ಪೋಷಕರೇ, ಈ ʼಸರ್ಕಾರಿ ಯೋಜನೆʼಯಡಿ ಪ್ರತಿದಿನ ʼ10 ರೂ. ಹೂಡಿದ್ರೂ, ನೀವು ನಿಮ್ಮ ಮಗಳ ಭವಿಷ್ಯವನ್ನ ರೂಪಿಸ್ಬೋದು

December 22, 2020
Tuesday, December 22, 2020

 


ಡಿಜಿಟಲ್‌ ಡೆಸ್ಕ್:‌ ನೀವು ಹೆಣ್ಣು ಮಗಳ ತಂದೆಯಾಗಿದ್ರೆ ಈ ಸುದ್ದಿ ನಿಮಗಾಗಿ. ಮೋದಿ ಸರ್ಕಾರ ಕೆಲವು ವರ್ಷಗಳ ಹಿಂದೆ ಹೆಣ್ಣುಮಕ್ಕಳ ಭವಿಷ್ಯ ಸುಧಾರಿಸಲು ಸುಕನ್ಯಾ ಸಮೃದ್ಧಿ ಯೋಜನೆಯನ್ನ ಪ್ರಾರಂಭಿಸಿದೆ . ಈ ಯೋಜನೆ ಆರಂಭವಾದಾಗಿನಿಂದ ಸಾಕಷ್ಟು ಜನಪ್ರಿಯವಾಗಿದ್ದು, ಯೋಜನೆಯ ವಿಶೇಷ ಏನೆಂದ್ರೆ, ಗರಿಷ್ಠ 2 ಹೆಣ್ಣು ಮಕ್ಕಳಿರುವ ಯಾವುದೇ ವ್ಯಕ್ತಿ, ತಮ್ಮ 10 ವರ್ಷದೊಳಗಿನ ಮಕ್ಕಳ ಭವಿಷ್ಯಕ್ಕಾಗಿ ಕೇವಲ 250 ರೂಪಾಯಿ ಮೂಲಕ ಖಾತೆ ತೆರೆಯುವುದರ ಮೂಲಕ ಆಕೆಯ ಭವಿಷ್ಯವನ್ನ ಉಜ್ವಲಗೊಳಿಸಬಹುದು. ಇನ್ನು ನೀವು ಇದ್ರಲ್ಲಿ ದಿನಕ್ಕೆ 10 ರೂಪಾಯಿಗಳನ್ನ ಮಾತ್ರ ಹೂಡಿಕೆ ಮಾಡುವ ಮೂಲಕ ದೊಡ್ಡ ಹೂಡಿಕೆಯನ್ನ ಪಡೆಯಬಹುದು.

ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮತ್ತು ಅವರ ಪೋಷಣೆ, ವಿವಾಹಕ್ಕಾಗಿ ಆರ್ಥಿಕ ಸಂಪನ್ಮೂಲಗಳನ್ನ ಒದಗಿಸುವ ಉದ್ದೇಶದಿಂದ ಈ ವಿಶೇಷ ಯೋಜನೆಯನ್ನ ಆರಂಭಿಸಲಾಗಿದೆ.

10 ವರ್ಷದೊಳಗಿನ ಹೆಣ್ಣು ಮಕ್ಕಳಿದ್ದರೆ, ಸುಕನ್ಯಾ ಸಮೃದ್ಧಿ ಯೋಜನೆಯಡಿ ಅವರ ಹೆಸರಿನಲ್ಲಿ ಖಾತೆ ತೆರೆಯಬಹುದು. ಜನನ ಪ್ರಮಾಣ ಪತ್ರವನ್ನ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ನೀಡಬೇಕು. ಇದರೊಂದಿಗೆ ಪಾಲಕರು ತಮ್ಮ ಭಾವಚಿತ್ರ, ವಿಳಾಸ ಹಾಗೂ ಗುರುತಿನ ಪತ್ರವನ್ನ ಸಲ್ಲಿಸಬೇಕು. ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಆದಾಯದೊಂದಿಗೆ ತೆರಿಗೆ ಉಳಿತಾಯದ ಲಾಭ ಪಡೆಯಬಹುದು.

ಕೇವಲ 250 ರೂಪಾಯಿಗಳೊಂದಿಗೆ ಸುಕನ್ಯಾ ಖಾತೆ ತೆರೆಯಿರಿ..!
ದೇಶದ ಯಾವುದೇ ಅಂಚೆ ಕಚೇರಿ ಮತ್ತು ಬ್ಯಾಂಕ್ ಮೂಲಕ ಸುಕನ್ಯಾ ಖಾತೆಯನ್ನ ತೆರೆಯಬಹುದು. ವಿಶೇಷ ಅಂದ್ರೆ, ಇದರಲ್ಲಿ ನೀವು ಕನಿಷ್ಠ 250 ರೂಪಾಯಿಯ ಲೆಕ್ಕದಲ್ಲಿ ಖಾತೆ ತೆರೆಯಬಹುದು. ಜನನ ಪ್ರಮಾಣ ಪತ್ರವನ್ನ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ನೀಡಬೇಕು. ಇದರೊಂದಿಗೆ ಪಾಲಕರು ತಮ್ಮ ಭಾವಚಿತ್ರ, ವಿಳಾಸ ಹಾಗೂ ಗುರುತಿನ ಪತ್ರವನ್ನ ಸಲ್ಲಿಸಬೇಕು. ಬೇಕಿದ್ದರೆ ಹೆಚ್ಚು ಹಣ ಠೇವಣಿ ಇಡಬಹುದು. ಈ ಯೋಜನೆಯಡಿ ನೀವು 21 ವರ್ಷಗಳ ಕಾಲ ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು.

ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಹೆಣ್ಣು ಮಗುವಿನ ಹೆಸರಲ್ಲಿ ಒಂದು ಖಾತೆ ತೆರೆಯಬಹುದು..!
ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆಯನ್ನ ಮಾತ್ರ ತೆರೆಯಬಹುದು. ತಂದೆ-ತಾಯಿ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು. ಅವಳಿ ಮಕ್ಕಳು ಅಥವಾ ಮೂವರು ಹುಡುಗಿಯರು ಒಟ್ಟಿಗೆ ಇದ್ದರೆ, ಮೂರನೇ ಹುಡುಗಿಗೂ ಇದರ ಲಾಭ ಸಿಗುತ್ತದೆ.ನೀವು ಎಷ್ಟು ಕಾಲ ಹೂಡಿಕೆ ಮಾಡಬೇಕು..!
ಮಗುವಿಗೆ 10 ವರ್ಷವಾಗುವವರೆಗೆ ಈ ಖಾತೆಯನ್ನ ತೆರೆಯಬಹುದು. ಆರಂಭಿಕ 14 ವರ್ಷಗಳ ಕಾಲ ಮೊತ್ತವನ್ನ ಖಾತೆಯಲ್ಲಿ ಜಮಾ ಮಾಡಬೇಕು. ಈ ಯೋಜನೆ 21 ವರ್ಷಗಳ ನಂತರ ಪಕ್ವವಾಗುತ್ತೆ. ಅಂದ್ರೆ, 21 ವರ್ಷಗಳ ನಂತರವಷ್ಟೇ ಹಣವನ್ನು ಹಿಂತೆಗೆದುಕೊಳ್ಳಬಹುದು. ಆದರೆ, ಮಗಳು 18 ವರ್ಷವಾದ ನಂತರ ಮದುವೆ ಮಾಡಿದರೆ, ಆ ಹಣವನ್ನ ಹಿಂಪಡೆಯಬಹುದು. ಇದನ್ನ ಹೊರತುಪಡಿಸಿ, 18ನೇ ವಯಸ್ಸಿನ ನಂತರ, ನೀವು ಮಗಳ ವಿದ್ಯಾಭ್ಯಾಸಕ್ಕಾಗಿ 50 ಪ್ರತಿಶತದಷ್ಟು ಹಣವನ್ನ ಹಿಂತೆಗೆದುಕೊಳ್ಳಬಹುದು.

ಪ್ರಮುಖ ದಾಖಲೆ..!
ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತೆರೆಯಲು ಅರ್ಜಿದಾರನು ತನ್ನ ಮಗಳ ಜನನ ಪ್ರಮಾಣ ಪತ್ರವನ್ನ ಅಂಚೆ ಕಚೇರಿ ಅಥವಾ ಬ್ಯಾಂಕ್ʼನಲ್ಲಿ ನಮೂನೆಯೊಂದಿಗೆ ಸಲ್ಲಿಸಬೇಕು. ಇದಲ್ಲದೆ, ಮಗು ಮತ್ತು ಪೋಷಕರ ಗುರುತಿನ ಚೀಟಿ (ಪಾನ್ ಕಾರ್ಡ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್) ಮತ್ತು ಅವರು ಎಲ್ಲಿ ನೆಲೆಸಿದ್ದಾರೆ ಎಂಬ ಪ್ರಮಾಣಪತ್ರ (ಪಾಸ್ ಪೋರ್ಟ್, ರೇಷನ್ ಕಾರ್ಡ್, ವಿದ್ಯುತ್ ಬಿಲ್, ದೂರವಾಣಿ ಬಿಲ್, ನೀರಿನ ಬಿಲ್) ಸಲ್ಲಿಸಬೇಕು.

ತೆರಿಗೆ ವಿನಾಯಿತಿ..!
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಲು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ಮೆಚ್ಯೂರಿಟಿಯಲ್ಲಿ ಪಡೆಯುವ ಹಣಕ್ಕೆ ತೆರಿಗೆ ಇರುವುದಿಲ್ಲ. ಇತರ ಎಲ್ಲ ಯೋಜನೆಗಳಿಗೆ ಹೋಲಿಸಿದರೆ ಇದು ಹೆಚ್ಚು ಬಡ್ಡಿಯನ್ನು ಪಡೆಯುತ್ತದೆ. ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಮದುವೆಗಾಗಿ ಉಳಿತಾಯ ಮಾಡಬಹುದು.

ಕೆಲವು ನಿಬಂಧನೆಗಳು ಮತ್ತು ಷರತ್ತುಗಳು:
* ಖಾತೆ ತೆರೆದ ದಿನದಿಂದ 21 ವರ್ಷ ತುಂಬಿದ ನಂತರ ಖಾತೆ ಪಕ್ವವಾಗುತ್ತದೆ. ಆದರೆ, 21 ವರ್ಷ ಪೂರ್ಣಗೊಳ್ಳುವ ಮೊದಲೇ ಮಗಳ ಮದುವೆಯಾದ್ರೆ ಖಾತೆಯೇ ಮುಚ್ಚಬೇಕು ಎಂಬ ಷರತ್ತು ಇದೆ. ಯಾವುದೇ ಹೆಚ್ಚಿನ ಕಾರ್ಯಾಚರಣೆ ಅನುಮತಿಸುವುದಿಲ್ಲ.
* ಈ ಮೊದಲು ಇಬ್ಬರು ಹೆಣ್ಣು ಮಕ್ಕಳು ಮಾತ್ರ ಖಾತೆ ತೆರೆಯಬಹುದಾಗಿತ್ತು. ಆದ್ರೆ, ಈಗ ನೀವು ಮೂರು ಖಾತೆಗಳನ್ನು ತೆರೆಯಬಹುದು. ಜನನ ಪ್ರಮಾಣ ಪತ್ರದಿಂದ ಅಫಿಡವಿಟ್ ಸಲ್ಲಿಸಬೇಕು.
* ಈಗ ಎರಡನೇ ಜನ್ಮದಲ್ಲಿ ಅವಳಿ ಹೆಣ್ಣು ಮಕ್ಕಳ ಜನನವಾದರೆ ಅಥವಾ ಮೊದಲ ಜನ್ಮದಲ್ಲೇ ಮೂರು ಹೆಣ್ಣು ಮಕ್ಕಳು ಹುಟ್ಟಿದರೆ ಮಗಳ ಹೆಸರಿನಲ್ಲಿ ಮೂರನೇ ಖಾತೆಯನ್ನ ತೆರೆಯಬಹುದು.
* ಒಂದು ವೇಳೆ 250 ರೂಪಾಯಿಯನ್ನ ಪ್ರತಿ ವರ್ಷ ಖಾತೆಯಲ್ಲಿ ಜಮಾ ಮಾಡದಿದ್ದಲ್ಲಿ, ಅದನ್ನು ಪೂರ್ವನಿಯೋಜಿತ ಖಾತೆ ಎಂದು ಪರಿಗಣಿಸಲಾಗುತ್ತದೆ. ಆದ್ರೆ, ಆ ಖಾತೆಯ ಬಡ್ಡಿ ದರವನ್ನ ಈಗಿರುವ ಠೇವಣಿ ಮೊತ್ತದ ಮೇಲೆ ಸೇರಿಸುವುದನ್ನ ಮುಂದುವರಿಸಲಾಗುತ್ತದೆ.
* ಮಗಳು 18 ವರ್ಷವಾಗುವವರೆಗೆ (ಹಿಂದಿನ ವಯಸ್ಸಿನ ಮಿತಿ 10 ವರ್ಷ) ಎಸ್ ಎಸ್ ವೈ ಖಾತೆಯನ್ನ ನಡೆಸಲು ಅವಕಾಶವಿರುವುದಿಲ್ಲ.
* ಸರ್ಕಾರದಿಂದ 100 ಪ್ರತಿಶತ ಭದ್ರತಾ ಗ್ಯಾರಂಟಿ ದೊರೆಯುತ್ತೆ.
* ಮೆಚ್ಯೂರಿಟಿ ನಂತರವೂ, ಅದೇ ಬಡ್ಡಿ ಮೊತ್ತವನ್ನ ಖಾತೆ ಮುಚ್ಚುವವರೆಗೆ ಠೇವಣಿಯ ಮೇಲೆ ಪಾವತಿಸಲಾಗುತ್ತದೆ.


Thanks for reading ಪೋಷಕರೇ, ಈ ʼಸರ್ಕಾರಿ ಯೋಜನೆʼಯಡಿ ಪ್ರತಿದಿನ ʼ10 ರೂ. ಹೂಡಿದ್ರೂ, ನೀವು ನಿಮ್ಮ ಮಗಳ ಭವಿಷ್ಯವನ್ನ ರೂಪಿಸ್ಬೋದು | Tags:

Next Article
« Prev Post
Previous Article
Next Post »

Related Posts

Show comments
Hide comments

1 komentar on ಪೋಷಕರೇ, ಈ ʼಸರ್ಕಾರಿ ಯೋಜನೆʼಯಡಿ ಪ್ರತಿದಿನ ʼ10 ರೂ. ಹೂಡಿದ್ರೂ, ನೀವು ನಿಮ್ಮ ಮಗಳ ಭವಿಷ್ಯವನ್ನ ರೂಪಿಸ್ಬೋದು

  1. Super ಒಳ್ಳೆ ಯೋಜನೆ ಎಲ್ರು ಇದರ ಸದುಪಯೋಗ ಪಡೆದುಕೊಳ್ಳಿ

    ReplyDelete