ಉತ್ತಮ ಆರೋಗ್ಯಕ್ಕಾಗಿ ತರಕಾರಿ ಮತ್ತು ಹಣ್ಣು ಸೇವನೆ ಅತ್ಯಗತ್ಯ. ಅದರಲ್ಲೂ ಸೊಪ್ಪು ಸೇವನೆಯಿಂದ ಹಲವು ಸಮಸ್ಯೆಗಳು ಪರಿಹಾರ ಆಗುತ್ತದೆ. ಅದರಲ್ಲೂ ಮಹಿಳೆಯರ ಸೌಂದರ್ಯ ಸಮಸ್ಯೆಗಳಿಗೂ ಪರಿಹಾರ ಲಭ್ಯ.
ಸೊಪ್ಪುಗಳಲ್ಲಿ ಪಾಲಕ್ ಸೊಪ್ಪಿನಲ್ಲಿ ಹಲವು ರೀತಿಯ ವಿಶಿಷ್ಟ ಅಡುಗೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಷಯ. ಪಾಲಕ್ ಸೊಪ್ಪಿನಲ್ಲಿ ಅತಿಹೆಚ್ಚಿನ ಪೋಷ್ಠಿಕಾಂಶ ಇದೆ. ಕಬ್ಬಿಣ, ವಿಟಮಿನ್-ಎ ಮತ್ತು ಸಿ ಪ್ರೋಟಿನ್ನಂತಹ ಅನೇಕ ಸತ್ವಗಳನ್ನು ಪಾಲಕ್ ಸೋಪ್ಪು ಒಳಗೊಂಡಿದ್ದು, ಇದರ ಸೇವನೆಯಿಂದ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು. ಅಧಿಕ ರಕ್ತದೊತ್ತಡ, ದೃಷ್ಠಿಹೀನತೆ, ಮುಖದ ಮೊಡವೆ, ದೇಹದ ಬೊಜ್ಜು ಕರಗಿಸುವಿಕೆ, ಕೂದಲು ಉದುರುವಿಕೆಯಂತಹ ಅನೇಕ ಸಮಸ್ಯೆಗಳಿಗೂ ಪಾಲಕ್ ಸೋಪ್ಪು ರಾಮಬಾಣ.
ಪಾಲಕ್ ಸೊಪ್ಪನ್ನು ಬೇಯಿಸದೆ ಹಾಗೆ ತಿನ್ನುವುದರಿಂದ ದೇಹದಲ್ಲಿ ರಕ್ತ ಉತ್ಪತ್ತಿಯಾಗುತ್ತದೆ.
ಅಧಿಕ ರಕ್ತದೊತ್ತಡ ಇರುವವರು ಊಟದ ಜೊತೆಗೆ ಪಾಲಕ್ ಸೋಪ್ಪು ಸೇವಿಸುವುದರಿಂದ ರಕ್ತದೊತ್ತಡ ಬಹುಬೇಗ ನಿವಾರಿಸಕೊಳ್ಳಬಹುದು. ಸಂದಿವಾತಕ್ಕೂ ಇದು ಉಪಯುಕ್ತವಾಗಿದೆ.
ಮುಖ್ಯವಾಗಿ ಮಹಿಳೆಯರಿಗೆ ಕಾಡುವ ಮೊಡವೆ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಪಾಲಕ್ ಸೋಪ್ಪು ಸೇವನೆಯಿಂದಾಗಿ ಚರ್ಮ ಶುದ್ಧವಾಗುತ್ತದೆ. ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುತ್ತದೆ. ಮೂಖದ ಮೊಡವೆಗಳನ್ನು ಹೊಗಲಾಡಿಸಲು ಪಾಲಕ್ ಸೋಪ್ಪಿನ ಫೇಸ್ ಪ್ಯಾಕ್ ಮಾಡೊಕೊಂಡು 20-30 ನಿಮಿಷ ಹಾಗೆ ಬಿಟ್ಟು ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳುವುದರಿಂದ ಮೊಡವೆ ಮುಕ್ತ ಮುಖ ನಿಮ್ಮದಾಗುತ್ತದೆ. ಜೊತೆಗೆ ಕಾಂತಿಯುತವಾಗಿ ಹೊಳೆಯುತ್ತದೆ.
ಈ ಸೊಪ್ಪು ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶವನ್ನು ಹೊಂದಿದೆ. ಆದರಿಂದ ನಾವು ಸೇವಿಸುವ ಆಹಾರವನ್ನು ಉತ್ತಮವಾಗಿ ಜೀರ್ಣವಾಗಿಸುವಲ್ಲಿ ಸಹಕಾರಿಯಾಗಿದೆ. ಪಾಲಕ್ ಸೋಪ್ಪಿನಲ್ಲಿ ಕ್ಯಾರೋಟಿನೈಡ್ ಎಂಬ ಅಂಶವು ಇರುವುದರಿಂದ ದೇಹದ ಕೊಬ್ಬು ಕರಗಲು ಸಹ ಇದು ಸಹಾಯವಾಗಿದೆ. ಪಾಲಕ್ ಸೋಪ್ಪನ್ನು ನೀರಿನಲ್ಲಿ ಕುದಿಸಿ, ಆ ನೀರನ್ನು ಕೂದಲಿಗೆ ಹಚ್ಚಿ 15 ನಿಮಿಷ ಹಾಗೆ ಬಿಟ್ಟು ನಂತರ ಸ್ನಾನ ಮಾಡುವುದರಿಂದ ಕೂದಲು ಕೂಡ ಹೊಳೆಯುತ್ತವೆ.