ಆರೋಗ್ಯ

ತೂಕ ಇಳಿಸಲು ಸುಲಭ ದಾರಿ: ಊಟ ಮಾಡುವಾಗ ಈ ನಿಯಮ ಪಾಲಿಸಿದರೆ ತೂಕ ನಿಯಂತ್ರಿಸಬಹುದು

 

ತೂಕ ಇಳಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಆಸೆಯನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಹಾಗಾಗಿ ಊಟದ ವೇಳೆ ವಿವಿಧ ಭಕ್ಷ್ಯಗಳನ್ನು ಕಂಡಾಗ ಚೆನ್ನಾಗಿ ತಿನ್ನಬೇಕು ಎಂದೆನಿಸುತ್ತದೆ. ಅಂತವರು ತೂಕ ನಿಯಂತ್ರಿಸಲು ಸಹಾಯಮಾಡುವಂತಹ ಈ ಟಿಪ್ಸ್ ಫಾಲೋ ಮಾಡಿ.

*ಊಟ ಮಾಡುವಾಗ ಸಣ್ಣ ತಟ್ಟೆಯನ್ನು ಬಳಸಿ. ಆಗ ತಿನ್ನುವ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ತೂಕ ಇಳಿಸಿಕೊಳ್ಳಬಹುದು.

*ಅಡುಗೆಗೆ ಬಳಸಿದ ಎಣ್ಣೆಯ ಕಡೆಗೆ ಗಮನಕೊಡಿ. ಆಲಿವ್, ತೆಂಗಿನೆಣ್ಣೆ ಯಂತಹ ಆರೋಗ್ಯಕರ ಕೊಬ್ಬನ್ನು ಹೊಂದಿರುವ ಎಣ್ಣೆಯನ್ನು ಬಳಸಿದ ಅಡುಗೆಯನ್ನು ಸೇವಿಸಿ.

*ಊಟಕ್ಕೆ 30 ನಿಮಿಷಗಳ ಮೊದಲು ಸರಿಯಾಗಿ ನೀರನ್ನು ಕುಡಿಯಿರಿ. ಇದರಿಂದ ನೀವು ತಿನ್ನುವ ಆಹಾರವನ್ನು ನಿಯಂತ್ರಿಸಬಹುದು.

* ಊಟ ಮಾಡುವಾಗ ಟಿವಿ ಮುಂದೆ ಕುಳಿತುಕೊಳ್ಳಬೇಡಿ.

ಇದರಿಂದ ನಿಮ್ಮ ಗಮನ ಟಿವಿಯ ಕಡೆಗೆ ಇರುವುದರಿಂದ ಹೆಚ್ಚು ಊಟ ಸೇವಿಸುವ ಸಂಭವವಿರುತ್ತದೆ.

*ಊಟ ಮಾಡಿದ ತಕ್ಷಣ ಮಲಗಬೇಡಿ. ಇದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಹಾಗಾಗಿ ಮಲಗುವ 2 ಗಂಟೆಗಳ ಮೊದಲು ಆಹಾರವನ್ನು ಸೇವಿಸಿ.

Leave a Reply

Your email address will not be published.