ತಾಜಾ ಸುದ್ದಿ

ನಿಮಗೆ ಗೊತ್ತೇ.? ಪ್ರತಿ ‘ಲೀಟರ್ ಪೆಟ್ರೋಲ್’ ಮೂಲ ದರ ಜಸ್ಟ್ ರೂ.31.78, ‘ಡೀಸೆಲ್’ ರೂ.32.98 ಮಾತ್ರ.!

 

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಬಹುತೇಕ ವಾಹನ ಸವರಾರು, ಇದೇನಪ್ಪಾ ಪೆಟ್ರೋಲ್ ದರ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿದೆ. ವಾಹನ ಮೈಲೇಜ್ ಗಿಂತ ದರವೇ ದುಬಾರಿಯಾಗಿದೆ ಎಂಬುದಾಗಿ ಗೊಣಗುತ್ತಿರುತ್ತೀರಿ. ಅಚ್ಚರಿ ಅಂದ್ರೇ.. ಪ್ರತಿ ಲೀಟರ್ ಪೆಟ್ರೋಲ್ ನ ಮೂಲ ದರ ರೂ.31.78 ಆದ್ರೇ.. ಲೀಟರ್ ಪೆಟ್ರೋಲ್ ಗೆ ತೆರಿಗೆ ಮೊತ್ತವೇ ರೂ.54 ಆಗಿದೆ. ಹೀಗಾಗಿ ನೀವು ಮಾರಾಟದರವಾಗಿ ರೂ.86.51 ನೀಡಿ ಪೆಟ್ರೋಲ್ ಖರೀದಿಸುವಂತಾಗಿದೆ.

ಹೌದು.. ಕಳೆದ ಸೋಮವಾರಕ್ಕೆ ಪ್ರತಿ ಲೀಟರ್ ಪೆಟ್ರೋಲ್ ದರ 86.51 ಆಗಿದೆ. ಇಂತಹ ಮಾರಾಟ ದರದಲ್ಲಿ ನೀವು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್ ಗೆ 54 ರೂಪಾಯಿಗಳಷ್ಟು ತೆರಿಗೆಯನ್ನೇ ಪಾವತಿಸುತ್ತೀರಿ. ವಾಸ್ತವವಾಗಿ ಪ್ರತಿ ಲೀಟರ್ ಮೂಲ ಪೆಟ್ರೋಲ್ ದರ ಮಾತ್ರ ಇರೋದು 31.78 ಆಗಿದೆ. ಡಿಸೇಲ್ ನ ಮೂಲ ದರ 32.98 ರೂಪಾಯಿ ಆಗಿದೆ.

ಅಂದಹಾಗೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದಾಯ ಮೂಲಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೂ ಒಂದಾಗಿದೆ.

ಕೇಂದ್ರ ತೆರಿಗೆಗಿಂತ, ರಾಜ್ಯಗಳ ತೆರಿಗೆಯೇ ಹೆಚ್ಚಾಗಿದೆ. ಈ ಮೂಲಕ ರಾಜ್ಯಗಳಲ್ಲಿ ವ್ಯಾಟ್ ಅಥವಾ ಸೇಲ್ಸ್ ಟ್ಯಾಕ್ಸ್, ಕೇಂದ್ರೀಯ ತೆರಿಗೆಗಳ ಭಾರೀ ಹೊರೆಯ ಒತ್ತಡವನ್ನು ಬಳಕೆದಾರರು ಹೊತ್ತುಕೊಳ್ಳಬೇಕಾಗಿದೆ.

ಇನ್ನೂ ರಾಜ್ಯ ಸರ್ಕಾರ ಕಳೆದ 2020ರ ಏಪ್ರಿಲ್ ನಿಂದ ನವೆಂಬರ್ ತನಕದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಎಟಿಎಫ್ ಇತ್ಯಾದಿಗಳ ಮಾರಾಟದಿಂದಾಗಿ ಒಟ್ಟು 9,163 ಕೋಟಿ ರೂಪಾಯಿ ತೆರಿಗೆಯ ಮೂಲಕ ಆದಾಯ ಗಳಿಸಿದೆ.

ಹೆಚ್ಚಿನ ಮಾಹಿತಿಗಾಗಿ www.suddimarga.in ಗೆ ಭೇಟಿ ನೀಡಿ 

               🙏ಧನ್ಯವಾದಗಳು🙏

Leave a Reply

Your email address will not be published.