ಸಿನಿಮಾ ಲೋಕ

‘ವಿಷ್ಣುವರ್ಧನ್’ ಬಗ್ಗೆ ಮಾತನಾಡಿದ್ದು ತಪ್ಪಾಯ್ತು : ಕಣ್ಣೀರಿಡುತ್ತಲೇ ಕ್ಷಮೆಯಾಚಿಸಿದ ತೆಲುಗು ‘ನಟ ವಿಜಯ್ ರಂಗರಾಜು’

 

ಆಂಧ್ರಪ್ರದೇಶ : ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಕನ್ನಡಿದರು ವ್ಯಾಪಕ ಆಕ್ರೋಶ ವ್ಯಕ್ತ ಪಡಿಸಿದ್ದರು. ಇದರಿಂದ ಕೊನೆಗೂ ಎಚ್ಚೆತ್ತುಕೊಂಡಿರುವ ಅವರು, ಗಳಗಳ ಅಂತ ಅಳುತ್ತಲೇ ಕನ್ನಡಿಗರ ಕ್ಷಮೆ ಕೇಳಿದ್ದಾರೆ.

ಈ ಕುರಿತಂತೆ ಕ್ಷಮೆಯಾಚಿಸಿ ವೀಡಿಯೋ ಬಿಡುಗಡೆ ಮಾಡಿರುವಂತ ತೆಲುಗು ನಟ ವಿಜಯ್ ರಂಗರಾಜು, ನಾನು ವಿಷ್ಣುವರ್ಧನ್ ಬಗ್ಗೆ ತಪ್ಪಾಗಿ ಮಾತನಾಡಿದ್ದೇನೆ. ಹೀಗೆ ಮಾತನಾಡಬಾರದಾಗಿತ್ತು. ನನ್ನನ್ನು ಕ್ಷಮಿಸಿ ಬಿಡಿ ಎಂಬುದಾಗಿ ಕಣ್ಣೀರಿಡುತ್ತಲೇ ಕ್ಷಮೆ ಯಾಚಿಸಿದ್ದಾರೆ.

ಇನ್ನೂ ಮುಂದುವರೆದು ನಾನೀಗ ಕೊರೋನಾ ಸೋಂಕಿನಿಂದ ಬಳಲುತ್ತಿದ್ದೇನೆ. ವಿಷ್ಣು ಅಭಿಮಾನಿಗಳಲ್ಲಿ, ಕುಟುಂಬಸ್ಥರಲ್ಲಿ, ನಟ ಪುನೀತ್ ರಾಜ್ ಕುಮಾರ್, ಸುದೀಪ್, ಉಪೇಂದ್ರ ಅವರಲ್ಲಿ ಬೇಡಿಕೊಳ್ಳುತ್ತೇನೆ.

ನಾನು ಮಾಡಿದ್ದು ತಪ್ಪು. ನನ್ನನ್ನು ಕ್ಷಮಿಸಿ ಬಿಡಿ. ವಿಷ್ಣು ದಾದಾ ಬಗ್ಗೆ ಮಾತನಾಡಿದ್ದಕ್ಕೆ, ಶಿಕ್ಷೆ ಅನುಭವಿಸುತ್ತಿದ್ದೇನೆ ಎಂದು ಕ್ಷಮೆಯಾಚಿಸಿದ್ದಾರೆ.

Leave a Reply

Your email address will not be published.