ವರ್ಗಾವಣೆ ಕೋರಿ 71 ಸಾವಿರ ಶಿಕ್ಷಕರ ಅರ್ಜಿ

December 14, 2020

ಬೆಂಗಳೂರು: ಕಳೆದ ಬಾರಿ (2019-20)ಕಡ್ಡಾಯ ವರ್ಗಾವಣೆ ಮತ್ತು ಹೆಚ್ಚುವರಿ ವರ್ಗಾವಣೆಯಿಂದ ಅನನುಕೂಲ ಆಗಿರುವವರು, ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಸೇರಿ ಒಟ್ಟು 71,558 ಶಿಕ್ಷಕರು 'ಶಿಕ್ಷಕ ಮಿತ್ರ' ಆಯಪ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ, ಸುಮಾರು 30 ಸಾವಿರ ಮಂದಿಗೆ 'ವರ್ಗಾವಣೆ ಭಾಗ್ಯ' ಸಿಗುವ ಸಾಧ್ಯತೆ ಇದೆ.

ಈವರೆಗೆ ಶೇ 5ರಷ್ಟು ಮಾತ್ರ ವರ್ಗಾವಣೆಗೆ ಅವಕಾಶವಿತ್ತು, ಕಾಯ್ದೆ ತಿದ್ದುಪಡಿ ಮೂಲಕ ಶೇ 11ರಷ್ಟು ವರ್ಗಾವಣೆಗೆ ಅವಕಾಶ ಕಲ್ಪಿಸಿರುವುದರಿಂದ ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಶಿಕ್ಷಕರ ವರ್ಗಾವಣೆಗೆ ಅವಕಾಶವಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

'ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ಇದೇ 16ರಿಂದ ಕೌನ್ಸೆಲಿಂಗ್‌ ಆರಂಭವಾಗಬೇಕಿತ್ತು. ಆದರೆ, ಗ್ರಾಮ ಪಂಚಾಯಿತಿ ಚುನಾವಣೆ ಇರುವುದರಿಂದ ಈ ಪ್ರಕ್ರಿಯೆಯ ದಿನಗಳು ಬದಲಾಯಿಸಲು ಉದ್ದೇಶಿಸಲಾಗಿದೆ.

ಫೆ. 15ರ ಒಳಗೆ ಇಡೀ ವರ್ಗಾವಣೆ ಪ್ರಕ್ರಿಯೆ ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ' ಎಂದೂ ಮೂಲಗಳು ಹೇಳಿವೆ.

ಈ ಬಾರಿ ಜಿಲ್ಲೆಯ ಒಳಗೆ ವರ್ಗಾವಣೆ ಕೋರಿ 48,315 ಶಿಕ್ಷಕರು ಅರ್ಜಿ ಸಲ್ಲಿಸಿದ್ದು, ವರ್ಗಾವಣೆಯ ಕಾಯ್ದೆ ಅನ್ವಯ ಶೇ 7ರಷ್ಟು ಮಂದಿಯ ವರ್ಗಾವಣೆಗೆ ಅವಕಾಶವಿದೆ. ಅದರನ್ವಯ 14 ಸಾವಿರ ಮಂದಿಗೆ ವರ್ಗಾವಣೆ ಸಾಧ್ಯತೆ ಇದೆ. ವಿಭಾಗಮಟ್ಟದಲ್ಲಿ 9,388, ಅಂತರ್‌ ವಿಭಾಗ ಮಟ್ಟದಲ್ಲಿ 6,200 ಶಿಕ್ಷಕರು ವರ್ಗಾವಣೆ ಕೋರಿದ್ದಾರೆ. ವಿಭಾಗ ಮತ್ತು ಅಂತರವಿಭಾಗ ಮಟ್ಟದಲ್ಲಿ ತಲಾ ಶೇ 2ರಷ್ಟು ವರ್ಗಾವಣೆಗೆ ಅವಕಾಶವಿದೆ. ಅಲ್ಲದೆ, ಪರಸ್ಪರ ವರ್ಗಾವಣೆ ಕೋರಿ 3,200 ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲ ಅರ್ಜಿಗಳನ್ನು ಅರ್ಹತೆ ಮತ್ತು ಖಾಲಿ ಹುದ್ದೆಗಳನ್ನು ಆಧರಿಸಿ ವರ್ಗಾವಣೆಗೆ ಪರಿಗಣಿಸಲಾಗುತ್ತದೆ.ರಾಜ್ಯದಲ್ಲಿ 1.88 ಲಕ್ಷ ಪ್ರಾಥಮಿಕ ಮತ್ತು 41 ಸಾವಿರ ಪ್ರೌಢ ಶಾಲಾ ಶಿಕ್ಷಕರಿದ್ದಾರೆ. ಒಟ್ಟು ಮಂಜೂರಾದ ಹುದ್ದೆಗಳು 2.40ಲಕ್ಷ. ಸದ್ಯ 2.04 ಲಕ್ಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಳೆದ ವರ್ಷ ಕಡ್ಡಾಯವಾಗಿ ಮತ್ತು ಹೆಚ್ಚುವರಿಯಾಗಿ ವರ್ಗಾವಣೆಗೊಂಡ 3,058 ಶಿಕ್ಷಕರು ಮತ್ತೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷ ಹೊರ ತಾಲ್ಲೂಕುಗಳಿಗೆ ಸಿಆರ್‌ಪಿ (ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ), ಬಿಆರ್‌ಪಿ (ಬ್ಲಾಕ್‌ ಸಂಪನ್ಮೂಲ ವ್ಯಕ್ತಿ) ಆಗಿ ಕಡ್ಡಾಯವಾಗಿ ವರ್ಗಾವಣೆಗೊಂಡವರು 1,100 ಶಿಕ್ಷಕರಿದ್ದಾರೆ. ಅವರಿಗೂ ಮರಳಿ ಸ್ವಂತ ತಾಲ್ಲೂಕಿಗೆ ಬರಲು ಅವಕಾಶ ನೀಡಲಾಗುತ್ತದೆ. ಹೀಗೆ, ಈ ಒಟ್ಟು 4,158 ಶಿಕ್ಷಕರಿಗೆ ಮೊದಲ ಹಂತದಲ್ಲಿ ಇದೇ 16ರಿಂದ ವರ್ಗಾವಣೆಗೆ ಕೌನ್ಸೆಲಿಂಗ್‌ ಆರಂಭವಾಗಬೇಕಿತ್ತು. ಜೊತೆಗೆ, ಸಿಆರ್‌ಪಿ ಬಿಆರ್‌ಪಿ, ಮಧ್ಯಾಹ್ನದ ಉಪಾಹಾರ ಯೋಜನೆಯ ಘಟಕಕ್ಕೆ ಸಹಾಯಕ ನಿರ್ದೇಶಕರು ಹೀಗೆ ಇತರ ಹುದ್ದೆಗಳಿಗೆ ಐದು ವರ್ಷಗಳ ಹಿಂದೆ ವರ್ಗಾವಣೆಗೊಂಡವರು 1,000 ಮಂದಿ ಇದ್ದಾರೆ. ಈ ಹುದ್ದೆಗಳಲ್ಲಿ ಐದು ವರ್ಷ ಮಾತ್ರ ಕರ್ತವ್ಯ ನಿರ್ವಹಿಸಲು ಅವಕಾಶವಿದೆ. ಅವರನ್ನು ಬೇರೆಡೆಗೆ (ಶಾಲೆಗಳಿಗೆ) ವರ್ಗಾವಣೆ ಮಾಡಲು ಮೊದಲ ಹಂತದಲ್ಲಿ ಕೌನ್ಸೆಲಿಂಗ್‌ ನಡೆಯಲಿದೆ ಎಂದೂ ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ.

ಕಡ್ಡಾಯ, ಹೆಚ್ಚುವರಿ ವರ್ಗಾವಣೆ: 3,058 ಶಿಕ್ಷಕರಿಂದ ಅರ್ಜಿ

*
ಅರ್ಜಿ ಸಲ್ಲಿಸಿದವರು ಇಷ್ಟಪಟ್ಟ ಸ್ಥಳಗಳಿಗೆ ವರ್ಗಾವಣೆಯಾಗಿ ಹೋಗಬಹುದು. ಅನನುಕೂಲ ಆದವರಿಗೆ ಮುಂದಿನ ಏಪ್ರಿಲ್‌, ಮೇನಲ್ಲಿ ಅವಕಾಶ ಕಲ್ಪಿಸಲಾಗುವುದು.
-ಎಸ್‌. ಸುರೇಶ್‌ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರುRelated Articles

Advertisement
Previous
Next Post »