ತಾಜಾ ಸುದ್ದಿ

ಮಕ್ಕಳ ಕೈಗೆ ಗ್ಯಾಡ್ಜೆಟ್ಸ್​​ ಕೊಡುವ ಮುನ್ನ ಎಚ್ಚರ: ಗೇಮಿಂಗ್ ಆಯಪ್​ಗಾಗಿ ಅಮ್ಮನ ಅಕೌಂಟ್​ನಿಂದ ₹11 ಲಕ್ಷ ಮಾಯ

 

6 ವರ್ಷದ ಬಾಲಕನೊಬ್ಬ ತನ್ನ ತಾಯಿಯ ಖಾತೆಯಿಂದ ಸುಮಾರು 11 ಲಕ್ಷ ರೂಪಾಯಿಯನ್ನು ತನ್ನ ಆನ್​ಲೈನ್​ ಗೇಮ್​ಗಾಗಿ ಬಳಸಿಕೊಂಡಿರುವ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ.

ನ್ಯೂಯಾರ್ಕ್​ನ ಜೆಸಿಕಾ ಎನ್ನುವ ಮಹಿಳೆ ತನ್ನ ಖಾತೆಯಿಂದ ಸುಮಾರು 11,79,241 ಲಕ್ಷ ರೂಪಾಯಿ ಕಟ್​ ಆಗಿದ್ದನ್ನು ನೋಡಿ ಶಾಕ್​ ಆಗಿದ್ದಾರೆ. ಮೊದಲು ತನ್ನ ಖಾತೆ ಹ್ಯಾಕ್​ ಆಗಿದೆ. ಸೂಕ್ತ ಕ್ರಮ ಅನುಸರಿಸಿದರೇ ಮತ್ತೆ ಹಣ ಸಿಗಬಹುದು ಎಂಬ ಭರವಸೆಯಲ್ಲಿದ್ದ ಜೆಸಿಕಾರಿಗೆ ತಮ್ಮ 6 ವರ್ಷದ ಮಗನೇ ಅಷ್ಟು ಹಣ ಬಳಸಿದ್ದಾನೆ ಎಂದು ತಿಳಿದು ಗಾಬರಿಗೊಂಡಿದ್ದಾರೆ. ಜೆಸಿಕಾ ಅವರ ಆರು ವರ್ಷದ ಮಗ ಜಾರ್ಜ್​ ಜಾನ್ಸ​ನ್​ ತಾಯಿಯ ಐಪ್ಯಾಡ್ ಬಳಸಿ ಗೇಮ್ ಆಡುತ್ತಿದ್ದ. ಈ ವೇಳೆ ಗೇಮ್​ನಲ್ಲಿನ ಆಯಡ್​​ ಆನ್​​ಗಳನ್ನ ಖರೀದಿ ಮಾಡಿದ್ದಾನೆ.

ಜುಲೈ 8 ರಂದು ಜೆಸಿಕಾ ಖಾತೆಯಿಂದ ₹1.8 ಲಕ್ಷ ಡೆಬಿಟ್​ ಆಗಿತ್ತು. ತನ್ನ ಅಕೌಂಟ್​ ಹ್ಯಾಕ್​ ಆಗಿದೆ ಎಂದು ತಿಳಿದ ಜೆಸಿಕಾ ದೂರು ದಾಖಲಿಸಿದ್ದರು.

ಈ ಬಗ್ಗೆ ತನಿಖೆ ಆರಂಭಿಸಿದಾಗ, ಆಕೆ ಐಪ್ಯಾಡ್​​ನಿಂದ ಇನ್-ಆಯಪ್​ ಖರೀದಿ ಮಾಡಿರುವ ಬಗ್ಗೆ ಗೊತ್ತಾಗಿದೆ. ಜಾನ್ಸನ್ ಗೇಮ್​​ ಆಡಲು ಅತೀಯಾಗಿ ಐಪ್ಯಾಡ್​ ಬಳಸುತ್ತಿದ್ದುದಲ್ಲದೇ ಗೇಮ್​​ ಮಧ್ಯೆ ಜಾಹಿರಾತುವಿನಲ್ಲಿ ತೋರಿಸುತ್ತಿದ್ದ ಆಯಡ್​ ಆನ್​​ಗಳನ್ನ ಖರೀದಿಸಿದ್ದಾನೆ ಎನ್ನಲಾಗಿದೆ. ತಮ್ಮ ಹಣವನ್ನು ವಾಪಾಸ್​ ನೀಡುವಂತೆ ಜೆಸಿಕಾ ಆಯಪಲ್​ ಕಂಪನಿಗೆ ಮನವಿ ಮಾಡಿದ್ದಾರೆ. ಆದರೆ 60 ದಿನದೊಳಗೆ ದೂರು ನೀಡದ ಕಾರಣ, ಆಕೆಯ ಮನವಿಯನ್ನು ಆಯಪಲ್​ ಕಂಪನಿ ನಿರಾಕರಿಸಿದೆ ಅಂತ ವರದಿಯಾಗಿದೆ.

Leave a Reply

Your email address will not be published.