ಮರುಕಳಿಸುತ್ತಲೇ ಇರುತ್ತವೆ. ಆದರೇ ನಾವು ವಿಜ್ಞಾನದ ರೂಪದಲ್ಲಿ ನೋಡುವುದಾದರೇ ವಿಜ್ಞಾನಿಗಳು ಈ ಪ್ರಶ್ನೆಗೆ ಉತ್ತರ ಕಂಡು ಕೊಂಡಿದ್ದಾರೆ. ಆದರೇ ಇನ್ನು ಕೆಲವರು ಆ ನಿಲುವುಗಳನ್ನು ನಂಬಲು ರೆಡಿ ಇಲ್ಲದವರಂತೆ ವರ್ತಿಸುತ್ತಾರೆ. ಆದರೇ ನಾವು ಇಲ್ಲಿ ಹೇಳುತ್ತಿರುವುದು ವಿಜ್ಞಾನದ ಅರ್ಥದಲ್ಲಿ ವಿಜ್ಞಾನಿಗಳು ಕಂಡು ಕೊಂಡಿರುವ ಉತ್ತರದ ಬಗ್ಗೆ.
ಮಾಂಸಹಾರಿ ಅಥವಾ ಸಸ್ಯಹಾರಿ ಎಂಬ ತರ್ಕಕ್ಕೆ ಕಾರಣ ?
ಕೆಲವು ಸಸ್ಯಹಾರಿಗಳು ಮೊಟ್ಟೆಯನ್ನು ಸಸ್ಯಹಾರಿ ಎಂದು ಒಪ್ಪಿಕೊಳ್ಳದೇ ತಿನ್ನುವುದಿಲ್ಲ. ಕಾರಣ ಕೋಳಿ ಮಾಂಸಹಾರಿಯಾಗಿದೆ ಅದರಿಂದ ಬರುವ ಮೊಟ್ಟೆಯಲ್ಲಿ ತನ್ನ ಮ ರಿಯನ್ನು ಹೊಂದಿರುತ್ತದೆ ಅದಕ್ಕೆ ಅದು ಮಾಂಸಹಾರಿ ಎನ್ನುತ್ತಾರೆ.
ಮೊಟ್ಟೆ ಸಸ್ಯಹಾರಿಯೇ ?
ಹೌದು ಎನ್ನುತ್ತಾರೆ ವಿಜ್ಞಾನಿಗಳು. ಕಾರಣ ಮೊಟ್ಟೆಯಿಂದ ಮರಿಗಳು ಹೊರಬರುತ್ತದೆ ಎಂಬ ಕಲ್ಪನೆ ಎಲ್ಲರಲ್ಲೂ ಇದೆ. ಅದಕ್ಕಾಗಿದೆ ಮೊಟ್ಟೆ ಮಾಂಸಹಾರಿ ಎನ್ನುವವರಿದ್ದಾರೆ ಆದರೇ ಈ ಕಾರಣಕ್ಕಾಗಿಯೇ ನಾವು ಮೊಟ್ಟೆಗಳು ಮಾಂಸಹಾರಿ ಎಂದು ಪರಿಗಣಿಸಲಾಗುವುದಿಲ್ಲ. ಕಾರಣ ಮಾರುಕಟ್ಟೆಯಲ್ಲಿ ದೊರಕುವ ಹೆಚ್ಚಿನ ಮೊಟ್ಟೆಗಳಿಂದ ಮರಿಯಾಗುವುದೇ ಇಲ್ಲ. ಅದರಿಂದ ಕೋಳಿಗಳು ಹೊರ ಬರುವುದಿಲ್ಲ ಎಂದು ತಿಳಿಸಿದ್ದಾರೆ.
ವಿಜ್ಞಾನಿಗಳು ಹೇಳುವಂತೆ ಮೊಟ್ಟೆ ಮೂರು ಪದರಗಳಿಂದ ಕೂಡಿರುತ್ತದೆ. ಮೊದಲ ಸಿಪ್ಪೆ, ಎರಡನೆಯದು ಅಲ್ಬುಮೆನ್ ಹಾಗೂ ಮೂರನೆಯದು ಮೊಟ್ಟೆಯ ಹಳದಿಯ ಲೋಳೆಯಾಗಿದೆ. ಮೊಟ್ಟೆಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಮೊಟ್ಟೆಯ ಅಲ್ಬುಮಿನ್ ಕೇವಲ ಪ್ರೋಟೀನನ್ನು ಮಾತ್ರ ಹೊಂದಿರುತ್ತದೆ. ಅದರಲ್ಲಿ ಪ್ರಾಣಿಗಳ ಯಾವುದೇ ಭಾಗಗಳು ಇರುವುದಿಲ್ಲ. ಇದಕ್ಕಾಗಿಯೇ ತಾಂತ್ರಿಕವಾಗಿ ಮೊಟ್ಟೆಯು ಬಿಳಿ ಸಸ್ಯಹಾರಿ.
ಮೊಟ್ಟೆಯ ಬಿಳಿ ಬಣ್ಣದಂತೆ ಮೊಟ್ಟೆಯಲ್ಲಿರುವ ಹಳದಿ ಲೋಳೆಯು ಪ್ರೋಟೀನ್ ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ಆದರೇ ಈ ಹಂತದವರೆಗೂ ಅವುಗಳಲ್ಲಿ ಪ್ರಾಣಿಗಳ ಮಾರ್ಪಾಡು ಇರುವುದಿಲ್ಲ. ಬೇರೆ ಕೋಳಿಗಳೊಂದಿಗೆ ಕೂಡಿದ ನಂತರ ಅವುಗಳಲ್ಲಿ ಗ್ಯಾಮೆಟ್ ಕೋಶಗಳನ್ನು ಸೇರುವುದರಿಂದ ಮಾಂಸಹಾರಿಗಳನ್ನಾಗಿ ಮಾಡುತ್ತದೆ.
ಆದರೇ ಇಲ್ಲಿ ಗಮನಿಸಬೇಕಾದ ಅಂಶ ಎಂದರೇ ಎಲ್ಲಾ ಕೋಳಿಗಳು ಮೊಟ್ಟ ಇಡಲು ಹೆಣ್ಣು ಕೋಳಿ ಇತರ ಕೋಳಿಯೊಂದಿಗೆ ಸಂಪರ್ಕಕ್ಕೆ ಬಂದಿರುವುದು ಅನಿವಾರ್ಯವಲ್ಲ. ಈ ಮೊಟ್ಟೆಗಳನ್ನು ಫಲವತ್ತಾಗಿಸದ ಮೊಟ್ಟೆ ಎಂದು ಕರೆಯಲಾಗುತ್ತದೆ. ಕೋಳಿಗಳು ಇಂತಹ ಮೊಟ್ಟೆಗಳಿಂದ ಹೊರ ಬರಲು ಸಾಧ್ಯವಿಲ್ಲ ಎಂಬುದು ವಿಜ್ಞಾನಿಗಳ ವಾದವಾಗಿದೆ. ವಿಜ್ಞಾನಿಗಳ ಈ ಪ್ರಯೋಗದಿಂದ ಮೊಟ್ಟೆ ಮಾಂಸಹಾರಿಯಲ್ಲ ಸಸ್ಯಾಹಾರಿ ಎಂದು ಹೇಳಬಹುದು ಅಲ್ಲವೇ.
EmoticonEmoticon