ತಾಜಾ ಸುದ್ದಿ

ಚಾಣಕ್ಯರ ಪ್ರಕಾರ ಪುರುಷ ಯಶಸ್ವಿಯಾಗುವುದು ಈ ರೀತಿಯಿದ್ದಾಗ ಮಾತ್ರ ಸಾಧ್ಯ..

ಚಣಕನ ಮಗ ಚಾಣಕ್ಯ ಅತೀ ಬುದ್ಧಿವಂತರೆನ್ನಿಸಿಕೊಂಡವರು. ಅವರ ನೀತಿಯನ್ನು ಅನುಸರಿಸಿದವನು ಉದ್ಧಾರವಾಗೇ ಆಗುತ್ತಾನೆ ಎನ್ನಲಾಗುತ್ತದೆ. ಅಂಥ ಚಾಣಕ್ಯರು ಯಾವ ಪುರುಷ ತನ್ನ ಪತ್ನಿ ಮತ್ತು ಕುಟುಂಬದೊಂದಿಗೆ ಸಂತೋಷದಿಂದಿರುತ್ತಾನೋ, ಅವನು ಯಶಸ್ಸನ್ನು ಕಾಣುತ್ತಾನೆ ಎಂದಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಚಾಣಕ್ಯರ ಪ್ರಕಾರ ಯಾವ ವ್ಯಕ್ತಿಯ ವೈವಾಹಿಕ ಜೀವನ ಉತ್ತಮವಾಗಿರುತ್ತದೆಯೋ, ಆ ವ್ಯಕ್ತಿಗೆ ಜೀವನದಲ್ಲಿ ಯಶಸ್ಸು ಸಾಧಿಸುವುದು ಕಷ್ಟವಲ್ಲ. ಯಾಕಂದ್ರೆ ಅವನ ಮನಸ್ಸು ಸಕಾರಾತ್ಮಕ ಯೋಚನೆಗಳಿಂದ ತುಂಬಿರುತ್ತದೆ. ಹಾಗಾಗಿ ಆತ ತನ್ನ ಶ್ರಮದಿಂದ, ಒಳ್ಳೆಯತನದಿಂದ ಜೀವನದಲ್ಲಿ ಯಶಸ್ಸು ಸಾಧಿಸುತ್ತಾನೆ.


ಆದ್ರೆ ಯಾರ ವೈವಾಹಿಕ ಜೀವನ ಉತ್ತಮವಾಗಿರುವುದಿಲ್ಲವೋ, ಅವನು ಸದಾ ಚಿಂತೆಯಲ್ಲಿರುತ್ತಾನೆ. ಅವನ ಮನಸ್ಸು ಸರಿಯಾಗಿರುವುದಿಲ್ಲ. ಕೆಲವೊಮ್ಮೆ ಕೆಲವರು ದುಷ್ಚಟಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಂಥ ಮನುಷ್ಯ ಜೀವನದಲ್ಲಿ ಎಂದೂ ಉದ್ಧಾರವಾಗುವುದಿಲ್ಲ. ಮತ್ತು ಅವನಿಗೆ ಎಷ್ಟೇ ಜ್ಞಾನವಿದ್ದರೂ ಅದು ಪ್ರಯೋಜನಕ್ಕೆ ಬರುವುದಿಲ್ಲ


Leave a Reply

Your email address will not be published.