ರಾಜ್ಯದ ರೈತರೇ ಗಮನಿಸಿ : 'ಹಿಂಗಾರು ಬೆಳೆ ವಿವರ' ದಾಖಲೆಗೆ ಡಿ.31 ಕೊನೆಯ ದಿನ

December 29, 2020
Tuesday, December 29, 2020

 


ಬಾಗಲಕೋಟೆ : ಜಿಲ್ಲೆಯಲ್ಲಿ 2020-21 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿ ಇದ್ದು, 'ಹಿಂಗಾರು ರೈತರ ಬೆಳೆ ಸಮೀಕ್ಷೆ 2020-21' ಆಯಪ್ ಮೂಲಕ ಬೆಳೆ ವಿವರ ದಾಖಲಿಸಲು ಡಿಸೆಂಬರ 31 ಕೊನೆಯದಿನವಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.

ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್, ಹಿಸ್ಸಾ, ಮಾಲಿಕರ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಿ ಸರ್ವೇ ನಂಬರ್‍ಗಳಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್‍ಲೋಡ್ ಮಾಡಬೇಕು. ಬೆಳೆ ಸಮೀಕ್ಷೆಯ ದತ್ತಾಂಶವನ್ನು ಬೆಳೆ ವಿಮಾ ಯೋಜನೆ, ಕನಿಷ್ಠ ಬೆಂಬಲ ಬೆಲೆ ಯೋಜನೆ, ಪ್ರಕೃತಿ ವಿಕೋಪ ಸಂಭವಿಸಿದಾಗ ಪರಿಹಾರ ವಿತರಿಸಲು ಹಾಗೂ ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಾತಿಗಾಗಿ ಬಳಸ ಬಹುದಾಗಿದೆ.

ಆದ್ದರಿಂದ ಜಿಲ್ಲೆಯ ರೈತ ಬಾಂಧವರು ತಪ್ಪದೇ ತಮ್ಮ ಜಮೀನಲ್ಲಿರುವ ಬೆಳೆಗಳ ವಿವರವನ್ನು ದಾಖಲಿಸಲು ಸರಕಾರದಿಂದ ಸುವರ್ಣಾವಕಾಶವನ್ನು ಕಲ್ಪಿಸಿದ್ದು, ಜಿಲ್ಲೆಯ ರೈತ ಬಾಂಧವರು ತಪ್ಪದೇ ತಮ್ಮ ಜಮೀನಲ್ಲಿರುವ ಬೆಳೆಗಳ ವಿವರವನ್ನು ನಿಗಧಿತ ದಿನಾಂಕದೊಳಗೆ ದಾಖಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳು ಮತ್ತು ರೇಷ್ಮೆ ಅಧಿಕಾರಿಗಳನ್ನು ಸಂಪರ್ಕಿಸ ಬಹುದಾಗಿದೆ.

Thanks for reading ರಾಜ್ಯದ ರೈತರೇ ಗಮನಿಸಿ : 'ಹಿಂಗಾರು ಬೆಳೆ ವಿವರ' ದಾಖಲೆಗೆ ಡಿ.31 ಕೊನೆಯ ದಿನ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ರಾಜ್ಯದ ರೈತರೇ ಗಮನಿಸಿ : 'ಹಿಂಗಾರು ಬೆಳೆ ವಿವರ' ದಾಖಲೆಗೆ ಡಿ.31 ಕೊನೆಯ ದಿನ

Post a Comment