BIG BREAKING: ಸೂಪರ್ ಫಾಸ್ಟ್ ಕೊರೋನಾ ತಡೆಗೆ ಮೋದಿ ಪ್ಲಾನ್ -ನಾಳೆ ಮಹತ್ವದ ನಿರ್ಧಾರ ಘೋಷಣೆ ಸಾಧ್ಯತೆ

December 22, 2020

 


ನವದೆಹಲಿ: ರೂಪಾಂತರಗೊಂಡ ಕೊರೋನಾ ಹೊಸ ವೈರಸ್ ಯುರೋಪ್ ಕಂಟ್ರಿಗಳಲ್ಲಿ ತಲ್ಲ ತಂದಿದ್ದು, ಭಾರತದಲ್ಲಿಯೂ ಆತಂಕ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಬ್ರಿಟನ್ ಗೆ ಹೋಗುವ ಮತ್ತು ಬರುವ ಎಲ್ಲ ವಿಮಾನಗಳ ಸಂಚಾರವನ್ನು ಡಿಸೆಂಬರ್ 31 ರವರೆಗೆ ರದ್ದು ಮಾಡಲಾಗಿದೆ. ರೂಪಾಂತರ ಕೊರೋನಾ ವೈರಸ್ ಅತಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಭೆ ಕರೆದಿದ್ದಾರೆ.

ನಾಳೆ ನಡೆಯಲಿರುವ ಸಭೆಯಲ್ಲಿ ಕೊರೋನಾ ಹೊಸ ಪ್ರಭೇದದ ಬಗ್ಗೆ ಚರ್ಚೆ ನಡೆಸಿ ಸೋಂಕು ತಡೆಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಕ್ರಿಸ್ಮಸ್, ಹೊಸ ವರ್ಷಾಚರಣೆ ವೇಳೆ ರೂಪಾಂತರ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡಬಹುದಾದ ಆತಂಕದ ಹಿನ್ನೆಲೆಯಲ್ಲಿ ನಾಳೆ ಪ್ರಧಾನಿ ಕರೆದಿರುವ ಸಂಪುಟ ಸಭೆ ಬಗ್ಗೆ ತೀವ್ರ ಕುತೂಹಲ ಮೂಡಿದೆ.

ಸೋಂಕು ತಡೆಗೆ ನೈಟ್ ಕರ್ಫ್ಯೂ ಸೇರಿ ಹಲವು ನಿರ್ಬಂಧಗಳನ್ನು ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ.

Related Articles

Advertisement
Previous
Next Post »