ಲಖನೌ: ಉತ್ತರಪ್ರದೇಶದ ಗೋರಖ್ಪುರದಲ್ಲಿ ಅಪರೂಪದ, ಯಾರೂ ಊಹೆಯನ್ನೂ ಮಾಡದ ಘಟನೆಯೊಂದು ನಡೆದಿದೆ. ಒಂದೇ ಮಂಟಪದಲ್ಲಿ ತಾಯಿ ಮತ್ತು ಮಗಳು ಮದುವೆ ಮಾಡಿಕೊಂಡಿದ್ದಾರೆ.
ಗೋರಖ್ಪುರದ ಪಿಪ್ರೌಲಿ ಬ್ಲಾಕ್ನಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಅಡಿಯಲ್ಲಿ 63 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭ ನಡೆದಿದೆ. ಈ ವೇಳೆ 53 ವರ್ಷದ ಮಹಿಳೆ ಹಾಗೂ ಆಕೆಯ 27 ವರ್ಷದ ಪುತ್ರಿ ಒಂದೇ ಸಮಯಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಧವೆ ಮಹಿಳೆ ತನ್ನ ಗಂಡನ ಕಿರಿಯ ಸಹೋದರನನ್ನು ಮದುವೆಯಾಗಿದ್ದಾರೆ. ಇದೇ ಸಮಾರಂಭದಲ್ಲಿ ಅವರ ಪುತ್ರಿಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಅಂತ ವರದಿಯಾಗಿದೆ.