ಆರೋಗ್ಯ

ಸ್ಪಟಿಕ ಧರಿಸುವುದರಿಂದ ಎಷ್ಟೆಲ್ಲಾ ಲಾಭಗಳಿದೆ ಗೊತ್ತಾ..?

 

ಧಾರ್ಮಿಕವಾಗಿ ಅತ್ಯಂತ ಪವಿತ್ರತೆ ಪಡೆದುಕೊಂಡ ವಸ್ತು ಅಂದರೆ, ಸ್ಪಟಿಕ. ಅಲ್ಲದೇ, ಇದನ್ನು ಧರಿಸಿದರೂ ಕೂಡ ಉತ್ತಮ ಲಾಭಗಳನ್ನ ಪಡೆದುಕೊಳ್ಳಬಹುದು. ಹಾಗಾದ್ರೆ ಸ್ಪಟಿಕ ಧರಿಸುವುದರಿಂದ ನಮಗಾಗುವ ಲಾಭಗಳು ಏನು ಅನ್ನೋದನ್ನ ತಿಳಿಯೋಣ ಬನ್ನಿ..

ಸ್ಪಟಿಕವನ್ನು ಧರಿಸಿದರೆ ಜಾತಕದಲ್ಲಿ ಚಂದ್ರದೋಷ ಅಥವಾ ನಕಾರಾತ್ಮಕ ಪರಿಣಾಮಗಳೇನಾದ್ರೂ ಇದ್ದರೆ, ನಿವಾರಣೆಯಾಗುತ್ತದೆ. ಸ್ಪಟಿಕವನ್ನ ಪ್ರತಿದಿನ ಧರಿಸಿದರೆ ಉತ್ತಮ. ಸ್ಪಟಿಕವು ಶುದ್ಧವಾಗಿದ್ದರೆ, ಬುದ್ಧಿಶಕ್ತಿ ಚುರುಕಾಗುತ್ತದೆ.

ಇನ್ನು ಜಾತಕದಲ್ಲಿ ತೊಂದರೆ ಇದ್ದಾಗ, ಅಥವಾ ಉತ್ತಮ ದಿನಗಳು ನಡೆಯದಿದ್ದಾಗ ಜನ ಹರಳಿನ ಉಂಗುರವನ್ನು ಧರಿಸುತ್ತಾರೆ.

ಇದರೊಂದಿಗೆ ನೀವು ಸ್ಪಟಿವನ್ನೂ ಒಮ್ಮೆ ಧರಿಸಿ ನೋಡಿ. ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ. ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ.

ಇನ್ನು ಯಾರು ಸ್ಪಟಿಕವನ್ನು ಧರಿಸುತ್ತಾರೋ, ಅವರು ತಮ್ಮ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಾರೆ. ಯಾವುದೇ ಸಮಸ್ಯೆ ಎದುರಾದರೂ ಅವುಗಳನ್ನ ಧೈರ್ಯದಿಂದ ಎದುರಿಸುವ ಶಕ್ತಿ ಹೊಂದುತ್ತಾರೆ.

ನೀವು ಕೆಲಸ ಮಾಡುವುದರಲ್ಲಿ ಉತ್ತಮರಾಗದೇ, ಕಚೇರಿಯಲ್ಲಿ ಅಧಿಕಾರಿಗಳಿಂದ ಬೈಗುಳ ತಿನ್ನುತ್ತಿದ್ದರೆ, ಒಮ್ಮೆ ಶುದ್ಧ ಸ್ಪಟಿಕದ ಹಾರವನ್ನು ಧರಿಸಿ ನೋಡಿ. ಯಾಕಂದ್ರೆ ಇದನ್ನು ಧರಿಸುವುದರಿಂದ ಧೈರ್ಯ ಬರುತ್ತದೆ. ಬುದ್ಧಿ ಶಕ್ತಿಯೂ ಉತ್ತಮವಾಗುತ್ತದೆ. ನಕಾರಾತ್ಮಕ ಶಕ್ತಿಯನ್ನ, ನಕಾರಾತ್ಮಕ ಯೋಚನೆಯನ್ನ ಕೂಡ ತಲೆಯಿಂದ ತೆಗೆದು ಹಾಕಲು ಅನುಕೂಲವಾಗಿದೆ.

ರಕ್ತದೊತ್ತಡ ಸೇರಿ ಹಲವು ಖಾಯಿಲೆಗಳನ್ನ ದೂರವಿಡಲು ಸ್ಪಟಿಕ ಸಹಾಯ ಮಾಡುತ್ತದೆ. ಅಲ್ಲದೇ ಸ್ಪಟಿಕ ಧರಿಸುವುದರಿಂದ ಸಿಟ್ಟು ಕೂಡ ಕಂಟ್ರೋಲಿನಲ್ಲಿರುತ್ತದೆ. ಆರ್ಥಿಕವಾಗಿ ನೀವು ಸಧೃಡವಾಗಲು ಇದು ಸಹಾಯ ಮಾಡುತ್ತದೆ. ಲಕ್ಷ್ಮೀ ದೇವಿಯ ಪೂಜೆ ಮಾಡುವಾಗ ಇದನ್ನು ಧರಿಸಿದರೆ ಉತ್ತಮ.

One Reply to “ಸ್ಪಟಿಕ ಧರಿಸುವುದರಿಂದ ಎಷ್ಟೆಲ್ಲಾ ಲಾಭಗಳಿದೆ ಗೊತ್ತಾ..?

Leave a Reply

Your email address will not be published.