'ಕರುನಾಡಲ್ಲಿ ಮ್ಯೂಟಂಟ್ ವೈರಸ್ ದಿಗಿಲು ' : ಜ. 1 ರಿಂದ ಶಾಲೆ ಆರಂಭಿಸುವ ಕುರಿತು ಶಿಕ್ಷಣ ಸಚಿವ 'ಸುರೇಶ್ ಕುಮಾರ್' ಹೇಳಿದ್ದೇನು..?

December 22, 2020

 


ಬೆಂಗಳೂರು : ಬ್ರಿಟನ್ ನ ಹೊಸ ತಳಿಯ ಕೊರೊನಾ ಸೋಂಕು ರಾಜ್ಯಕ್ಕೆ ಕಾಲಿಟ್ಟಿದೆ ಎನ್ನಲಾಗಿದ್ದು, ಕರುನಾಡಲ್ಲಿ ಆತಂಕದ ಛಾಯೆ ಮೂಡಿದೆ.

ಇದರ ನಡುವೆ ರಾಜ್ಯ ಸರ್ಕಾರ ಶಾಲೆ ಆರಂಭಕ್ಕೆ ದಿನಾಂಕ ನಿಗದಿ ಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಾವು ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ,

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸುರೇಶ್ ಕುಮಾರ್ ನಾವು ಇನ್ನು ಡಿಸೆಂಬರ್ 22 ನೇ ತಾರೀಖಿನಲ್ಲಿದ್ದೇವೆ. ನಮಗೆ ಇನ್ನೂ ಕೂಡ 9 ದಿನ ಕಾಲಾವಕಾಶವಿದೆ. ಕಾದು ನೋಡೋಣ, ಆತುರದಲ್ಲಿ ನಿರ್ಧಾಠ ತೆಗೆದುಕೊಳ್ಳುವುದಿಲ್ಲ ಎಂದರು. ಶಾಲೆ ಆರಂಭಕ್ಕೂ ಮುನ್ನ ಸಲಹಾ ಸಮಿತಿ ಸಭೆ ನಡೆಸಲಿದೆ.

ಸಭೆ ಬಳಿಕ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ, ಇದೆಲ್ಲಾ ಆದ ಬಳಿಕ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದು ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

Related Articles

Advertisement
Previous
Next Post »