ನಿತ್ಯಭವಿಷ್ಯ|ಈ ರಾಶಿಯವರು ಇಂದು ವಜ್ರದ ಹರಳನ್ನು ಧರಿಸುವುದಕ್ಕೆ ಮುಂದಾಗದಿರಿ..

 


ಮೇಷ: ಒಂದೇ ದಾರಿ ಎಂಬ ಮನಃಸ್ಥಿತಿ ನಿಮ್ಮದು. ಅದನ್ನು ಬದಲಿಸಿ ವಿವಿಧ ದಾರಿಗಳ ಆಯ್ಕೆ ಇರಲಿ. ನೆಮ್ಮದಿ ಲಭಿಸುತ್ತದೆ. ಶುಭಸಂಖ್ಯೆ: 1

ವೃಷಭ: ಶಾಸನದ ಇತಿಮಿತಿಗಳನ್ನು ಚೆನ್ನಾಗಿ ಅರಿತಿದ್ದೀರಿ. ಆದರೆ ನಿಮ್ಮ ಹೋರಾಟವನ್ನು ಮಧ್ಯದಲ್ಲಿಯೇ ಕೈಬಿಡುವುದಕ್ಕೆ ಹೋಗದಿರಿ. ಶುಭಸಂಖ್ಯೆ: 8

ಮಿಥುನ: ಏಕಾಏಕಿ ವಜ್ರದ ಹರಳನ್ನು ಧರಿಸುವುದಕ್ಕೆ ಮುಂದಾಗದಿರಿ. ಅದು ಕೆಲವು ತೊಂದರೆಗಳಿಗೆ ಕಾರಣವಾದೀತು. ಎಚ್ಚರವಿರಲಿ. ಶುಭಸಂಖ್ಯೆ: 4

ಕಟಕ: ವಿನಯವೇ ನಿಮ್ಮ ಪಾಲಿನ ದೊಡ್ಡ ಆಸ್ತಿಯಾಗಿದೆ. ಜನ ನಿಮ್ಮ ವಿಶಿಷ್ಟ ಪ್ರತಿಭೆಯನ್ನು ಗುರುತಿಸುವ ಅದೃಷ್ಟದ ಕಾಲ ಎದುರಾಗಲಿದೆ. ಶುಭಸಂಖ್ಯೆ: 3

ಸಿಂಹ: ನೀತಿಮಾತು ಬೋಧಿಸುತ್ತ ನಾಟಕವಾಡುವವರು ಭೇಟಿಯಾಗುತ್ತಾರೆ.

ಅವರ ಬಳಿ ತಾಳ್ಮೆಯಿಂದ ಮಾತಾಡಿದರೆ ಕಷ್ಟವಾಗದು. ಶುಭಸಂಖ್ಯೆ: 9ಕನ್ಯಾ: ತಿಳಿದಿದ್ದನ್ನು ಅಳವಡಿಸಿಕೊಳ್ಳುವ ಯತ್ನದಲ್ಲಿ ಸಾಗುತ್ತಿದ್ದೀರಿ. ಅಪರಿಚಿತರ ಸಲಹೆಗಳನ್ನು ಕಾರ್ಯರೂಪಕ್ಕೆ ತರಬೇಡಿ. ಶುಭಸಂಖ್ಯೆ: 5

ತುಲಾ: ಅನವಶ್ಯಕ ಕಾರಣಗಳನ್ನು ಮುಂದಿಟ್ಟು ವಿವಾದಗಳನ್ನು ಸೃಷ್ಟಿಸುವವರು ಅಪಾಯ ತಂದೊಡ್ಡಿಯಾರು. ಎಚ್ಚರ. ಶುಭಸಂಖ್ಯೆ: 7

ವೃಶ್ಚಿಕ: ಮಾತನಾಡುವುದಕ್ಕೆ ಅಂಜಿ ಹಿಂಜರಿದುಬಿಟ್ಟರೆ ಸೋತುಹೋಗುತ್ತೀರಿ. ನಿಮಗೆ ತಿಳಿದ ಎಲ್ಲವನ್ನೂ ಪ್ರಶಾಂತವಾಗಿಯೇ ನಿರೂಪಿಸಿ. ಶುಭಸಂಖ್ಯೆ: 2

ಧನುಸ್ಸು: ಅಪ್ರಿಯ ಸತ್ಯಗಳನ್ನು ಹೇಳುವ ಅವಸರ ಬೇಡ. ಪ್ರತ್ಯಕ್ಷ ಕಂಡಿದ್ದನ್ನು ಪ್ರಮಾಣಿಸಿ ನೋಡುವ ವಿವೇಕವೂ ಅಂತರಂಗದಲ್ಲಿರಲಿ. ಶುಭಸಂಖ್ಯೆ: 6

ಮಕರ: ಕೆಲವರು ಕುಂಟುನೆಪ ಮುಂದಿಟ್ಟುಕೊಂಡು ತಗಾದೆ ಎಬ್ಬಿಸಲು ಪ್ರಯತ್ನ ಮಾಡಬಹುದು. ಅಂಥವರನ್ನು ನಿರ್ಲಕ್ಷಿಸಿಬಿಡಿ. ಶುಭಸಂಖ್ಯೆ: 1

ಕುಂಭ: ನಿಮ್ಮ ಚಿಂತನಶೀಲ ಸೂಕ್ಷ್ಮ ಮನಸ್ಸು ನೈತಿಕ ಪ್ರಜ್ಞೆಯ ಉಳಿವಿಗಾಗಿಶ್ರಮಿಸಲಿದೆ. ಇದಕ್ಕೆ ಜನಬೆಂಬಲವೂ ಸಿಗಲಿದೆ. ಶುಭಸಂಖ್ಯೆ: 8

ಮೀನ: ಆದಾಯ ತೆರಿಗೆಯ ಬಗೆಗಿನ ಕಾನೂನುಗಳನ್ನು ಸರಿಯಾಗಿ ಪಾಲಿಸಿ. ಇಲ್ಲವಾದರೆ ಮುಂದೆ ನಿಮಗೇ ತೊಂದರೆ ಆದೀತು. ಶುಭಸಂಖ್ಯೆ: 4

Comments