ಮಕ್ಕಳೇ ಬ್ಯಾಗ್, ಬುಕ್ ರೆಡಿ ಮಾಡ್ಕೊಳ್ಳಿ: ಜ.1ರಿಂದ ಸ್ಕೂಲ್ ಆರಂಭಕ್ಕೆ ಗ್ರೀನ್‍ಸಿಗ್ನಲ್..?

December 18, 2020
Friday, December 18, 2020

 


ಬೆಂಗಳೂರು: ಬರೋಬ್ಬರಿ 10 ತಿಂಗಳ ಬಳಿಕ ರಾಜ್ಯದಲ್ಲಿ ಶಾಲೆ ಹಾಗೂ ಪಿಯು ಕಾಲೇಜುಗಳ ಆರಂಭಕ್ಕೆ ಆರೋಗ್ಯ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಜನವರಿ 1ರಿಂದ ಶಾಲೆ ಹಾಗೂ ಪಿಯು ಕಾಲೇಜುಗಳನ್ನು ಆರಂಭಿಸಬಹುದು ಎಂದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿ ಶಾಲೆಗಳು ಹಾಗೂ ಪ್ರಥಮ, ದ್ವಿತೀಯ ಪಿಯು ಕಾಲೇಜುಗಳನ್ನು ತೆರೆಯಬಹುದು ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್‍ಗೆ ಪತ್ರ ಬರೆದಿದ್ದಾರೆ.


ಶಾಲೆಗಳಿಗೆ ಹೋಗಲು ಬ್ಯಾಗ್, ಬುಕ್ ರೆಡಿ ಮಾಡಿ

ಶಾಲೆಗಳನ್ನು ಆರಂಭಿಸಬಹುದು ಎಂದು ಆರೋಗ್ಯ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇನ್ನು ಉಳಿದಿರೋದು ಕೇವಲ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ತೀರ್ಮಾನ ಮಾತ್ರ.

Thanks for reading ಮಕ್ಕಳೇ ಬ್ಯಾಗ್, ಬುಕ್ ರೆಡಿ ಮಾಡ್ಕೊಳ್ಳಿ: ಜ.1ರಿಂದ ಸ್ಕೂಲ್ ಆರಂಭಕ್ಕೆ ಗ್ರೀನ್‍ಸಿಗ್ನಲ್..? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಮಕ್ಕಳೇ ಬ್ಯಾಗ್, ಬುಕ್ ರೆಡಿ ಮಾಡ್ಕೊಳ್ಳಿ: ಜ.1ರಿಂದ ಸ್ಕೂಲ್ ಆರಂಭಕ್ಕೆ ಗ್ರೀನ್‍ಸಿಗ್ನಲ್..?

Post a Comment