BIG NEWS: ಶಾಲೆ ಆರಂಭವಾದ್ರೂ ಮಕ್ಕಳಿಗೆ 'ಬಿಸಿಯೂಟ' ಇಲ್ಲ..! ಮನೆಯಿಂದಲೇ ಊಟ ತರಬೇಕು..!!

December 18, 2020
Friday, December 18, 2020

 


ಬೆಂಗಳೂರು: ಈ ವರ್ಷ ಶಾಲಾ ಮಕ್ಕಳಿಗೆ ಬಿಸಿಯೂಟ ಇರುವುದಿಲ್ಲ. ನೇರವಾಗಿಯೇ ಆಹಾರಧಾನ್ಯ ಪೂರೈಕೆ ಮಾಡಲಾಗುತ್ತದೆ.

ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ದಿನಕ್ಕೆ 100 ಗ್ರಾಂ ಅಕ್ಕಿ ಅಥವಾ ಗೋಧಿ ಹಾಗೂ 58 ಗ್ರಾಂ ತೊಗರಿಬೇಳೆ ನೀಡಲಾಗುವುದು. 6 ರಿಂದ 10 ನೇ ತರಗತಿಯ ಮಕ್ಕಳಿಗೆ ದಿನಕ್ಕೆ 150 ಗ್ರಾಂ ಅಕ್ಕಿ ಅಥವಾ ಗೋಧಿ, 87 ಗ್ರಾಂ ಬೇಳೆ ವಿತರಿಸಲಾಗುತ್ತದೆ.

ಕೊರೋನಾ ಕಾರಣದಿಂದಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳಿಗೆ ಬಿಸಿಯೂಟ ನೀಡದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತಾಗಿ ನ್ಯಾಯಾಲಯಕ್ಕೆ ಕೂಡ ಮಾಹಿತಿ ನೀಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಕೊರೋನಾ ಕಾರಣದಿಂದ ಬಿಸಿಯೂಟದ ಬದಲು ಆಹಾರಧಾನ್ಯವನ್ನು ನೀಡಲು ಮುಂದಾಗಿದೆ.


ಜನವರಿ 1 ರಿಂದ ಎಸ್‌ಎಸ್‌ಎಲ್ಸಿ ಮತ್ತು 12ನೇ ತರಗತಿ ಆರಂಭವಾಗುವ ಸಾಧ್ಯತೆಯಿದೆ.

ವಿದ್ಯಾಗಮ ಯೋಜನೆಯಡಿ 1ರಿಂದ 9ನೇ ತರಗತಿಗಳು ಶಾಲೆಯ ಆವರಣದಲ್ಲಿ ನಡೆದರೂ ಬಿಸಿಯೂಟ ನೀಡುವುದಿಲ್ಲ. ಮಕ್ಕಳು ಮನೆಯಿಂದಲೇ ಊಟ ತರಬೇಕಿದೆ. ಬಿಸಿಯೂಟ ಬದಲಿಗೆ ಆಹಾರಧಾನ್ಯ ನೀಡಲಾಗುವುದು ಎಂದು ಹೇಳಲಾಗಿದೆ.

Thanks for reading BIG NEWS: ಶಾಲೆ ಆರಂಭವಾದ್ರೂ ಮಕ್ಕಳಿಗೆ 'ಬಿಸಿಯೂಟ' ಇಲ್ಲ..! ಮನೆಯಿಂದಲೇ ಊಟ ತರಬೇಕು..!! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on BIG NEWS: ಶಾಲೆ ಆರಂಭವಾದ್ರೂ ಮಕ್ಕಳಿಗೆ 'ಬಿಸಿಯೂಟ' ಇಲ್ಲ..! ಮನೆಯಿಂದಲೇ ಊಟ ತರಬೇಕು..!!

Post a Comment