ಬೆಂಗಳೂರು,ಡಿ.8-ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿ ಇರುವ ಸಿ ಗ್ರೂಪ್ ಹುದ್ದೆಗಳನ್ನು ನೇರನೇಮಕಾತಿ ಮೂಲಕ ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ಅವಯಲ್ಲಿ ಜೆಡಿಎಸ್ನ ಎಚ್.ಕೆ.ಕುಮಾರಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರೂಪ್ ಸಿ ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಗ್ರೂಪ್ ಸಿ ವೃಂದದ ಡಾಟಾ ಎಂಟ್ರಿ ಆಪರೇಟರ್ ಹುದ್ದೆಯನ್ನು ಬಾಹ್ಯಮೂಲ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡಲಾಗುತ್ತದೆ ಎಂದರು.
ಪ್ರವಾಸೋದ್ಯಮ ಇಲಾಖೆಯಲ್ಲಿ ಗ್ರೂಪ್ ಎ-15, ಗ್ರೂಪ್ ಬಿ-16, ಗ್ರೂಪ್ ಸಿ-170 ಹಾಗೂ ಗ್ರೂಪ್ ಡಿ-44 ಹುದ್ದೆಗಳು ಖಾಲಿ ಇವೆ.
# ತ್ಯಾಜ್ಯ ವಿದ್ಯುತ್ ಘಟಕ ಎರಡು ವರ್ಷದಲ್ಲಿ ಕಾರ್ಯಾರಂಭ
ಬಿಬಿಎಂಪಿ ವತಿಯಿಂದ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳು ಎರಡು ವರ್ಷದೊಳಗೆ ಕಾರ್ಯಾರಂಭ ಮಾಡಲಿವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಗೆ ಇಂದು ತಿಳಿಸಿದರು.
ಪ್ರಶ್ನೋತ್ತರ ಅವಯಲ್ಲಿ ಕಾಂಗ್ರೆಸ್ನ ಸದಸ್ಯ ಎನ್.ಎ.ಹ್ಯಾರೀಸ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ಗೃಹಬಳಕೆಯಿಂದ ದಿನವೊಂದಕ್ಕೆ 4ರಿಂದ 4.5ಸಾವಿರ ಹಾಗೂ ವಾಣಿಜ್ಯ ಬಳಕೆಯಿಂದ 5 ಸಾವಿರ ಮೆಟ್ರಿಕ್ ಟನ್ಗೂ ಅಕ ಕಸ ಸಂಗ್ರಹಣೆಯಾಗುತ್ತದೆ. ಇದನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ವಿದ್ಯುತ್ ಉತ್ಪಾದನೆ ಮಾಡಲು 6 ಕಂಪನಿಗಳಿಂದ ಟೆಂಡರ್ ಕರೆಯಲಾಗಿದೆ ಎಂದರು.
ವಿದ್ಯುತ್ ಉತ್ಪಾದನಾ ಘಟಕಗಳು ಕಾರ್ಯಾರಂಭ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಸದ್ಯಕ್ಕೆ ಎರಡು ಘಟಕಗಳು ಕಾರ್ಯಾರಂಭ ಮಾಡಬಹುದು. ಎರಡು ವರ್ಷದ ಅವಯೊಳಗೆ ಎಲ್ಲ ಘಟಕಗಳು ಕೆಲಸ ಮಾಡಲಿವೆ ಎಂದು ತಿಳಿಸಿದರು.
ಕೆಪಿಟಿಸಿಎಲ್ ವತಿಯಿಂದ ಬಿಡದಿ ಬಳಿ ಪ್ರತಿದಿನ 600 ಮೆಟ್ರಿಕ್ ಟನ್ ಸಾಮಥ್ರ್ಯದ ಘನತ್ಯಾಜ್ಯವನ್ನು ಸಂಸ್ಕರಿಸಿ 11.50 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸುವ 360 ಕೋಟಿಗೆ ಅನುಮೋದನೆ ನೀಡಲಾಗಿದೆ.
ಸಾರ್ವಜನಿಕ, ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಸತಾರೆಮ್ ಎಂಟರ್ಪ್ರೈಸ್ ಪ್ರೈವೆಟ್ ಸಂಸ್ಥೆಯು ಪ್ರತಿದಿನ ಒಂದು ಸಾವಿರ ಮೆಟ್ರಿಕ್ ಟನ್ ತ್ಯಾಜ್ಯ ಉಪಯೋಗಿಸಿ ಕನ್ನಲ್ಲಿ ಬಳಿ 12 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ತೆರೆಯಲಿದೆ.
ಪಿಪಿಪಿ ಮಾದರಿಯಲ್ಲಿ ಬಿಬಿಎಂಪಿಯಿಂದ ಮೇ ಇಂಡಿಯಮ್ ಸಂಸ್ಥೆಯಿಂದ 300 ಮೆಟ್ರಿಕ್ ಟನ್ ಘನತ್ಯಾಜ್ಯವನ್ನು ಉಪಯೋಗಿಸಿ ದೊಡ್ಡಬಿದರಕಲ್ಲು ಬಳಿ 4 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ 12 ತಿಂಗಳಲ್ಲಿ ಪೂರ್ಣಗೊಳಿಸಲಿದೆ ಎಂದರು.
ಪಿಪಿಪಿ ಮಾದರಿಯಲ್ಲಿ ಮಾವಳ್ಳಿಪುರ 1 ಸಾವಿರ ಮೆಟ್ರಿಕ್ ಟನ್ನಷ್ಟು ಘನತ್ಯಾಜ್ಯ ಸಂಸ್ಕರಿಸಿ ಫರ್ಮ್ಗ್ರೀನ್ ಎಂಬ ಸಂಸ್ಥೆಯು ಕಾಂಪೋಸ್ಟ್ ನ್ಯಾಚುರಲ್ ಗ್ಯಾಸ್ ಉತ್ಪಾದಿಸಲು ಮುಂದೆ ಬಂದಿದೆ ಎಂದರು. ಮಾರನೇÀಹಳ್ಳಿ ಬಳಿ 600 ಮೆಟ್ರಿಕ್ ಟನ್ ಘನತ್ಯಾಜ್ಯವನ್ನು ಮೆಕ್ಸಸ್ ನೋವಸ್ ಸಂಸ್ಥೆಯು, ಮಾವಳ್ಳಿಪುರ ಘಟಕದಲ್ಲಿ 500 ಮೆಟ್ರಿಕ್ ಟನ್ ತ್ಯಾಜ್ಯ ಉಪಯೋಗಿಸಿ 8 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಎನ್ಇಜಿ ಸಂಸ್ಥೆ ಮುಂದೆ ಬಂದಿದೆ ಎಂದು ಹೇಳಿದರು.
ಮುಂಬರುವ ಎರಡು ವರ್ಷಗಳಲ್ಲಿ ಪ್ರತಿದಿನ ಸುಮಾರು 4000 ಮೆಟ್ರಿಕ್ ಟನ್ ಘನತ್ಯಾಜ್ಯದಿಂದ ವಿದ್ಯುತ್/ಸಿಎನ್ಜಿ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ www.suddimarga.in ಗೆ ಭೇಟಿ ನೀಡಿ
🙏ಧನ್ಯವಾದಗಳು 🙏