ತಾಜಾ ಸುದ್ದಿ

ಜೀವನದಲ್ಲಿ ಉದ್ಧಾರವಾಗಬೇಕಂದ್ರೆ ಚಾಣಕ್ಯರ ಈ ಮಾತು ಕೇಳಿ..

 

ಚಾಣಕ್ಯ ನೀತಿಯನ್ನ ಜೀವನದಲ್ಲಿ ಅಳವಡಿಸಿಕೊಂಡವ ಅಭಿವೃದ್ಧಿಯಾಗೇ ಆಗುತ್ತಾನೆ ಅನ್ನೋದು ಹಲವರ ಅಭಿಪ್ರಾಯ. ಯಾಕಂದ್ರೆ ಚಾಣಕ್ಯ ನೀತಿ ಅಷ್ಟು ಅದ್ಭುತವಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡವ, ಶ್ರೀಮಂತನಾಗಲು ಇಚ್ಛಿಸುವವನು, ವೈವಾಹಿಕ ಜೀವನ ಸರಿದೂಗಿಸಲು ಪರದಾಡುವವನು, ಸಂಬಂಧವನ್ನು ಗಟ್ಟಿಯಾಗಿರಿಕೊಳ್ಳಲು ಇಚ್ಛಿಸುವವನು ಚಾಣಕ್ಯ ನೀತಿಯನ್ನ ಒದಲೇಬೇಕು. ಇಂದು ನಾವು ಶ್ರೀಮಂತರಾಗಲು ನಾವು ಹೇಗೆ ಬದುಕಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನು ಅಂತಾ ನೋಡೋಣ ಬನ್ನಿ..

ಮೊದಲನೇಯದಾಗಿ ಎಂದಿಗೂ ಸತ್ಯ ನುಡಿಯಿರಿ. ಸತ್ಯ ಮಾತಾಡುವವನಿಗೆ ಯಾವುದರ ಹೆದರಿಕೆಯೂ ಇರುವುದಿಲ್ಲ. ಯಾರು ಸತ್ಯವನ್ನೇ ಮಾತನಾಡುತ್ತ, ನಿಯತ್ತಾಗಿರುತ್ತಾರೆ.

ಅವರೇ ಜೀವನದಲ್ಲಿ ಅಭಿವೃದ್ಧಿ ಕಾಣುತ್ತಾರೆ. ಯಾರು ಸುಳ್ಳು ಮಾತನಾಡುತ್ತ, ಬೇರೆಯವರ ಬಗ್ಗೆ ಇಲ್ಲಸಲ್ಲದ್ದನ್ನ ಹೇಳುತ್ತ ಬದುಕುತ್ತಾರೋ, ಅವರು ಒಂದಲ್ಲ ಒಂದು ದಿನ ಫಲಿತಾಂಶವನ್ನ ಅನುಭವಿಸೇ ಅನುಭವಿಸುತ್ತಾರೆ.

ಎರಡನೇಯದಾಗಿ ಧರ್ಮವನ್ನ ಎಂದಿಗೂ ಪಾಲಿಸಬೇಕು. ಧರ್ಮಕ್ಕೆ ವಿರುದ್ಧವಾಗಿ ಯಾರು ನಡೆದುಕೊಳ್ಳುತ್ತಾರೋ, ಅವನೆಂದು ಉದ್ಧಾರವಾಗುವುದಿಲ್ಲ. ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ, ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ.

ಮೂರನೇಯದಾಗಿ ಬೇರೆಯವರ ಬಗ್ಗೆ ಇಲ್ಲಸಲ್ಲದ್ದನ್ನ, ಕೊಂಕು ಮಾತುಗಳನ್ನ ಆಡಬಾರದು. ತಲೆಗೆ ಸುರಿದ ನೀರು ಕಾಲಿಗೆ ಬಂದು ತಲುಪಲೇಬೇಕು ಎಂಬ ಮಾತಿನಂತೆ, ಯಾರು ಬೇರೆಯವರ ಬಗ್ಗೆ ಹಂಗಿಸಿ ಮಾತನಾಡುತ್ತಾರೋ, ಬೇರೆಯವರ ಲೋಪಗಳನ್ನ ಇತರರ ಬಳಿ ಹೇಳಿ, ಅಪಹಾಸ್ಯ ಮಾಡುತ್ತಾರೋ, ಮುಂದೊಂದು ದಿನ ಅವರಿಗೂ ಅದೇ ಗತಿ ಬರುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ. ಹಾಗಾಗಿ ಯಾರ ಬಗ್ಗೆಯೂ ಅಪಹಾಸ್ಯ ಮಾಡಬಾರದು ಎಂದು ಚಾಣಕ್ಯರು ಹೇಳಿದ್ದಾರೆ.

ನಾಲ್ಕನೇಯದಾಗಿ ಸಿಟ್ಟು ಮೈಗೂಡಿಸಿಕೊಳ್ಳಬಾರದು ಮತ್ತು ಸಿಟ್ಟಿನಲ್ಲಿದ್ದಾಗ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಮನುಷ್ಯನಿಗೆ ಬರುವ ಸಿಟ್ಟು ಅವನನ್ನೇ ಸುಟ್ಟು ಹಾಕುತ್ತದೆ. ಮತ್ತು ಸಿಟ್ಟಿನಲ್ಲಿ ತೆಗೆದುಕೊಳ್ಳುವ ನಿರ್ಧಾರ, ಮನುಷ್ಯನ ಜೀವನವನ್ನೇ ಹಾಳು ಮಾಡುತ್ತದೆ.

Leave a Reply

Your email address will not be published.