ಉದ್ಯೋಗಕಾಂಕ್ಷಿಗಳಿಗೆ ಗುಡ್‌ ನ್ಯೂಸ್:‌ ʼಜನರಲ್ ಸೆಂಟ್ರಲ್ ಸರ್ವೀಸ್ʼನಲ್ಲಿ ಖಾಲಿ ಇರುವ ʼ2000 ಹುದ್ದೆʼಗಳಿಗೆ ಅರ್ಜಿ ಆಹ್ವಾನ..!

December 20, 2020
Sunday, December 20, 2020

 


ನವದೆಹಲಿ: ಭಾರತ ಸರ್ಕಾರದ ಗೃಹ ಸಚಿವಾಲಯ (ಎಂಎಚ್ ಎ) 2020-21ನೇ ಸಾಲಿನ ಐಬಿ ಎಸಿಐಒ (ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್) ಗ್ರೇಡ್-2/ಎಕ್ಸಿಕ್ಯುಟಿವ್ ಪರೀಕ್ಷೆಗಾಗಿ ಅಧಿಸೂಚನೆ ಹೊರಡಿಸಿದ್ದು, ಆಸಕ್ತರು ಎಂಎಚ್‌ಎ mha.gov.in ಅಧಿಕೃತ ವೆಬ್ ಸೈಟ್ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದು.

ಜನರಲ್ ಸೆಂಟ್ರಲ್ ಸರ್ವೀಸ್, ಗ್ರೂಪ್ ಸಿ (ಗೆಜೆಟೆಡ್ ಅಲ್ಲದ, ನಾನ್ ಮಿನಿಸ್ಟ್ರರ್) ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಿದೆ.

ಐಬಿ ಪ್ರಕಾರ, 'ಈ ಹುದ್ದೆ ಭಾರತೀಯ ಸೇವಾ ಹೊಣೆಗಾರಿಕೆಯನ್ನ ಒಳಗೊಂಡಿದೆ. ಆದ್ದರಿಂದ ಭಾರತದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು' ಎಂದರು. ಅರ್ಹತೆಯ ಮಾನದಂಡಗಳನ್ನ ಪೂರೈಸಿದವರು mha.gov.in ಅಥವಾ ncs.gov.in ಮೂಲಕ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಪದವಿ ಹೊಂದಿರಬೇಕು. ಇನ್ನು ಈ ಹುದ್ದೆಗೆ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 27 ವರ್ಷ ಆಗಿರಬೇಕು.

'ಲಭ್ಯವಿರುವ ಅತ್ಯುತ್ತಮ ಪ್ರತಿಭೆಗಳನ್ನ ಆಯ್ಕೆ ಮಾಡಲು ಮತ್ತು ಲಭ್ಯವಿರುವ ಅತ್ಯುತ್ತಮ ಪ್ರತಿಭೆಗಳನ್ನ ಆಯ್ಕೆ ಮಾಡಲು, ಟಯರ್-1 ಪರೀಕ್ಷೆಯಲ್ಲಿ ಕಟ್ ಆಫ್ ಮಾರ್ಕ್ಸ್ (100ರಲ್ಲಿ) ಇರುತ್ತದೆ. UR-35, OBC/EWS-34 & SC/ST-33 (ಎಲ್ಲಾ ಮಾಜಿ ಸೈನಿಕರು ತಮ್ಮ ಸ್ವಂತ ವರ್ಗದಲ್ಲಿ ಅಂದರೆ, UR/EWS/OBC/SC/ST) ಎಂದು ಪರಿಗಣಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಮುಖ ದಿನಾಂಕಗಳು
IB ACIO ಅಧಿಸೂಚನೆ- ಡಿಸೆಂಬರ್ 19, 2020
ಆನ್ ಲೈನ್ ನೋಂದಣಿ ಆರಂಭ - ಡಿಸೆಂಬರ್ 19, 2020
ನೋಂದಣಿಗೆ ಕೊನೆ ದಿನಾಂಕ - ಜನವರಿ 9, 2021

ಪರೀಕ್ಷಾ ಶುಲ್ಕ
ಸಾಮಾನ್ಯ, ಇಡಬ್ಲ್ಯುಎಸ್ ಮತ್ತು ಒಬಿಸಿ ವರ್ಗದ ಪುರುಷ ಅಭ್ಯರ್ಥಿಗಳು 600 ರೂ. ಆಗಿದ್ದು, ಉಳಿದವರಿಗೆ 500 ರೂಪಾಯಿ ಇರಲಿದೆ. ಮೂರು ಸುತ್ತುಗಳ ಪರೀಕ್ಷೆಗಳು ನಡೆಯಲಿದ್ದು, ಅದರ ಆಧಾರದ ಮೇಲೆ ಆಯ್ಕೆ ನಡೆಯಲಿದೆ.

ಮೊದಲ ಎರಡು ಸುತ್ತು ಲಿಖಿತ ಪರೀಕ್ಷೆಗಳಾಗಿದ್ದರೆ, ಕೊನೆಯ ಸುತ್ತಿನಲ್ಲಿ ಸಂದರ್ಶನ ನಡೆಯಲಿದೆ. ಟಯರ್ II ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನ ಅವರ ಕಾರ್ಯಕ್ಷಮತೆ ಮತ್ತು ಟಯರ್ I ಪರೀಕ್ಷೆಗಳಲ್ಲಿ ಅಂಕಗಳನ್ನ ಸಾಮಾನ್ಯಗೊಳಿಸುವ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆನ್ ಲೈನ್ʼನಲ್ಲಿ ಅರ್ಜಿ ಭರ್ತಿ ಮಾಡುವಾಗ ಅಭ್ಯರ್ಥಿಗಳು ಸಮಸ್ಯೆ ಎದುರಿಸುತ್ತಿದ್ದರೆ, ಅವರು ತಮ್ಮ ದೂರುಗಳನ್ನ helpdesk.bharti@nic.in ಅಥವಾ 022-61087529 ಗೆ ಕರೆ ಮಾಡಬಹುದು.

Thanks for reading ಉದ್ಯೋಗಕಾಂಕ್ಷಿಗಳಿಗೆ ಗುಡ್‌ ನ್ಯೂಸ್:‌ ʼಜನರಲ್ ಸೆಂಟ್ರಲ್ ಸರ್ವೀಸ್ʼನಲ್ಲಿ ಖಾಲಿ ಇರುವ ʼ2000 ಹುದ್ದೆʼಗಳಿಗೆ ಅರ್ಜಿ ಆಹ್ವಾನ..! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಉದ್ಯೋಗಕಾಂಕ್ಷಿಗಳಿಗೆ ಗುಡ್‌ ನ್ಯೂಸ್:‌ ʼಜನರಲ್ ಸೆಂಟ್ರಲ್ ಸರ್ವೀಸ್ʼನಲ್ಲಿ ಖಾಲಿ ಇರುವ ʼ2000 ಹುದ್ದೆʼಗಳಿಗೆ ಅರ್ಜಿ ಆಹ್ವಾನ..!

Post a Comment