BIGG NEWS : ಭಾರತಕ್ಕೂ ಕಾಲಿಟ್ಟ 'UK ಹೊಸ ವೈರಸ್' : ದೆಹಲಿಯಲ್ಲಿ ಐವರಿಗೆ, ಚೈನ್ನೈನಲ್ಲಿ ಒಬ್ಬರಿಗೆ ದೃಢ

December 22, 2020
Tuesday, December 22, 2020

 


ನವದೆಹಲಿ : ಬ್ರಿಟನ್ ನಲ್ಲಿ ಹೊಸ ಕೊರೋನಾ ವೈರಸ್ ಸೋಂಕಿನ ಅಲೆ ಶುರುವಾಗಿದೆ. ಇದರಿಂದಾಗಿ ಇಡೀ ವಿಶ್ವವೇ ಅಲರ್ಟ್ ಆಗಿದೆ. ಇತ್ತಾ ಯುಕೆ ಹೊಸ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ದೆಹಲಿಯಲ್ಲಿ ಐವರಿಗೆ, ಚೆನ್ನೈನಲ್ಲಿ ಒಬ್ಬರಿಗೂ ಹೊಸ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಬ್ರಿಟನ್ ನಿಂದ ದೆಹಲಿಗೆ ಆಗಮಿಸಿದ್ದಂತ 266 ಜನರನ್ನು ವಿಮಾನ ನಿಲ್ದಾಣದಲ್ಲಿಯೇ ಯುಕೆ ಹೊಸ ಕೊರೋನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂತಹ 266 ಜನರಲ್ಲಿ ಐವರಿಗೆ ಹೊಸ ಬಗೆಯ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ.

ಇತ್ತ ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣಕ್ಕೆ ಇಂಗ್ಲೆಂಡ್ ನಿಂದ ಆಗಮಿಸಿದ್ದಂತ ವ್ಯಕ್ತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಿದಾಗ, ಅವರಿಗೂ ಹೊಸ ಮಾದರಿಯ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ.

ಹೀಗಾಗಿ ತಮಿಳುನಾಡಿನಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಒಟ್ಟಾರೆಯಾಗಿ ಯುಕೆ ಹೊಸ ಕೊರೋನಾ ವೈರಸ್ ಸೋಂಕು ಭಾರತಕ್ಕೂ ಕಾಲಿಟ್ಟಿದೆ. ಇದುವರೆಗೆ ಇಂಗ್ಲೆಂಡ್, ಬ್ರಿಟನ್ ನಿಂದ ಭಾರತಕ್ಕೆ ಬಂದಂತ 6 ಜನರಲ್ಲಿ ಹೊಸ ಮಾದರಿಯ ಕೊರೋನಾ ವೈರಸ್ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಮೂಲಕ ಯುಕೆ ಹೊಸ ವೈರಸ್ ಭಾರತಕ್ಕೂ ಕಾಲಿಟ್ಟಂತೆ ಆಗಿದೆ.

Thanks for reading BIGG NEWS : ಭಾರತಕ್ಕೂ ಕಾಲಿಟ್ಟ 'UK ಹೊಸ ವೈರಸ್' : ದೆಹಲಿಯಲ್ಲಿ ಐವರಿಗೆ, ಚೈನ್ನೈನಲ್ಲಿ ಒಬ್ಬರಿಗೆ ದೃಢ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on BIGG NEWS : ಭಾರತಕ್ಕೂ ಕಾಲಿಟ್ಟ 'UK ಹೊಸ ವೈರಸ್' : ದೆಹಲಿಯಲ್ಲಿ ಐವರಿಗೆ, ಚೈನ್ನೈನಲ್ಲಿ ಒಬ್ಬರಿಗೆ ದೃಢ

Post a Comment