ಶಿಕ್ಷಣ ಸುದ್ದಿ

ಬಿಗ್‌ ನ್ಯೂಸ್‌: ಜ.1ರಿಂದ ವಿದ್ಯಾಗಮ ಆರಂಭ, ರಾಜ್ಯ ಸರ್ಕಾರದಿಂದ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು : ಜ.1ರಿಂದ ವಿದ್ಯಾಗಮ ಆರಂಭವಾಗಲಿದ್ದು, ರಾಜ್ಯ ಸರ್ಕಾರದಿಂದ ಈ ಬಗ್ಗೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಅಂದ ಹಾಗೇ ಈ ಕಾರ್ಯಕ್ರವನ್ನು ಮೊದಲನೇ ಪಾಳಿಯನ್ನು ಬೆಳಿಗ್ಗೆ

ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ, ಎರಡನೇ ಪಾಳಿಯನ್ನು ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ಆರಂಭಿಸಲು ಸೂಚನೆ ನೀಡಲಾಗಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ದಿನ ಬಿಟ್ಟು ದಿನ ಮಧ್ಯಾಹ್ನ 2ರಿಂದ 4.30ರವರೆಗೆ, 1ರಿಂದ 3ನೇ ತರಗತಿ ಹಾಗೂ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳನ್ನು ಪರ್ಯಾಯ ದಿನಗಳಂದು ಮತ್ತು 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳನ್ನು ದಿನಬಿಟ್ಟು ದಿನ ಬೆಳಗಿನ ಪಾಳಿಯಲ್ಲಿ ಪಾಠ ಮಾರ್ಗದರ್ಶನ ನೀಡುವಂತೆ ತಿಳಿಸಿದೆ.

ವಿದ್ಯಾಗಮ ಯೋಜನೆ ಎಂದರೇನು?

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಗಳು ಇನ್ನು ಆರಂಭವಾಗಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ನಡೆಯುತ್ತಿವೆ. ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎಂಬ ಕಾರಣಕ್ಕೆ ಸರ್ಕಾರ ‘ವಿದ್ಯಾಗಮ’ ಯೋಜನೆ ಜಾರಿಗೊಳಿಸಿದೆ. ಕಾಲ್ಪನಿಕ ಕೋಣೆಯ ಪರಿಕಲ್ಪನೆಯಡಿ ಪಾಠ ಪ್ರವಚನ ಶುರುವಾಗಿದೆ. ಮೊಬೈಲ್‌ ಸೌಲಭ್ಯ ಇರುವ ಮಕ್ಕಳು, ಇಲ್ಲದಿರುವ ಮಕ್ಕಳ ಪಟ್ಟಿ ಮಾಡಲಾಗಿದೆ. ಯಾವ ಮಕ್ಕಳು ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಹಂತ ಹಂತವಾಗಿ ಪಾಠ ನಡೆಯುತ್ತಿದೆ. ಒಂದರಿಂದ ಐದನೇ ತರಗತಿ, 6ರಿಂದ 8 ಹಾಗೂ 9, 10 ನೇ ತರಗತಿಗಳವಿದ್ಯಾರ್ಥಿಗಳನ್ನು ವಿಂಗಡಣೆ ಮಾಡಲಾಗಿದೆ.

Leave a Reply

Your email address will not be published.