ಉದ್ಯೋಗ ನಿರೀಕ್ಷಿತರಿಗೆ ಸಿಹಿ ಸುದ್ದಿ: ʼಏರ್​ಪೋರ್ಟ್​ ಅಥಾರಿಟಿʼಯಲ್ಲಿ ಖಾಲಿ ಇರುವ ʼ368 ಹುದ್ದೆʼಗಳಿಗೆ ಅರ್ಜಿ ಆಹ್ವಾನ

December 21, 2020

 


ಡಿಜಿಟಲ್‌ ಡೆಸ್ಕ್:‌ ಏರ್​ಪೋರ್ಟ್​ ಅಥಾರಿಟಿ ಆಫ್​ ಇಂಡಿಯಾ (ಎಎಐ)ದ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 368 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅಧಿಕೃತ ವೆಬ್ಸೈಟ್‌ʼಗೆ ತೆರಳಿ 14.1.2021ರೊಳಗೆ ಅರ್ಜಿ ಸಲ್ಲಿಸಬೋದು.

ಅಂದ್ಹಾಗೆ, ಎಎಐನ 368 ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 155 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 35, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 98, ಎಸ್‍ಸಿಗೆ 56, ಎಸ್‍ಟಿಗೆ 24 ಸ್ಥಾನಗಳನ್ನ ಮೀಸಲಿರಿಸಲಾಗಿದೆ. ಇನ್ನು ಜೂನಿಯರ್ ಎಕ್ಸಿಕ್ಯೂಟೀವ್ ಹುದ್ದೆಗಳಲ್ಲಿ 8 ಸ್ಥಾನಗಳನ್ನ ಶ್ರವಣದೋಷ ಇರುವ (ಅಂಗವಿಕಲ) ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ಸಂಬಳ: ಮ್ಯಾನೇಜರ್ ಹುದ್ದೆಗೆ ಮಾಸಿಕ 60 ಸಾವಿರ ರೂ.

ಹಾಗೂ ಜೂನಿಯರ್ ಎಕ್ಸಿಕ್ಯೂಟೀವ್ ಹುದ್ದೆಗೆ ಮಾಸಿಕ 40,000 ರೂ. ವೇತನ ಜತೆ ಎಎಐ ನಿಯಮದಂತೆ ಡಿಎ, ಬಾಡಿಗೆ ಮನೆ ಭತ್ಯೆ, ವೈದ್ಯಕೀಯ ಭತ್ಯೆ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.

ಹುದ್ದೆಗಳ ವಿವರ
* ಮ್ಯಾನೇಜರ್ ಫೈರ್ ಸರ್ವಿಸ್ - 11
* ಮ್ಯಾನೇಜರ್ ಟೆಕ್ನಿಕಲ್ - 2
* ಜೂನಿಯರ್ ಎಕ್ಸಿಕ್ಯೂಟೀವ್ (ಏರ್​ಟ್ರಾಫಿಕ್ ಕಂಟ್ರೋಲರ್) - 264
* ಜೂನಿಯರ್ ಎಕ್ಸಿಕ್ಯೂಟೀವ್ (ಏರ್​ಪೋರ್ಟ್​ ಆಪರೇಷನ್ಸ್) - 83
* ಜೂನಿಯರ್ ಎಕ್ಸಿಕ್ಯೂಟೀವ್ (ಟೆಕ್ನಿಕಲ್) - 8


ವಿದ್ಯಾರ್ಹತೆ: ಫೈರ್, ಮೆಕ್ಯಾನಿಕಲ್, ಆಟೋಮೊಬೈಲ್ ಇಂಜಿನಿಯರಿಂಗ್‍ನಲ್ಲಿ ಬಿಇ, ಬಿ.ಟೆಕ್ ಪದವಿ, ಫಿಜಿಕ್ಸ್, ಮ್ಯಾಥಮೆಟಿಕ್ಸ್‍ನಲ್ಲಿ ಬಿಎಸ್‍ಸಿ ಪದವಿ, ಎಂಬಿಎ ಪಡೆದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಮ್ಯಾನೇಜರ್ ಹುದ್ದೆಗೆ ಗರಿಷ್ಠ 32 ವರ್ಷಗಳಾಗಿದ್ದು, ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಗರಿಷ್ಠ 27 ವರ್ಷವಾಗಿರಬೇಕು. ಸರ್ಕಾರದ ನಿಯಮದನ್ವಯ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ, ಎಸ್ಸಿ, ಎಸ್‍ಟಿ ಅಭ್ಯರ್ಥಿಗಳಿಗೆ 5, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3ವರ್ಷ ಹಾಗೂ ಎಎಐನ ಸಿಬ್ಬಂದಿಗೆ 10 ವರ್ಷ ವಯೋ ಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳಿಗೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಆನ್‍ಲೈನ್ ಪರೀಕ್ಷೆ ನಡೆಸಲಾಗುತ್ತೆ. ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ, ಸಂದರ್ಶನ, ದೈಹಿಕ ಪರೀಕ್ಷೆ, ಎಂಡ್ಯೂರನ್ಸ್, ಚಾಲನಾ, ಧ್ವನಿ ಪರೀಕ್ಷೆಗಳನ್ನ ನಡೆಸಲಾಗುವುದು.

ಅರ್ಜಿ ಶುಲ್ಕ: ಎಸ್‍ಸಿ, ಎಸ್‍ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 170 ರೂ., ಇತರ ಅಭ್ಯರ್ಥಿಗಳು 1000 ರೂ. ಪಾವತಿಸತಕ್ಕದ್ದು. ಎಎಐನಲ್ಲಿ ಅಪ್ರೆಂಟೀಸ್ ತರಬೇತಿ ಪಡೆದ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇದೆ. ಇನ್ನು ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ http://www.aai.aero ಕ್ಲಿಕ್‌ ಮಾಡಿ.


Related Articles

Advertisement
Previous
Next Post »