ಮೊಸರು ಪ್ರಿಯರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

December 07, 2020

 


ನೀವು ಮೊಸರು ಪ್ರಿಯರೆ. ಈ ಚಳಿಗಾಲದಲ್ಲಿ ಮೊಸರಿನಿಂದ ದೂರವಿರಲು ಸಾಧ್ಯವಾಗದೆ ಒದ್ದಾಡುತ್ತಿದ್ದೀರೇ, ಹಾಗಿದ್ದರೆ ಇಲ್ಲಿ ಕೇಳಿ, ಸೇಫ್ ಆಗಿ ಮೊಸರು ಸೇವಿಸುವ ಕೆಲವು ವಿಧಾನಗಳನ್ನು ತಿಳಿಯೋಣ.

ಮೊಸರು ಜೀರ್ಣಕ್ರಿಯೆ, ಮಲಬದ್ಧತೆ, ವಾಯುಸಮಸ್ಯೆ ಮೊದಲಾದ ಸಮಸ್ಯೆಗಳನ್ನು ದೂರಮಾಡುವ ದಿವ್ಯೌಷಧ. ಆದರೆ ಚಳಿಗಾಲದಲ್ಲಿ ಇದನ್ನು ಹೆಚ್ಚು ಸೇವಿಸಿದರೆ ಕಫ ಸಂಬಂಧಿ ಸಮಸ್ಯೆಗಳು ಕಾಡಬಹುದು. ಇದರ ನಿವಾರಣೆಗೆ ಮೊಸರಿಗೆ ಚಿಟಿಕೆ ಉಪ್ಪು ಮತ್ತು ಸಕ್ಕರೆ ಸೇರಿಸಿ ಸವಿಯಿರಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಚಪಾತಿ ಕಲೆಸುವಾಗ ಬಿಸಿನೀರು ಬಳಸುವ ಮೊದಲು ಮೊಸರು ಸೇರಿಸಿ ನೋಡಿ, ಇದು ಚಪಾತಿಗೆ ವಿಭಿನ್ನ ರುಚಿ ಕೊಡುವುದು ಮಾತ್ರವಲ್ಲ ಪೋಷಕಾಂಶಗಳನ್ನೂ ಹೆಚ್ಚಿಸುತ್ತದೆ. ಚಪಾತಿಯನ್ನು ಮತ್ತಷ್ಟು ಮೃದುವಾಗಿಸುತ್ತದೆ.

ಮಕ್ಕಳಿಗೆ ಬೇಯಿಸಿದ ತರಕಾರಿ ಕೊಡುವಾಗ ಸ್ವಲ್ಪ ಮೊಸರು ಸೇರಿಸಿ.

ಸಲಾಡ್ ತಯಾರಿಸುವಾಗಲೂ ಮೊಸರು ಬಳಸಿ. ಮಿಶ್ರ ತರಕಾರಿಗಳ ರಾಯಿತ ತಯಾರಿಸಿ. ಇದರಿಂದ ಜೀರ್ಣಕ್ರಿಯೆಯೂ ಹೆಚ್ಚುತ್ತದೆ. ಮಕ್ಕಳ ಆರೋಗ್ಯವೂ ಸುಧಾರಿಸುತ್ತದೆ.


Related Articles

Advertisement
Previous
Next Post »