ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 2021 ರ `ಸಾರ್ವತ್ರಿಕ ರಜಾ ದಿನ'ಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ

December 13, 2020

 


ಬೆಂಗಳೂರು: 2021ನೇ ಸಾಲಿಗೆ ಒಟ್ಟು ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸರಕಾರ ಇಂದು ಪ್ರಕಟಿಸಿದೆ.ಅದರ ವಿವಿರ ಈ ಕೆಳಕಂಡತಿದೆ. ಪ್ರತಿ ವರ್ಷದಂತೆ ಮುಂದಿನ 2021ರ ವರ್ಷದ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕರ್ನಾಟಕ ಇಂಡಸ್ಟ್ರೀಯಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ 1963ರಂತೆ ವಾರ್ಷಿಕ ಕನಿಷ್ಠ ಹತ್ತು ದಿನಗಳ ರಜೆಯನ್ನು ಎಲ್ಲಾ ಕಾರ್ಮಿಕರಿಗೂ ಸಂಸ್ಥೆಗಳು ನೀಡುವಂತೆ ಸೂಚಿಸಿದೆ. ಹೀಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತ 2021ನೇ ವರ್ಷದ ಸಾರ್ವಜನಿಕ ರಜಾ ದಿನಗಳ ಪಟ್ಟಿ ಈ ಕೆಳಗಿನಂತಿದೆ.

2021ನೇ ಸಾಲಿನ ಸಾರ್ವಜತ್ರಿಕ ರಜಾ ದಿನಗಳ ಪಟ್ಟಿ

 • 14 ಜನವರಿ 2021, ಗುರುವಾರ - ಮಕರ ಸಂಕ್ರಾಂತಿ
 • 26 ಜನವರಿ 2021, ಮಂಗಳವಾರ - ಗಣರಾಜ್ಯೋತ್ಸವ
 • 11 ಮಾರ್ಚ್ 2021, ಗುರುವಾರ - ಮಹಾಶಿವರಾತ್ರಿ
 • 2 ಏಪ್ರಿಲ್ 2021, ಶುಕ್ರವಾರ - ಗುಡ್ ಫ್ರೈಡೆ
 • 13 ಏಪ್ರಿಲ್ 2021, ಮಂಗಳವಾರ - ಚಂದ್ರಮಾನ ಯುಗಾದಿ
 • 14 ಏಪ್ರಿಲ್ 2021, ಬುಧವಾರ - ಡಾ.ಬಿಆರ್.ಅಂಬೇಡ್ಕರ್ ಜಯಂತಿ
 • 25 ಏಪ್ರಿಲ್ 2021, ಭಾನುವಾರ - ಮಹಾವೀರ ಜಯಂತಿ
 • 1 ಮೇ 2021, ಶನಿವಾರ - ಕಾರ್ಮಿಕರ ದಿನಾಚರಣೆ
 • 14 ಮೇ 2021, ಶುಕ್ರವಾರ - ರಂಜಾನ್, ಬಸವ ಜಯಂತಿ
 • 21 ಜುಲೈ 2021, ಬುಧವಾರ - ಬಕ್ರಿದ್
 • 15 ಆಗಸ್ಟ್ 2021, ಭಾನುವಾರ - ಸ್ವಾತಂತ್ರ್ಯ ದಿನಾಚರಣೆ
 • 19 ಆಗಸ್ಟ್ 2021, ಗುರುವಾರ - ಮೋಹರಂ
 • 20 ಆಗಸ್ಟ್ 2021, ಶುಕ್ರವಾರ - ವರ ಮಹಾಲಕ್ಷ್ಮೀ ಹಬ್ಬ
 • 10 ಸೆಪ್ಟೆಂಬರ್ 2021, ಶುಕ್ರವಾರ - ಗಣೇಶ ಚತುರ್ಥಿ
 • 2 ಅಕ್ಟೋಬರ್ 2021, ಶನಿವಾರ - ಗಾಂಧಿ ಜಯಂತಿ
 • 6 ಅಕ್ಟೋಬರ್ 2021, ಬುಧವಾರ - ಮಹಾಲಯ ಅಮವಾಸೆ
 • 14 ಅಕ್ಟೋಬರ್ 2021, ಗುರುವಾರ - ಆಯುಧ ಪೂಜೆ
 • 19 ಅಕ್ಟೋಬರ್ 2021, ಮಂಗಳವಾರ - ಈದ್ ಮಿಲಾದ್
 • 20 ಅಕ್ಟೋಬರ್ 2021, ಬುಧವಾರ - ವಾಲ್ಮೀಕಿ ಜಯಂತಿ
 • 1 ನವೆಂಬರ್ 2021, ಸೋಮವಾರ - ಕನ್ನಡ ರಾಜ್ಯೋತ್ಸವ
 • 3 ನವೆಂಬರ್ 2021, ಬುಧವಾರ - ನರಕ ಚತುರ್ಧಶಿ
 • 5 ನವೆಂಬರ್ 2021, ಶುಕ್ರವಾರ - ಬಲಿ ಪಾಡ್ಯಮಿ
 • 22 ನವೆಂಬರ್ 2021, ಸೋಮವಾರ - ಕನಕ ದಾಸ ಜಯಂತಿ
 • 25 ಡಿಸೆಂಬರ್ 2021, ಶನಿವಾರ - ಕ್ರಿಸ್ಮಸ್


Related Articles

Advertisement
Previous
Next Post »