ವಿವಾಹ ವಾರ್ಷಿಕೋತ್ಸವಕ್ಕಾಗಿ ಪತ್ನಿಗೆ ಚಂದ್ರನ ಮೇಲೆ 3 ಎಕರೆ ಪ್ರದೇಶ ಉಡುಗೊರೆ ನೀಡಿದ ಪತಿ ಮಹಾಶಯ!

December 27, 2020

 


ಅಜ್ಮೀರ್: ಹಲವು ಮಂದಿ ತಮ್ಮ ಸಂಗಾತಿಗೆ ಅತ್ಯಮೂಲ್ಯ ಉಡುಗೊರೆಗಳನ್ನು ಕೊಡಬೇಕೆಂದಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಂಗಾತಿಗೆ ಚಂದ್ರನ ಮೇಲೆ 3 ಎಕರೆ ಪ್ರದೇಶವನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ.

ಅಜ್ಮೀರ್ ನ ಸಪ್ನಾ ಅನಿಜಾಗೆ ಅವರ ಪತಿ ಧರ್ಮೇಂದ್ರ ಅನಿಜಾ ಚಂದ್ರನ ಮೇಲೆ 3 ಎಕರೆ ಪ್ರದೇಶವನ್ನು ಉಡುಗೊರೆಯಾಗಿ ನೀಡಿದ್ದಾರೆ.

ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷವಾದದ್ದನ್ನು ಮಾಡಬೇಕೆನಿಸಿತು. ಆದ್ದರಿಂದ ಚಂದ್ರನ ಮೇಲೆ ಜಾಗವನ್ನು ಖರೀದಿಸಿದ್ದಾಗಿ ಧರ್ಮೇಂದ್ರ ಎಎನ್‌ಐ ಗೆ ಹೇಳಿದ್ದಾರೆ.

ಡಿ.24 ರಂದು ವಿವಾಹ ವಾರ್ಷಿಕೋತ್ಸವವಿತ್ತು. ಪ್ರತಿಯೊಬ್ಬರೂ ಕಾರು ಹಾಗೂ ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡುತ್ತಾರೆ, ಆದರೆ ನಾನು ವಿಶೇಷವಾದದ್ದನ್ನು ನೀಡಬೇಕು ಎಂದುಕೊಂಡು ಚಂದ್ರನ ಮೇಲೆ ಜಾಗ ಖರೀದಿಸಿದೆ ಎನ್ನುತ್ತಾರೆ ಧರ್ಮೇಂದ್ರ

ನ್ಯೂಯಾರ್ಕ್ ನಗರದಲ್ಲಿರುವ ಲೂನ ಸೊಸೈಟಿ ಇಂಟರ್ನ್ಯಾಷನಲ್ ನಿಂದ ಧರ್ಮೇಂದ್ರ ಅವರು ಚಂದ್ರನ ಮೇಲೆ ಜಾಗ ಖರೀದಿಸಿದ್ದು, ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಒಂದು ವರ್ಷ ಬೇಕಾಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧರ್ಮೇಂದ್ರ ಪತ್ನಿ, ಈ ರೀತಿಯ ವಿಶೇಷ ಉಡುಗೊರೆಯನ್ನು ನಾನೆಂದೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

Related Articles

Advertisement
Previous
Next Post »