ಬರೇಲಿ: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುತ್ತಾರೆ. ಇಲ್ಲೊಬ್ಬ ವ್ಯಕ್ತಿ ಮೋಸ ಹೋದ ಬಗೆ ಕೇಳಿದರೆ ನಿಮಗೆ ಆಶ್ಚರ್ಯವಾಗದೆ ಇರಲಾರದು. ವ್ಯಾಪಾರಿಯೊಬ್ಬ ಬರೀ ಒಂದು ಬಲ್ಬ್ಗೆ 9 ಲಕ್ಷ ರೂಪಾಯಿ ಕೊಟ್ಟು ಮೋಸ ಹೋಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಬಲೇರಿಯ ನಿತೇಶ್ ಮಲ್ಹೋತ್ರಾ ಒಬ್ಬ ವ್ಯಾಪಾರಿ. ಲಾಕ್ಡೌನ್ ಸಮಯದಲ್ಲಿ ನಷ್ಟ ಕಂಡ ಆತ ಇತ್ತೀಚೆಗೆ ಬೇಸರದಿಂದಲೇ ಇರುತ್ತಿದ್ದ. ಕಳೆದ ಕೆಲವು ದಿನದಿಂದ ವ್ಯಾಪಾರ ಚೆನ್ನಾಗಾಗುತ್ತಿದೆಯೆಂದು ಸ್ವಲ್ಪ ಸಂತಸದಲ್ಲಿದ್ದ.
ಮೊದಲಿಗೆ ನಿತೇಶ್ ಆತನ ಮಾತನ್ನು ನಂಬಲಿಲ್ಲವಾದರೂ ಕೊನೆ ಕೊನೆಗೆ ನಂಬಿಕೆ ಹುಟ್ಟಿದೆ. ಅದೃಷ್ಟ ಬದಲಾಗಬಹುದಲ್ಲವೇ ಎನ್ನುವ ಆಸೆ ಹುಟ್ಟಿದೆ. ಅದರಂತೆ ಆತ ಕರಾಮತಿ ಬಲ್ಬ್ನ್ನು 9 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದಾನೆ. ಅಯಸ್ಕಾಂತಗಳನ್ನು ಬಳಸಿ ಮಾಡಲಾಗಿದ್ದ ಆ ಬಲ್ಬ್ ಕೆಲವು ವಿಶೇಷ ಗುಣಗಳನ್ನು ಹೊಂದಿದ್ದರಿಂದ ಅದನ್ನು ಆತ ನಂಬಿದ್ದಾನೆ ಕೂಡ.
ಆದರೆ ಬರುಬರುತ್ತ ಬಲ್ಬ್ನ ನಿಜಾಂಶ ನಿತೇಶ್ಗೆ ಗೊತ್ತಾಗಿದೆ. ಇದು ಒಂದು ಮಾಮೂಲಿ ಬಲ್ಬ್ ಎನ್ನುವುದು ಅರಿವಿಗೆ ಬಂದ ನಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಈತನಿಗೆ ಬಂದ ಕರೆಯ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ಚುಟ್ಕನ್ ಖಾನ್, ಮಸೂಮ್ ಖಾನ್ ಮತ್ತು ಇರ್ಫಾನ್ ಖಾನ್ ಹೆಸರಿನ ಮೂರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.