ತಾಜಾ ಸುದ್ದಿ

ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಪಡಿತರ ಚೀಟಿದಾರರಿಗೆ 2,500 ರೂ. ನಗದು ಘೋಷಣೆ

 

ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ರಾಜ್ಯದ 2.6 ಕೋಟಿ ಅಕ್ಕಿ ಪಡಿತರ ಚೀಟಿದಾರರಿಗೆ ಉಡುಗೊರೆ ಮತ್ತು 2,500 ರೂಪಾಯಿ ನಗದು ಘೋಷಿಸಿದ್ದಾರೆ. 2021ರ ಜನವರಿ 4ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ನಗದು ಮತ್ತು ಪೊಂಗಲ್ ಗಿಫ್ಟ್ ಬ್ಯಾಗ್ ಗಳನ್ನು ವಿತರಿಸಲಾಗುವುದು. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಘೋಷಣೆ ಹೊರಬಿದ್ದಿದೆ.

ಮದುವೆ, ಹೊಸ ಉದ್ಯಮ ಗಳನ್ನು ಆರಂಭಿಸಲು ‘ಥಾಯ್’ ತಮಿಳು ಮಾಸವನ್ನು ಜನರು ವಿಶೇಷ ಸಂದರ್ಭವೆಂದು ಪರಿಗಣಿಸುತ್ತಾರೆ. ಪೊಂಗಲ್ ಕೂಡ ಇದೇ ತಿಂಗಳಲ್ಲಿ ಇರುತ್ತದೆ. ಈ ವರ್ಷ ಸಿಹಿ ಪೊಂಗಲ್ ತಯಾರಿಸಲು ಬಳಸುವ ಸಾಮಗ್ರಿಗಳನ್ನೊಳಗೊಂಡ ಒಂದು ಸಾವಿರ ರೂ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿ ವಿತರಣೆಗೂ ಮುನ್ನ ಫಲಾನುಭವಿಗಳ ಮನೆ ಬಾಗಿಲಿಗೆ ಟೋಕನ್ ವಿತರಿಸಿ, ಗಿಫ್ಟ್ ಹ್ಯಾಂಪರ್ ಪಡೆಯಲು ದಿನಾಂಕ ಮತ್ತು ಸಮಯ ನಿಗದಿ ಮಾಡಿ ಸರ್ಕಾರ ಟೋಕನ್ ವಿತರಿಸಲಿದೆ.

Leave a Reply

Your email address will not be published.