ತಾಜಾ ಸುದ್ದಿ

ಸಾರಿಗೆ ನೌಕರರಿಗೆ 6 ನೇ ವೇತನ ಆಯೋಗ ಜಾರಿ.! : ಆರ್. ಅಶೋಕ್ ಹೇಳಿದ್ದೇನು.?

 

ಬೆಂಗಳೂರು : ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿರುವಂತ ರಾಜ್ಯದ ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರ ಮಣಿದಿದೆ. ನೌಕರರು ಇಟ್ಟಿದ್ದಂತ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ಸೂಚಿಸಿದೆ.

ಲಿಖಿತ ರೂಪದಲ್ಲಿ ಬೇಡಿಕೆ ಈಡೇರಿಕೆ ಪತ್ರ ನೀಡಿದ ನಂತ್ರವೇ ಮುಷ್ಕರ ಕೈಬಿಡುವುದಾಗಿ ಪಟ್ಟು ಹಿಡಿದ ಕಾರಣ, ಸರ್ಕಾರ ಬೇಡಿಕೆ ಪತ್ರ ಕೂಡ ನೀಡಿದೆ. ಇದರಿಂದ ರಾಜ್ಯದಲ್ಲಿ ಸಾರಿಗೆ ಸಂಚಾರ ಕೂಡ ಆರಂಭವಾಗಿದೆ.

ಸಾರಿಗೆ ನೌಕರರ ಬೇಡಿಕೆ ಬಗ್ಗೆ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವೇ ಇಲ್ಲ, ಯಾವುದೇ ಸರ್ಕಾರ ಬಂದರೂ ಮಾಡಲ್ಲ, ಸಾರಿಗೆ ನೌಕರರಿಗೆ 6 ನೇ ವೇತನ ಆಯೋಗ ಜಾರಿಗೆ ತರಲು ಆಗುವುದಿಲ್ಲ, ಇಂತಹ ಭರವಸೆಯನ್ನು ಸರ್ಕಾರ ನೀಡಿಲ್ಲ, 6 ನೇ ವೇತನ ಆಯೋಗದಂತೆ ಮಾರ್ಚ್ ಏಪ್ರಿ;ಲ್ ನಿಂದ ಸಂಬಳ ನೀಡುತ್ತೇವೆ ಎಂದು ಹೇಳಿಲ್ಲ, ಸರ್ಕಾರದ ಹಣಕಾಸು ಸ್ಥಿತಿ ನೋಡಿಕೊಂಡು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

Leave a Reply

Your email address will not be published.