ತಾಜಾ ಸುದ್ದಿ

‘ಹಳ್ಳಿ ಹಕ್ಕಿ’ಗೆ ಗಾಳ ಹಾಕಿತೇ ‘ಬಿಗ್ ಬಾಸ್’ : ದೊಡ್ಮನೆಗೆ ಎಂಟ್ರಿಯಾಗ್ತಾರಾ..!

 

‘ಹಳ್ಳಿ ಹಕ್ಕಿ’ಗೆ ಗಾಳ ಹಾಕಿತೇ ‘ಬಿಗ್ ಬಾಸ್’ : ದೊಡ್ಮನೆಗೆ ಎಂಟ್ರಿಯಾಗ್ತಾರಾ..!

ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ 8ನೇ ಆವೃತ್ತಿ ಜನವರಿ 3ನೇ ವಾರದಿಂದ ಆರಂಭವಾಗಲಿದೆ ಎನ್ನಲಾಗ್ತಿದೆ. ಇತ್ತ ಸ್ಪರ್ಧಿಗಳ ಲಿಸ್ಟ್ ಗೆ ಸಿಕ್ಕಾಪಟ್ಟೆ ಊಹಾಪೋಹಗಳು ಹರಿದಾಡ್ತಿವೆ. ಡ್ರೋನ್ , ಪ್ರತಾಪ , ಟಿಕ್ ಟಾಕ್ ಸ್ಟಾರ್ ಗಳಾದ ಸೋನು ಗೌಡ, ಬಿಂದು ಗೌಡ , ಸುದ್ದಿವಾಹಿನಿಯ ಖ್ಯಾತ ನಿರೂಪಕಿ, ಜೊತೆಜೊತೆಯಲಿ ಧಾರಾವಾಹಿಯ ನಟ ಅನಿರುದ್ಧ, ಸರಿಗಮಪ ಹನುಮಂತ ಹೀಗೆ ಅನೇಕರ ಹೆಸರುಗಳ ಕೇಳಿ ಬರುತ್ತಿವೆ. ಇದೀಗ ರಾಜಕಾರಣಿಗಳ ಹೆಸರು ಸಹ ಕೇಳಿಬರುತ್ತಿದೆ. ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡು ಚಿರಪರಿಚಿತರಾಗಿರುವ ಪ್ರಮುಖ ರಾಜಕಾರಣಿಯಾಗಿರೋ ‘ಹಳ್ಳಿ ಹಕ್ಕಿ’ ಹೆಚ್ ವಿಶ್ವನಾಥ್ ಅವರು ರಾಜಕೀಯ ಪ್ರವೇಶಿಸಲಿದ್ದಾರೆ ಅನ್ನೋ ಗುಮಾನಿ ಎದ್ದಿದೆ.

ಹೌದು ಹಳ್ಳಿ ಹಕ್ಕಿ ವಿಶ್ವನಾಥ್ ಅವರು ಬಿಗ್ ಬಾಸ್ ಶೋನಲ್ಲಿ ಭಾಗವಹಿಸಬಹುದು ಎಂದೇ ಹೇಳಲಾಗ್ತಿದೆ.

Our Website : https://saakshatv.com/

Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel


Leave a Reply

Your email address will not be published.